ಉಡುಪಿ : ಗಾಂಧಿ ಆಸ್ಪತ್ರೆ ಉಡುಪಿ ಮೂವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂ ಮತ್ತು ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂ ಅವರ ಆಶೀರ್ವಾದದೊಂದಿಗೆ ‘ವಯೋಲಿನ್ ಕಛೇರಿ’ಯನ್ನು ದಿನಾಂಕ 15-05-2024ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಛೇರಿಯನ್ನು ಖ್ಯಾತ ಬಾಲ ಪ್ರತಿಭೆ ಕುಮಾರಿ ಗಂಗಾ ಶಶಿಧರನ್ ಮತ್ತು ಅವರ ಮಾರ್ಗದರ್ಶಕ ಶ್ರೀ ಸಿ.ಎಸ್. ಅನುರೂಪ್ ಅವರು ನಡೆಸಿಕೊಡಲಿದ್ದಾರೆ.