ಉಡುಪಿ : ಹೆಜ್ಜೆ ಗೆಜ್ಜೆ ಫೌಂಡೇಶನ್ (ರಿ.) ಉಡುಪಿ-ಮಣಿಪಾಲ್ ಇದರ ವತಿಯಿಂದ ‘ಪುರಂದರ ಗಾನ ನರ್ತನ’ ಶ್ರೀ ಪುರಂದರ ದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ ನೃತ್ಯಾರ್ಪಣೆ ಕಾರ್ಯಕ್ರಮವು ದಿನಾಂಕ 03 ಜನವರಿ 2026ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಕಲಾವಿದೆ ವಿದುಷಿ ದೀಕ್ಷಾ ರಾಮಕೃಷ್ಣ ನಿರಂತರ 6 ಗಂಟೆ 13 ನಿಮಿಷ ಪುರಂದರ ದಾಸರ ಗೀತೆ ಹಾಡುತ್ತ ಅದಕ್ಕೆ ತಕ್ಕದಾಗಿ ನರ್ತಿಸುತ್ತ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ (ಜಿಬಿಒಡಬ್ಲ್ಯು) ದಾಖಲಿಸಿದರು. ಜಿಬಿಒಡಬ್ಲ್ಯುವಿನ ಏಷಿಯಾ ಹೆಡ್ ಡಾ. ಮನಿಶ್ ವಿಷ್ಣೋಯಿ ಪ್ರಮಾಣ ಪತ್ರ ವಿತರಿಸಿ “ದೀಕ್ಷಾರವರು ಪುರಂದರ ದಾಸರ ಗೀತೆ ಗಾಯನದ ಜತೆಗೆ ನೃತ್ಯ ಮಾಡಿರುವುದು ವಿಶೇಷವಾದುದು” ಎಂದರು.



ದೀಕ್ಷಾ ರಾಮಕೃಷ್ಣರವರು ಮಾತನಾಡಿ “ಭರತನಾಟ್ಯ ಹಾಗೂ ಸಂಗೀತ ಎರಡಲ್ಲೂ ನಾನು ಸಕ್ರಿಯವಾಗಿರುವುದರಿಂದ ಅವೆರಡನ್ನೂ ಒಟ್ಟಿಗೆ ತರಲು ಯೋಚಿಸಿದ್ದೆ. ಹಾಗಾಗಿ ಈ ಪುರಂದರ ಗಾನ ನರ್ತನ ಪರಿಕಲ್ಪನೆ ಮೂಡಿತು. ನಿರಂತರ ಪ್ರಯತ್ನದಿಂದ ಸಾಧ್ಯವಾಗದೆ. ದೇವ ಹಾಗೂ ದೈವ ಶಕ್ತಿಯ ಬಲವೂ ಈ ಸಾಧನೆಗೆ ಪ್ರೇರಣೆ” ಎಂದರು.


ಹೆಜ್ಜೆಗೆಜ್ಜೆ ನಿರ್ದೇಶಕಿ ಯಶ್ ರಾಮಕೃಷ್ಣ ಪ್ರಸ್ತಾವನೆಗೈದು, ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ಸ್ವಾಗತಿಸಿದರು. ಶಾಸಕ ಯಶ್ ಪಾಲ್ ಎ. ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಪಲಿಮಾರು ಮಠದ ದಿವಾನರಾದ ಶಿಬರೂರು ವೇದವ್ಯಾಸ ತಂತ್ರಿ, ಗುರುಗಳಾದ ರಾಘವೇಂದ್ರ ಆಚಾರ್ಯ, ವಿದ್ವಾನ್ ಮಧೂರು ಪಿ. ಬಾಲಕೃಷ್ಣ, ಕರ್ನಾಟಕ ಹೆಡ್ ಡಾ. ಭರತ್ ಕಾಮತ್, ಎಂ.ಜಿ.ಎಂ. ಕಾಲೇಜಿನ ಉಪಪ್ರಾಂಶುಪಾಲ ಡಾ. ಎಂ. ವಿಶ್ವನಾಥ ಪೈ ಶುಭ ಹಾರೈಸಿದರು. ದೀಕ್ಷಾರವರ ಪತಿ ಬಸವ ಟ್ರಸ್ಟಿನ ಡಾ. ಶರಣಬಸವ ಉಸಸ್ಥಿತರಿದ್ದರು.


