ಕಾರ್ಕಳ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಹಾಗೂ ಕಾರ್ಕಳದ ಕುಂದಾಪ್ರದವರು ಇವರ ಸಂಯೋಜನೆಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ದಿನಾಂಕ 24 ಜುಲೈ 2025ರಂದು ಸಂಜೆ ಘಂಟೆ 4.30ರಿಂದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಹಾಲ್‌ನಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಹಿರಿಯ ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕರಾದ ಎ. ಎಸ್.ಎನ್. ಹೆಬ್ಬಾರ್ ಕುಂದಾಪುರ ಇವರು ‘ಭಾಷಿ ಅಲ್ಲ ಬದ್ಕ್’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ಬಳಿಕ ಕುಂದಾಪುರ ಕನ್ನಡ ಭಾಷೆಯಲ್ಲಿ ಜಾನಪದ ಗೀತಗಾಯನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಆಷಾಡ ದಿನಗಳ ವಿಶೇಷ ತಿಂಡಿ ತಿನಿಸುಗಳ ಖಾದ್ಯವಿರುತ್ತದೆ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.