ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇವರು ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ಆಯೋಜಿಸಿದ ‘ವಿಶ್ವಕರ್ಮ ಕಲಾ ಸಿಂಚನ 2023’ ಕಾರ್ಯಕ್ರಮವು ದಿನಾಂಕ 08-10-2023ರ ಭಾನುವಾರ ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಸೇನಾಧಿಕಾರಿ ಬೃಜೇಶ್ ಚೌಟ “ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಜಗತ್ತೇ ಭಾರತದತ್ತ ಚಿತ್ತಹರಿಸುತ್ತಿದೆ. ದೇಶವು ಮತ್ತೆ ವಿಶ್ವಗುರುವಿನ ಸ್ಥಾನಕ್ಕೆ ಏರಬೇಕಾದರೆ ನಮ್ಮ ಕಲೆ ಸಂಸ್ಕೃತಿ, ಸಂಸ್ಕಾರ ಗತವೈಭವಕ್ಕೆ ಮರಳಬೇಕು. ಈ ನಿಟ್ಟಿನಲ್ಲಿ ವಿಶ್ವಕರ್ಮ ಸಮಾಜಕ್ಕೆ ವಿಶೇಷ ಜವಾಬ್ದಾರಿ ಇದೆ. ಹಲವು ದಾಳಿಗಳ ಹೊರತಾಗಿಯೂ ಸನಾತನ ಭಾರತೀಯ ನಾಗರೀಕತೆ ಮೂಲಸತ್ವವನ್ನು ಉಳಿಸಿಕೊಂಡು ಜಗತ್ತೇ ಗುರುತಿಸುವಂತೆ ಬೆಳೆದಿದೆ. ಇದರ ಕಲೆ, ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ವಿಶ್ವಕರ್ಮರು. ಜನ ಜೀವನ, ದೇಶ ದೇಶಗಳ ನಡುವಿನ ಸಂಬಂಧಗಳು ಮತ್ತು ಸಂಸ್ಕೃತಿಗಳು ಬದಲಾಗಿವೆ. ಕಲೆಯ ವಾರಸುದಾರರಾದ ವಿಶ್ವಕರ್ಮರು ಅವುಗಳನ್ನು ಹಂಚಿ ಕೊಂಡು, ಇನ್ನಷ್ಟು ವಿಸ್ತರಿಸಿ ದೇಶದ ವೈಭವವನ್ನು ಮತ್ತಷ್ಟು ಎತ್ತರಕ್ಕೆ ಏರಿಸಬೇಕು” ಎಂದರು.
ಬೆಂಗಳೂರಿನ ವಿಪ್ರೊ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಹರಿದಾಸ್ ಎಸ್. ಪಿ.ಆಚಾರ್ಯ ಮಾತನಾಡಿ “ಪ್ರಪಂಚದ ಶ್ರೇಷ್ಠ ಪರಂಪರೆ ಹೊಂದಿರುವ ಜನಾಂಗ ವಿಶ್ವಕರ್ಮರದು. ಸಮಾಜದ ಇತಿಹಾಸ, ಪರಂಪರೆಗಳನ್ನು ಯುವಜನರು ಅಧ್ಯಯನ ಮಾಡಬೇಕು.” ಎಂದರು.
ಎಂ.ಆರ್.ಪಿ.ಎಲ್ ನ ನಿವೃತ್ತ ಡಿಜಿಎಂ (ಆಪರೇಷನ್) ವೈ.ಎಂ. ದೇವದಾಸ್ ಮಾತನಾಡಿ “ತಾಂತ್ರಿಕತೆ ಬೆಳೆದಂತೆ ಪರಂಪರಾಗತ ಜ್ಞಾನ ನಿರ್ದಿಷ್ಟ ಸಮಾಜಕ್ಕೆ ಸೀಮಿತವಾಗಿ ಉಳಿದಿಲ್ಲ. ಯುವಜನರು ಈ ಪರಿವರ್ತನೆಗೆ ಒಗ್ಗಿಕೊಂಡು ಈಗಿನ ಪೈಪೋಟಿ ಎದುರಿಸುವ ಸಾಮರ್ಥ್ಯ ಗಳಿಸುವುದು ಬಲುಮುಖ್ಯ.” ಎಂದರು.
