ಮೂಡಬಿದಿರೆ : ಆಳ್ವಾಸ್ ಸ್ವಾಯತ್ತ ಕಾಲೇಜಿನ ಇಂಗ್ಲಿಷ್ ವಿಭಾಗದ ಗ್ಲಿಸನ್ ಸಂಘದ ವತಿಯಿಂದ ವಿಶ್ವ ಕಾವ್ಯ ದಿನವನ್ನು ದಿನಾಂಕ 20 ಮಾರ್ಚ್ 2025ರ ಗುರುವಾರದಂದು ಕುವೆಂಪು ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿಯ ಶ್ರೀ ಅದಮಾರು ಮಠದ ಶಿಕ್ಷಣ ಸಮೂಹಗಳ ಉಪ ಆಡಳಿತಾಧಿಕಾರಿ ಪುಂಡರಿಕಾಕ್ಷ ಕೊಡಂಚ ಮಾತನಾಡಿ “ಕಾವ್ಯವು ನಮ್ಮ ಸಂಸ್ಕೃತಿಯ ಮಹತ್ವಪೂರ್ಣ ಅಂಗ. ಆ ಮೂಲಕ ನಮ್ಮ ಭಾವನೆ ಹಾಗೂ ಅನುಭವಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗಿದೆ. ಕಾವ್ಯ ದಿನವನ್ನು ಆಚರಿಸುವುದರ ಮೂಲಕ ಮಹಾನ್ ಕವಿಗಳ ಕೊಡುಗೆಗಳನ್ನು ಗೌರವಿಸುವುದರ ಜೊತೆಗೆ ಹೊಸ ಬರಹಗಾರರಿಗೆ ಪ್ರೇರಣೆಯಾಗಲು ಸಹಾಯ ಮಾಡುತ್ತದೆ. ತಾರ್ಕಿಕವಾಗಿ ಯೋಚಿಸಿ ಮತ್ತು ಸಾಮಾನ್ಯ ಜ್ಞಾನವನ್ನು ಬಳಸಿದರೆ ಯಾರೂ ಬದುಕಿನಲ್ಲಿ ಪ್ರಮಾದವನ್ನೆಸಗಲಾರರು. ತಾರ್ಕಿಕ ಯೋಚನೆಯುಳ್ಳ ವ್ಯಕ್ತಿಗೆ ಅವಕಾಶಗಳು ವಿಫುಲವಾಗಿರುತ್ತವೆ ಎಂದು ಸಲಹೆ ನೀಡಿದರು. ಸುಂದರವಾದ ಭೂಮಿಯನ್ನು ಉಳಿಸಬೇಕು. ಅದು ನಮ್ಮ ಆಸೆಗಳನ್ನು ಪೂರೈಸ ಬಲ್ಲದೇ ಹೊರತು, ನಮ್ಮ ದುರಾಸೆಯನ್ನಲ್ಲ” ಎಂದರು.
ಗ್ಲಿಸನ್ ಸಂಘದ ವತಿಯಿಂದ ಆಯೋಜಿಸಲಾದ ಕಾವ್ಯ ವಾಚನ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಬಿ. ಎಸ್ಸಿ. ವಿದ್ಯಾರ್ಥಿನಿ ಮೇಘಾ ಡಿ. ವಿ. ಪ್ರಥಮ ಸ್ಥಾನ ಪಡೆದರೆ, ಎಫ್ ಎನ್ ಡಿ ವಿದ್ಯಾರ್ಥಿನಿ ಪ್ರೇರಣಾ ಜೈನ್ ದ್ವಿತೀಯ ಹಾಗೂ ಬಿ. ಎ. ವಿದ್ಯಾರ್ಥಿನಿ ಸಮೀಕ್ಷಾ ರಾವ್ ತೃತೀಯ ಸ್ಥಾನ ಪಡೆದರು.
ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯರಾದ ಡಾ. ಕುರಿಯನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ. ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾ ಕೆ. ಎಸ್., ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಮಚೇಂದ್ರ ಬೆಲ್ಕಿ, ಗ್ಲಿಸನ್ ವೇದಿಕೆಯ ಸಂಯೋಜಕರಾದ ಹರ್ಷಿಣಿ ಪಿಂಟೋ ಹಾಗೂ ಸುಮಂತ್ ಉಪಸ್ಥಿತರಿದ್ದರು.
ಶ್ರಾವ್ಯ ಶೆಟ್ಟಿ ಸ್ವಾಗತಿಸಿ, ಸಮೀಕ್ಷಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿ, ದಿಶಾ ಕೋಟ್ಯಾನ್ ವಂದಿಸಿದರು.