ಕುಂಬಳೆ : ಯಕ್ಷಗಾನದ ತವರೂರು ಕವಿ ಪಾರ್ತಿಸುಬ್ಬನ ನಾಡಾದ ಕುಂಬಳೆಯ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ (ರಿ) ಇದರ ಮುಖ್ಯಸ್ಥರಾದ ಸಿರಿಬಾಗಿಲು ಶ್ರೀ ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ ಸಾಂಸ್ಕೃತಿಕ ಉತ್ಸವ ಹಾಗೂ ಸಿರಿಬಾಗಿಲು ಯಕ್ಷ ವೈಭವ ದಿನಾಂಕ 18-07-2024 ರಂದು ಉದ್ಘಾಟನೆಗೊಂಡಿತು.
ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಘ- ಸಂಸ್ಥೆಗಳ ನೆರವಿನಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ರಜತ ಮಹೋತ್ಸವದಲ್ಲಿರುವ ‘ಸರಯೂ ಯಕ್ಷ ಬಳಗ’ದ ಯಕ್ಷಗಾನ ಪ್ರದರ್ಶನವು ದಿನಾಂಕ 19-07-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಕವಿ ಹಾಗೂ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ವಿರಚಿತ ಹಾಗೂ ನಿರ್ದೇಶನದ ‘ವೀರ ಶತಕಂಠ’ ಎಂಬ ಪ್ರಸಂಗ ಪ್ರಸ್ತುತಗೊಂಡಿತು.
ಪ್ರದರ್ಶನದ ಹಿಮ್ಮೇಳದಲ್ಲಿ ಲಕ್ಷ್ಮೀನಾರಾಯಣ ಹೊಳ್ಳ ಕೃಷ್ಣಾಪುರ, ಅಂಬಾತನಯ ಅರ್ನಾಡಿ, ಮಧುಸೂದನ ಅಲೆವೂರಾಯ, ಹಾಗೂ ಲಕ್ಷ್ಮಣ ಕುಮಾರ್ ಮರಕಡ ಸಹಕರಿಸಿದರೆ, ಮುಮ್ಮೇಳದಲ್ಲಿ ವಿಜಯಲಕ್ಷ್ಮೀ ಯಲ್. ಎಸ್., ನಾಗರಾಜ ಖಾರ್ವಿ, ಸಂತೋಷ್ ಪಿಂಟೋ, ಅಕ್ಷಯ್ ಸುವರ್ಣ, ರೇವಂತ್ ರಾಘವೇಂದ್ರ , ನಿತ್ಯಶ್ರೀ, ಕೃತಿ ದೇವಾಡಿಗ, ದೃಶಾಲ್, ವಿಶ್ವಾಸ್ ಆರ್. ಪಾತ್ರ ನಿರ್ವಹಿಸಿದರು.