ತುಮಕೂರು : ತುಮಕೂರಿನ ವೀಚಿ ಸಾಹಿತ್ಯ ಪ್ರತಿಷ್ಠಾನ ಇದರ ವತಿಯಿಂದ ‘ವೀಚಿ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 13 ಜುಲೈ 2025ರಂದು ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ಆರ್.ಟಿ. ನಗರ ರವೀಂದ್ರ ಕಲಾನಿಕೇತನದಲ್ಲಿ ಆಯೋಜಿಸಲಾಗಿದೆ.
ವೀಚಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಸ್. ನಾಗಣ್ಣ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮಾನ್ಯ ಸಹಕರ ಸಚಿವರಾದ ಕೆ.ಎನ್. ರಾಜಣ್ಣ ಇವರು ಉದ್ಘಾಟನೆ ಮಾಡಲಿದ್ದಾರೆ. ಶ್ರೀಮತಿ ಸುನಂದಾ ಜಯರಾಂ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಂಸ್ಕೃತಿ ಚಿಂತಕರಾದ ಪ್ರೊ. ಎಸ್.ಜಿ. ಸಿದ್ಧ ರಾಮಯ್ಯ ಇವರು ಆಶಯ ನುಡಿ ಮತ್ತು ಸಾಹಿತಿ ಡಾ. ಬಸವರಾಜ ಸಾದರ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಕತೆಗಾರ ತುಂಬಾಡಿ ರಾಮಯ್ಯ ಮತ್ತು ರಂಗಕರ್ಮಿ ಡಾ. ಬೇಲೂರು ರಘುನಂದನ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀಮತಿ ಪಿ. ಚಂದ್ರಿಕಾ ಇವರ ‘ಮೂವರು ಮಹಮದರು’ ಎಂಬ ಕೃತಿಗೆ ‘ವೀಚಿ ಸಾಹಿತ್ಯ ಪ್ರಶಸ್ತಿ’, ಡಾ. ಗೋವಿಂದರಾಜು ಎಂ. ಕಲ್ಲೂರು ಇವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಎಂಬ ಕೃತಿಗೆ ‘ವೀಚಿ ಯುವ ಸಾಹಿತ್ಯ ಪ್ರಶಸ್ತಿ’, ತತ್ತ್ವಪದ ಗಾಯಕರಾದ ಜಯರಾಮಯ್ಯ ದುಗ್ಗೇನಹಳ್ಳಿ ಇವರಿಗೆ ‘ವೀಚಿ ಜನಪದ ಪ್ರಶಸ್ತಿ’ ಮತ್ತು ಶ್ರೀಮತಿ ತಾಹೆರಾ ಕುಲ್ಸುಮ್’ ಇವರಿಗೆ ‘ವೀಚಿ ಕನಕ ಕಾಯಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.