ಪುತ್ತೂರು : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಮತ್ತು ಬಹುವಚನಂ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ ಸಮಾರಂಭವನ್ನು ದಿನಾಂಕ 05 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಪುತ್ತೂರಿನ ಶ್ರೀ ಸ್ವಾಮಿ ಕಲಾಮಂದಿರದ ದರ್ಶನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಉದ್ಘಾಟನೆಯನ್ನು ಯುವ ಬ್ರಿಗೇಡ್ ಚಕ್ರವರ್ತಿ ಸೂಲಿಬೆಲೆ ಇವರು ಮಾಡಲಿದ್ದು, ಜಿ.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಲರಾಮ ಆಚಾರ್ಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ಮತ್ತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಂಜಿಗುಡ್ಡೆ ಈಶ್ವರ್ ಭಟ್ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ವಿಚಾರಗೋಷ್ಠಿ 1ರಲ್ಲಿ ‘ಬನ್ನಂಜೆ ಸ್ಮರಣೆ’ ಎಂಬ ವಿಷಯದ ಬಗ್ಗೆ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಮತ್ತು ವಿಚಾರಗೋಷ್ಠಿ 2ರಲ್ಲಿ ‘ಗುರು ಬನ್ನಂಜೆ’ ಎಂಬ ವಿಷಯದ ಬಗ್ಗೆ ಪ್ರಾಧ್ಯಾಪಕರಾದ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಶ್ರೀಮತಿ ಕವಿತಾ ಉಡುಪ ಮತ್ತು ಶ್ರೀಮತಿ ಸುಮಾ ಶಾಸ್ತ್ರಿಯರಿಂದ ಬನ್ನಂಜೆಯವರ ಹಾಡುಗಬ್ಬ ಹಾಗೂ ಸುಚೇಂದ್ರ ಪ್ರಸಾದ್ ಇವರ ನಿರ್ದೇಶನ ಮತ್ತು ಅಭಿನಯದಲ್ಲಿ ‘ನನ್ನ ಪಿತಾಮಹ’ ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 4-00 ಗಂಟೆಗೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ವಾಂಸ ಜಗದೀಶ ಶರ್ಮ ಸಂಪ ಇವರು ವಹಿಸಲಿದ್ದಾರೆ. ಸಂಧ್ಯಾಕಾಲ ಗಂಟೆ 5-45ಕ್ಕೆ ಬೆಂಗಳೂರಿನ ವಿದ್ಯಾಭೂಷಣರು ಮತ್ತು ತಂಡದವರಿಂದ ಬನ್ನಂಜೆ ಗಾನ ಲೋಕ ಪ್ರಸ್ತುತಗೊಳ್ಳಲಿದೆ.



