ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಮತ್ತು ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ – ವಿಶ್ವ ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಂಗ ಸಾಧಕರಾದ ರಂಗಭೂಮಿ ಕಲಾವಿದರು ನಿರ್ದೇಶಕರಾದ ಡಿ. ವೆಂಕಟರಮಣಯ್ಯ (ಅಪ್ಪಾಜಿ), ಸುಗಮ ಸಂಗೀತ ಗಾಯಕರು ರಂಗ ನಿರ್ದೇಶಕರು ಕಲಾವಿದರಾದ ಕೆ. ಲಕ್ಷ್ಮಣ ಸುವರ್ಣ, ರಂಗಭೂಮಿ ಕಲಾವಿದರಾದ ಶ್ರೀಮತಿ ಕಲ್ಯಾಣಿ ಪ್ರದೀಪ್ ಹಾಗೂ ರಂಗಭೂಮಿ ನಿರ್ದೇಶಕರು ಸಂಘಟಕರು ಕಲಾವಿದರು ಲೇಖಕರಾದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಬಳ್ಳಾರಿ ಇವರುಗಳಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ ಕಾಸರಗೋಡು ಇದರ ಪ್ರತಿಷ್ಠಿತ ‘ವಿಶ್ವ ರಂಗಭೂಮಿ ಪ್ರಶಸ್ತಿ 2025’ನ್ನು ನೀಡಿ ಗೌರವಿಸಲಾಯಿತು.
ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ವಿಶ್ವ ರಂಗಭೂಮಿ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಸ್ಮರಣೆಕೆ, ರೇಷ್ಮೆ ಶಾಲು, ಹಾರ ಮತ್ತು ಮಧೂರು ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ದೇವರ ಭಾವಚಿತ್ರವನ್ನು ನೀಡಿ ಗುರುಹಿರಿಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ಅಭಿನಂದಿಸಲಾಯಿತು.
ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಡಾ. ಕೆ.ಸಿ. ಬಲ್ಲಾಳ್ ಬೆಂಗಳೂರು, ಡಾ. ಎಂ.ಜಿ.ಆರ್. ಅರಸ್ ಮೈಸೂರು, ದಯಾಸಾಗರ ಚೌಟ ಮುಂಬಯಿ, ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಸಿ.ಎಂ. ತಿಮ್ಮಯ್ಯ ಬೆಂಗಳೂರು, ಎಲ್.ಎಸ್. ಶಾಸ್ತ್ರಿ ಬೆಳಗಾವಿ, ಕಾಸರಗೋಡು ನಗರ ಸಭಾ ಕೌನ್ಸಿಲರ್ ಶ್ರೀ ಕೆ ವರಪ್ರಸಾದ ಕೋಟೆಕಣಿ, ಶ್ರೀಮತಿ ಬಿ. ಶಾರದಾ, ಮಾಜಿ ಕೌನ್ಸಿಲರ್ ಶಂಕರ ಕೆ., ಕೆ. ಜಗದೀಶ ಕೂಡ್ಲು, ಕೆ. ಗುರು ಪ್ರಸಾದ್ ಕೋಟೆಕಣಿ, ಶ್ರೀಕಾಂತ ಕಾಸರಗೋಡು, ಕುಶಲ ಕುಮಾರ ಕೆ. ಕನ್ನಡ ಗ್ರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.