ಮಂಗಳೂರು : ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗಣ ಇವರ ವತಿಯಿಂದ ‘ವರ್ಕಾರಿ’ ನೃತ್ಯ ಪ್ರದರ್ಶನವನ್ನು ದಿನಾಂಕ 01 ಫೆಬ್ರುವರಿ 2026ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ವರ್ಕಾರಿ/ಅಭ್ಯಂಗ್ಸ್ ವನ್ನು ವ್ಯಾಪಕವಾಗಿ ಅಭ್ಯಾಸಿಸಿ ಭರತನಾಟ್ಯ ಸಂಗ್ರಹಕ್ಕೆ ತಂದಿರುವ ಅದ್ಬುತ ಕಲಾವಿದೆ ದಿವ್ಯಾ ರವಿ ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

