ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ (ರಿ.) ಆಯೋಜಿಸುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವವು ದಿನಾಂಕ 24-02-2024ರಂದು ಉಳ್ಳಾಲದ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ನಡೆಯಲಿದೆ.
ಕರ್ನಾಟಕ ಸರಕಾರದ ಶಾಸಕರು ಹಾಗೂ ಸಭಾಪತಿಗಳಾದ ಶ್ರೀ ಯು.ಟಿ. ಖಾದರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಕಾರ್ಯದರ್ಶಿ ಹಾಗೂ ಮೂಡಬಿದಿರೆ ಚೌಟರ ಅರಮನೆಯ ಡಾ. ಅಕ್ಷತಾ ಆದರ್ಶ್ ಜೈನ್ ಉತ್ಸವವನ್ನು ಉದ್ಘಾಟಿಸಲಿದ್ದು, ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದೆಯಾದ ಶ್ರೀಮತಿ ಸರೋಜಿನಿ ಎಸ್. ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ಶ್ರೀಮತಿ ವಾಣಿ ವಿ. ಆಳ್ವ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ವಿಧಾನಪರಿಷತ್ ಸದಸ್ಯರು ಹಾಗೂ ಭರವಸೆ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಯಂ. ಫಾರೂಕ್ ಆಶಯ ನುಡಿಗಳನ್ನಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ದ. ಕ. ಜಿಲ್ಲೆ ಇದರ ಮಾಜಿ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಶುಭಾಶಂಸನೆಗೈಯಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಲೇಖಕಿ ಪ್ರಮೀಳಾ ಮಾಧವ್ ಹಾಗೂ ಖ್ಯಾತ ಕ್ರೀಡಾಪಟು ಡಾ. ಮಾಲತಿ ಕೆ. ಹೊಳ್ಳ ಇವರಿಗೆ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಪ್ರದಾನ ನಡೆಯಲಿದೆ.
ಸಭಾ ಕಾರ್ಯಕ್ರಮದ ಬಳಿಕ ‘ಮಂತ್ರ ನಾಟ್ಯಕಲಾ ಗುರುಕುಲ’ ಇಲ್ಲಿನ ಸದಸ್ಯರಿಂದ ವಿದ್ವಾನ್ ಶ್ರವಣ್ ಕುಮಾರ್ ನಿರ್ದೇಶನದ ‘ಸಾಂಸ್ಕೃತಿಕ ಕಾರ್ಯಕ್ರಮ’, ಕುತ್ತಾರಿನ ಭ್ರಾಮರಿ ಮಹಿಳಾ ಮಂಡಳಿ ಸದಸ್ಯರಿಂದ ‘ತುಳು ಜನಪದ ವೈಭವ’, ಆಬ್ದುಲ್ ಸಲಾಂ ಅಕ್ಕರಕೆರೆ ಇವರಿಂದ ‘ಬ್ಯಾರಿ ಸಂದೋಲ’, ಪವನ ಕಲಾವಿದರ್ ಕುಡ್ಲ ಇದರ ಸದಸ್ಯರಿಂದ ‘ತೆಲಿಕೆದ ತಮ್ಮನ’, ಡಾ. ಕೆ. ಚಿನ್ನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ಪ್ರೊ. ಅಮೃತ ಸೋಮೇಶ್ವರ ಸಂಸ್ಮರಣೆ ಹಾಗೂ ‘ಪ್ರೊ. ಅಮೃತರ ಬದುಕು ಬರೆಹ’ ವಿಷಯದ ಬಗ್ಗೆ ವಿಚಾರಗೋಷ್ಠಿ, ಗುಮ್ಟಾಂ ಕಲಾ ಪಂಗಡ ಅಗ್ರಾರ್ ಇವರಿಂದ ಜಾನಪದ ಹಾಡು ಮತ್ತು ನೃತ್ಯ, ಮಂಗಳೂರಿನ ಕುಮಾರಿ ಗ್ರೀಷ್ಮಾ ಕಿಣಿ ಇವರಿಂದ ಸಂಗೀತ ಕಾರ್ಯಕ್ರಮ, ಅಮೃತ ಬಹುಭಾಷಾ ಕಾವ್ಯ ಗಾಯನ, ‘ಸೌರಭ ಸಂಗೀತ ನೃತ್ಯಕಲಾ ಪರಿಷತ್’ ಇದರ ಸದಸ್ಯರಿಂದ ಡಾ. ಶ್ರೀ ವಿದ್ಯಾ ಮುರಳೀಧರ್ ನಿರ್ದೇಶನದಲ್ಲಿ ‘ಸ್ವಾಗತ ನೃತ್ಯ’, ರತ್ನ ಕಲಾಲಯ ಊರ್ವ ಮಂಗಳೂರು ಇದರ ಸದಸ್ಯರಿಂದ ಜಾನಪದ ನೃತ್ಯ, ವಿದುಷಿ ಶರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ನಿರ್ದೇಶನದಲ್ಲಿ ‘ಸತ್ಯನಾಪುರೊತ ಸಿರಿ’ ರೂಪಕ ಪ್ರದರ್ಶನ, ಅಕ್ಷತಾ ಬೈಕಾಡಿ ಇವರಿಂದ ನೃತ್ಯ ಹಾಗೂ ಯುವ ನಿರ್ದೇಶಕ ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಪ್ರೊ. ಅಮೃತ ಸೋಮೇಶ್ವರ ವಿರಚಿತ ‘ಗೋಂದೋಳು’ ನಾಟಕ ಪ್ರದರ್ಶನಗೊಳ್ಳಲಿದೆ.