ಬಂಟ್ವಾಳ : ‘ಏರ್ಯ ಆಳ್ವ ಫೌಂಡೇಶನ್’ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದಲ್ಲಿ ‘ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ’ ಕಾರ್ಯಕ್ರಮವು ದಿನಾಂಕ 27 ಜುಲೈ 2025ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 9.00ರಿಂದ ಬಂಟ್ವಾಳದ ‘ಏರ್ಯ ಬೀಡು’ ಇಲ್ಲಿ ನಡೆಯಲಿದೆ.
ಏರ್ಯ ಬಾಲಕೃಷ್ಣ ಹೆಗ್ಡೆ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಆನಂದಿ ಎಲ್. ಆಳ್ವ ದೀಪ ಪ್ರಜ್ವಲನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಿ.ಸಿ.ರೋಡು ಇದರ ಅಧ್ಯಕ್ಷರಾದ ಶ್ರೀ ತುಕಾರಾಂ ಪೂಜಾರಿ, ಕ.ಸಾ.ಪ. ಬಂಟ್ವಾಳ ಇದರ ಅಧ್ಯಕ್ಷರಾದ ಶ್ರೀ ವಿಶ್ವನಾಥ ಬಂಟ್ವಾಳ, ಹೋಟೆಲ್ ರಂಗೋಲಿ ಬಿ. ಸಿ. ರೋಡು ಇದರ ಶ್ರೀ ಚಂದ್ರಹಾಸ ಡಿ. ಶೆಟ್ಟಿ, ಮುಂಡಡ್ಕಗುತ್ತು ಇದರ ಯಜಮಾನರಾದ ಶ್ರೀ ರತ್ನಾಕರ ಶೆಟ್ಟಿ, ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಶ್ರೀ ಕೃಷ್ಣಕುಮಾರ್ ಪೂಂಜ, ಅಮ್ಮಾಡಿ ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಶ್ರೀ ವಿಜಯ್ ಕುಮಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀ ಕೇಶವ ಎಚ್. ಕಟೀಲು ಇವರು ‘ಏರ್ಯರ ನೆನಪು’ ವಿಷಯದಲ್ಲಿ ಮಾತನಾಡಲಿದ್ದಾರೆ.
ಉದ್ಘಾಟನಾ ಸಮಾರಂಭದ ಬಳಿಕ ಬೆಳಿಗ್ಗೆ ಘಂಟೆ 10.00 ರಿಂದ 10.30ರ ವರೆಗೆ ದೀಪಿಕಾ ಪ್ರೌಢಶಾಲೆ ಮೊಡಂಕಾಪು ಇಲ್ಲಿನ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಮಹಾಬಲೇಶ್ವರ ಹೆಬಾರ್ ಇವರು “ಓದುವ ಹವ್ಯಾಸ”ದ ಬಗ್ಗೆ ಮಾತನಾದಲಿದ್ದು, 10.30 ರಿಂದ 11.30ರ ವರೆಗೆ ‘ಚಿತ್ರ ಕಮ್ಮಟ’ವನ್ನು ಸರಕಾರಿ ಪ್ರೌಢಶಾಲೆ ಮಂಚಿ ಇಲ್ಲಿನ ಚಿತ್ರಕಲಾ ಶಿಕ್ಷಕರಾದ ಶ್ರೀ ತಾರನಾಥ ಕೈರಂಗಳ ನಡೆಸಿಕೊಡಲಿದ್ದಾರೆ. 11.30 ರಿಂದ 12.45ರ ವರೆಗೆ “ಮಕ್ಕಳ ಗೀತಾ ಸಾಹಿತ್ಯ” ಕಾರ್ಯಕ್ರಮ ನಡೆಯಲಿದ್ದು, ಶ್ರೀ ವಿಠ್ಠಲ ನಾಯಕ್ ಕಲ್ಲಡ್ಕ ಇವರು ಮಕ್ಕಳ ಗೀತಾ ಸಾಹಿತ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 12.45 ರಿಂದ 1.15ರ ವರೆಗೆ ಸಮಾರೋಪ ಸಮಾರಂಭ ನಡೆಯಲಿದೆ.