ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ ಕಾರ್ಯಕ್ರಮವನ್ನು ದಿನಾಂಕ 14 ಫೆಬ್ರವರಿ 2026ರಂದು ಪೆರ್ಮನ್ನೂರು ತೊಕ್ಕೊಟ್ಟು ಒಳಪೇಟೆಯ ಡಾ. ಅಂಬೇಡ್ಕರ್ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 2-00 ಗಂಟೆಗೆ ಸ್ವರ ಮಾಧುರ್ಯ ತಂಡದ ಶ್ರೀಮತಿ ಯಶಸ್ವಿನಿ ಉಳ್ಳಾಲ್ ಇವರಿಂದ ‘ನಾಡು ನುಡಿ ಗೀತೋತ್ಸವ’, 3-00 ಗಂಟೆಗೆ ಅಲ್ ಅಝ್ಝಾರಿಯಾ ದಫ್ ತಂಡದಿಂದ ದಫ್ ಕಾರ್ಯಕ್ರಮ ಮತ್ತು ಹುಸೈನ್ ಕಾಟಿಪಳ್ಳ ಬಳಗದಿಂದ ಬ್ಯಾರಿ ಹಾಡುಗಳ ಸಂಭ್ರಮ, 3-30 ಗಂಟೆಗೆ ಯುವವಾಹಿನಿ (ರಿ.) ಕೊಲ್ಯ ಘಟಕದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 4-00 ಗಂಟೆಗೆ ಕೊಂಕಣಿ ಕಾರ್ಯಕ್ರಮದಲ್ಲಿ ಕುಡುಂಬಿ ನೃತ್ಯ, 4-30 ಗಂಟೆಗೆ ಬಲೇ ತೆಲಿಪಾಲೆ ಖ್ಯಾತಿಯ ಪ್ರಶಂಸಾ ಕಾಪು ತಂಡದವರಿಂದ ‘ಹಾಸ್ಯ ವೈವಿಧ್ಯ – ಬಲೇ ತೆಲಿಪಾಲೆ’, 5-00 ಗಂಟೆಗೆ ಪಜೀರು ನೃತ್ಯಲಹರಿ ನಾಟ್ಯಾಲಯದ ವಿದುಷಿ ರೇಶ್ಮಾ ನಿರ್ಮಲ್ ಭಟ್ ಇವರಿಂದ ‘ಸ್ವಾಗತ ನೃತ್ಯ’ ಪ್ರಸ್ತುತವಿದೆ.
ಸಂಜೆ 5-30 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ್ಯ ಯು.ಟಿ. ಖಾದರ್ ಫರೀದ್ ಇವರು ವಹಿಸಲಿದ್ದು, ಸನ್ಮಾನ್ಯ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ಸಾಯಿಗೀತಾ ಮತ್ತು ವಿದುಷಿ ರಾಜಶ್ರೀ ಉಳ್ಳಾಲ್ ಇವರಿಗೆ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಪ್ರದಾನ ಹಾಗೂ 80ನೇ ಹುಟ್ಟು ಹಬ್ಬದ ವರ್ಷಾಚರಣೆಯ ಪ್ರಯುಕ್ತ ಸನ್ಮಾನ್ಯ ಕೆ. ಜಯರಾಮ ಶೆಟ್ಟಿ ಇವರಿಗೆ ಗೌರವ ಸನ್ಮಾನ ಮಾಡಲಾಗುವುದು. ರಾತ್ರಿ 7-30 ಗಂಟೆಗೆ ಮಂಗಳೂರಿನ ಕಲಾಭಿ ತಂಡದಿಂದ ಮೂಲ ಜಾನಪದ ವೈವಿಧ್ಯಮಯ ನೃತ್ಯ, 8-00 ಗಂಟೆಗೆ ದಿನೇಶ್ ಅತ್ತಾವರ ಇವರ ನಿರ್ದೇಶನದಲ್ಲಿ ತುಳು ನಾಟಕ ‘ಜಾಗರ್ತೆ’ ಮತ್ತು 8-30 ಗಂಟೆಗೆ ಅಶ್ವಥ್ ಮಂಜನಾಡಿ ಇವರ ನಿರ್ದೇಶನದಲ್ಲಿ ‘ಯಕ್ಷ ನೃತ್ಯ’ ಪ್ರದರ್ಶನ ನಡೆಯಲಿದೆ.

