ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಬ್ರಹ್ಮ್ಯೆಕ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪಂಚಮ ವಾರ್ಷಿಕ ಆರಾಧನೆ ಪ್ರಯುಕ್ತ ದಿನಾಂಕ 11 ಸೆಪ್ಟೆಂಬರ್ 2025ರಂದು ವೇಣುವಾದನ ಮತ್ತು ಯಕ್ಷಗಾನ ಪ್ರದರ್ಶನವನ್ನು ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9-30 ಗಂಟೆಗೆ ವೇಣುವಾದನ ಕಾರ್ಯಕ್ರಮದಲ್ಲಿ ವಿದ್ವಾನ್ ಎಂ.ಕೆ. ಪ್ರಾಣೇಶ್ ಕೊಳಲು, ವಿದ್ವಾನ್ ಜನಾರ್ದನ್ ಶ್ರೀನಾಥ್ ವಯಲಿನ್, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಮೃದಂಗ, ವಿದ್ವಾನ್ ಗುರುಪ್ರಸನ್ನ ಖಂಜರಿ ಮತ್ತು ಬೆಂಗಳೂರಿನ ವಿದ್ವಾನ್ ರಾಜಶೇಖರ ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ.
ಸಂಜೆ 5-00 ಗಂಟೆಗೆ ಉಡುಪಿ ಸಿದ್ಧಾಪುರದ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ (ರಿ.) ಇವರಿಂದ ದಿ. ಕಾಳಿಂಗ ನಾವುಡ ವಿರಚಿತ ‘ನಾಗಶ್ರೀ’ ಬಡಗುತಿಟ್ಟು ಯಕ್ಷಗಾನ ಬಯಲಾಟ ಮತ್ತು ರಾತ್ರಿ 9-00 ಗಂಟೆಗೆ ‘ಅಗ್ರಪೂಜೆ’ ತೆಂಕುತಿಟ್ಟು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.