ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 136ನೇ ಸರಣಿಯಲ್ಲಿ ಅಮೇರಿಕಾದ ನಿವಾಸಿಯಾದ ಕು. ವೇದ್ಯ ಸ್ಫೂರ್ತಿ ಕೊಂಡ ಇವರಿಂದ ಬಹಳ ಮನೋಜ್ಞವಾದ ಹಾಗೂ ಶುದ್ಧ ಸಾಂಪ್ರದಾಯಿಕ ಶೈಲಿಯ ಕೂಚಿಪುಡಿ ಕಾರ್ಯಕ್ರಮ ನವೆಂಬರ್ 15ರಂದು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಅಭ್ಯಾಗತರಾಗಿ ಆಗಮಿಸಿದ ಮಂಗಳೂರಿನ ಕಲಾ ಸೂರ್ಯ ನೃತ್ಯಾಲಯದ ನೃತ್ಯ ಶಿಕ್ಷಕಿ ವಿದುಷಿ ಸೌಜನ್ಯ ಪಡುವೆಟ್ನಾಯರವರು ತಮ್ಮ ಮಾತೃ ಸಂಸ್ಥೆಯಲ್ಲಿ ನಡೆಯುವ ಕಲಾ ಕೈಂಕರ್ಯ, ಸಮಾಜಕ್ಕೆ ಇದರಿಂದ ಆಗುವ ಸತ್ಪರಿಣಾಮಗಳ ಬಗ್ಗೆ ಮಾಹಿತಿಕರವಾಗಿ ಜನರಿಗೆ ಕೊಡುವಂತಹ ಪ್ರಯೋಜನಗಳನ್ನು ಬಹಳಷ್ಟು ಮನೋಜ್ಞವಾಗಿ ಶ್ಲಾಘಿಸಿದರು ಹಾಗೂ ವೇದ್ಯ ಸ್ಫೂರ್ತಿಯವರ ಅದ್ಭುತ ಕಲಾಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಕಾರ್ಯಕ್ರಮದ ಒಟ್ಟು ನಿರ್ವಹಣೆಯನ್ನು ವಿದ್ವಾನ್ ದೀಪಕ್ ಕುಮಾರ್ ರವರು ಆಯೋಜಿಸಿದರು. ಕಾರ್ಯಕ್ರಮವನ್ನು ಕುಮಾರಿ. ಸೃಷ್ಟಿ ಎನ್.ವಿ. ರವರು ನಿರೂಪಿಸಿದವರು. ಅಭ್ಯಾಗತರ ಪರಿಚಯವನ್ನು ಮಾಡಿದವರು ಕುಮಾರಿ. ಜನ್ಯ. ಕಲಾವಿದರ ಪರಿಚಯವನ್ನು ಮಾಡಿದವರು ಕುಮಾರಿ. ಸಾನ್ವಿ ಪಿ.ಎಸ್. ವಿಷಯ ಮಂಡನೆಯನ್ನು ಮಾಡಿದವರು ಕುಮಾರಿ ಶೋನಲ್ ರೈ. ಪ್ರಾರ್ಥನೆಯನ್ನು ಮಾಡಿದವರು ಕುಮಾರಿ ಮಾತಂಗಿ. ಶಂಖನಾದವನ್ನು ಮಾಡಿದವರು ಕುಮಾರ ಶೌರಿ ಕೃಷ್ಣ, ಮತ್ತು ಓಂಕಾರ ನಾದವನ್ನು ವಿದುಷಿ ಪ್ರೀತಿಕಲಾ ರವರು ಮಾಡಿದರು.

