ಮೈಸೂರು : ಮೈಸೂರು ವಿಜ್ಞಾನ ನಾಟಕೋತ್ಸವ ಟ್ರಸ್ಟ್ (ರಿ.) ಇದರ ವತಿಯಿಂದ 8ನೇ ಆವೃತ್ತಿಯ ‘ವಿಜ್ಞಾನ ನಾಟಕೋತ್ಸವ’ವನ್ನು ದಿನಾಂಕ 24 ಜುಲೈ 2025ರಿಂದ 27 ಜುಲೈ 2025ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 24 ಜುಲೈ 2025ರಂದು ಸಂಜೆ 5-00 ಗಂಟೆಗೆ ‘ವಿಜ್ಞಾನ ನಾಟಕೋತ್ಸವ’ದ ಉದ್ಘಾಟನೆ ನಡೆಯಲಿದ್ದು, ಬಳಿಕ ಬೆಂಗಳೂರಿನ ರಿದ್ಧಿ ತಂಡದವರಿಂದ ನೀಲಾಂಜನ್ ಚೌಧರಿ ಇವರ ನಿರ್ದೇಶನದಲ್ಲಿ ‘ಟ್ರಯಲ್ ಆಫ್ ಅಬ್ದುಸ್ ಸಲಾಮ್’, ದಿನಾಂಕ 25 ಜುಲೈ 2025ರಂದು ಮೈಸೂರಿನ ಅರಿವು ರಂಗ ತಂಡದವರಿಂದ ಪ್ರವೀಣ್ ಬೆಳ್ಳಿ ಇವರ ನಿರ್ದೇಶನದಲ್ಲಿ ‘ಹಸಿವು’, ದಿನಾಂಕ 26 ಜುಲೈ 2025ರಂದು ಮೈಸೂರಿನ ಕಲಾಸುರುಚಿ ತಂಡದವರಿಂದ ಪ್ರೊ. ಎಚ್.ಎಸ್. ಉಮೇಶ್ ಇವರ ನಿರ್ದೇಶನದಲ್ಲಿ ‘ರಾಮನ್ – ಬೆಳಕು, ಶಬ್ದ, ಸಿಡಿಲು’ ಮತ್ತು ದಿನಾಂಕ 27 ಜುಲೈ 2025ರಂದು ಮೈಸೂರಿನ ಪರಿವರ್ತನ ರಂಗಸಮಾಜ ತಂಡದವರಿಂದ ಪ್ರೊ. ಎಸ್.ಆರ್. ರಮೇಶ್ ಇವರ ನಿರ್ದೇಶನದಲ್ಲಿ ‘ಮೂರನೇ ಕಿವಿ’ ನಾಟಕ ಪ್ರದರ್ಶನಗೊಳ್ಳಲಿದೆ.