ಉಡುಪಿ : ರಜನಿ ಮೆಮೋರಿಯಲ್ ಟ್ರಸ್ಟ್ (ರಿ.) ಉಡುಪಿ ಪ್ರಸ್ತುತ ಪಡಿಸುವ ವಸಂತಲಕ್ಷ್ಮೀ ಹೆಬ್ಬಾರ್ ಸ್ಮರಣಾರ್ಥ ಸಂಗೀತ, ನೃತ್ಯ ಮತ್ತು ಕಲಾ ಉತ್ಸವವಾದ ‘ವಸಂತಲಕ್ಷ್ಮೀ ಸಂಸ್ಮರಣೆ’ಯು ದಿನಾಂಕ 01-11-2023ರಿಂದ 05-11-2023ರವರೆಗೆ ಉಡುಪಿಯ ಅದಿತಿ ಆರ್ಟ್ ಗ್ಯಾಲರಿ, ಇಂದ್ರಾಳಿಯ ಹಯಗ್ರೀವ ನಗರದ ಲತಾಂಗಿ ಮತ್ತು ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪಗಳಲ್ಲಿ ನಡೆಯಲಿದೆ.
ದಿನಾಂಕ 01-11-2023ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿಯ ಅದಿತಿ ಆರ್ಟ್ ಗ್ಯಾಲರಿಯಲ್ಲಿ ‘ವಸಂತ ಕಲಾ’ ವಸಂತಲಕ್ಷ್ಮೀ ಹೆಬ್ಬಾರ್ ಇವರ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.
ದಿನಾಂಕ 02-11-2023ರಂದು ಸಂಜೆ ಗಂಟೆ 5-30ಕ್ಕೆ ಇಂದ್ರಾಳಿಯ ಹಯಗ್ರೀವ ನಗರದ ಲತಾಂಗಿಯಲ್ಲಿ ಚಾರುಲತಾ ಚಂದ್ರಶೇಕರ್ ಇವರಿಂದ ವೀಣಾ ವಾದನ ನಡೆಯಲಿದೆ.
ದಿನಾಂಕ 03-11-2023ರಂದು ಸಂಜೆ ಗಂಟೆ 5-30ಕ್ಕೆ ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರಾರ್ಥನಾ ಬಿ. ಇವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ನಡೆಯಲಿದ್ದು, ವಯೋಲಿನ್ ನಲ್ಲಿ ಅನನ್ಯ ಸುರೇಶ್ ಹಾಗೂ ಮೃದಂಗದಲ್ಲಿ ಅಚಿಂತ್ಯ ಕೃಷ್ಣ ಸಾಥ್ ನೀಡಲಿದ್ದಾರೆ. ರಶ್ಮಿ ಉಡುಪರವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 04-11-2023ರಂದು ಸಂಜೆ ಗಂಟೆ 5-30ಕ್ಕೆ ಸಿದ್ಧಾರ್ಥ ಬೆಳ್ಮಣ್ಣು ಇವರಿಂದ ‘ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ’ ನಡೆಯಲಿದ್ದು, ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್ ಹಾಗೂ ತಬ್ಲಾದಲ್ಲಿ ಸುಮಿತ್ ನಾಯಕ್ ಸಾಥ್ ನೀಡಲಿದ್ದಾರೆ.
ದಿನಾಂಕ 05-11-2023ರಂದು ಸಂಜೆ ಗಂಟೆ 5-30ಕ್ಕೆ ರಾಮಕೃಷ್ಣನ್ ಮೂರ್ತಿಯವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ನಡೆಯಲಿದ್ದು, ವಯೋಲಿನ್ ನಲ್ಲಿ ಎಲ್.ರಾಮಕೃಷ್ಣನ್ ಹಾಗೂ ಮೃದಂಗದಲ್ಲಿ ಎನ್.ಸಿ. ಭಾರಧ್ವಜ್ ಸಾಥ್ ನೀಡಲಿದ್ದಾರೆ.