ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಮಹಿಳಾ ವಿಂಶತಿ ಸರಣಿ -18 ತಾಳಮದ್ದಳೆ ಕಾರ್ಯಕ್ರಮವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ನವಗ್ರಹ ಗುಡಿಯಲ್ಲಿ ‘ಕರ್ಣ ಪರ್ವ’ ಎಂಬ ಆಖ್ಯಾನದೊಂದಿಗೆ ದಿನಾಂಕ 02 ಡಿಸೆಂಬರ್ 2024ರ ಸೋಮವಾರ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ನಿತೀಶ್ ಎಂಕಣ್ಣ ಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪಿ.ಟಿ. ಜಯರಾಮ್ ಭಟ್, ಮುರಳಿಧರ ಕಲ್ಲೂರಾಯ ಮತ್ತು ಮಾಸ್ಟರ್ ಪರೀಕ್ಷಿತ್ ಹಂದ್ರಟ್ಟ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ (ಕರ್ಣ), ಭಾಸ್ಕರ ಬಾರ್ಯ (ಶ್ರೀ ಕೃಷ್ಣ), ಮಾಂಬಾಡಿ ವೇಣುಗೋಪಾಲ ಭಟ್ (ಅರ್ಜುನ), ಗುಡ್ಡಪ್ಪ ಬಲ್ಯ (ಶಲ್ಯ), ದುಗ್ಗಪ್ಪ ನಡುಗಲ್ಲು (ಅಶ್ವಸೇನ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ರಂಗನಾಥ ರಾವ್ ವಂದಿಸಿದರು.