ಕೌಶಿಕ್ ಎಸ್. ಪಯ್ಯಾಲ್ ಸಭೆಯನ್ನು ಉದ್ದೇಶಿಸಿ “ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಮತ್ತು ಪಾರಂಪರಿಕ ಜ್ಞಾನಗಳನ್ನು ಬೆಸೆಯ ಬೇಕಿದೆ. ನಮ್ಮಲ್ಲಿನ ಕಲಾವಂತಿಕೆಯನ್ನು ಪರಸ್ಪರ ಹಂಚಿಕೊಂಡು ಎಲ್ಲರೂ ಒಟ್ಟಾಗಿ ಬೆಳೆಯಬೇಕಿದೆ.” ಎಂದರು.
ಪುರೋಹಿತ ಉದ್ಯಾವರ ವಿಶ್ವನಾಥ ಆಚಾರ್ಯ, ಛಾಯಾಗ್ರಾಹಕ ಯಜೇಶ್ವರ ಆಚಾರ್ಯ, ಸಂಗೀತ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ, ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಕಲಾ ಪರಿಷತ್ ಅಧ್ಯಕ್ಷ ಎಸ್.ಪಿ.ಗುರುದಾಸ್ “ಕಲಾ ಪರಿಷತ್ತು ನವೆಂಬರ್‌ನಿಂದ ಕಲಾ ಚಟುವಟಿಕೆಯನ್ನು ಇನ್ನಷ್ಟು ವಿಸ್ತರಿಸಲಿದೆ. ನಮ್ಮ ಸಮಾಜದಲ್ಲಿ ಅದ್ಭುತ ಕಲಾವಿದರಿದ್ದಾರೆ. ಅವರಿಂದ ತರಬೇತಿ ಹಮ್ಮಿಕೊಳ್ಳಲಿದ್ದೇವೆ.” ಎಂದು ಹೇಳಿದರು.
ಭಕ್ತಿ ಸಿಂಚನ, ಜ್ಞಾನ ಸಿಂಚನ, ಕಲಾ ಸಿಂಚನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಶ್ವಕರ್ಮ ಕಲಾ ಪರಿಷತ್ತಿನ ಗೌರವಾಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ ಉಪಸ್ಥಿತರಿದ್ದರು. ಗೌರವ ಸಲಹೆಗಾರ, ವಿಶ್ರಾಂತ ಪ್ರಾಧ್ಯಾಪಕ ಯಶವಂತ ಜಿ. ಆಚಾರ್ಯ ಸ್ವಾಗತಿಸಿ, ವೈ.ಎನ್.ತಾರನಾಥ ಆಚಾರ್ಯ ವಂದಿಸಿದರು. ಭರತ್ ರಾಜ್ ಬೈಕಾಡಿ ನಿರೂಪಿಸಿದರು.
ಭಕ್ತಿ ಸಿಂಚನ ಸ್ಪರ್ಧೆಯ ವಿಜೇತರು.
ಕಿರಿಯರ ವಿಭಾಗ :
ಪ್ರಥಮ ಆಯುಷ್ ಪ್ರೇಮ್, 8ನೇ ತರಗತಿ, ಆಕಾಶಭವನ, ಮಂಗಳೂರು.
ದ್ವಿತೀಯ ದಿಯಾ ಎಸ್. ಆಚಾರ್ಯ, 7ನೇ ತರಗತಿ, ಉಳ್ಳಾಲ.
ತೃತೀಯ ಸಾನ್ವಿಕಾ ಪ್ರಶಾಂತ್, 7ನೇ ತರಗತಿ, ತೊಕ್ಕೊಟ್ಟು.
ಭಕ್ತಿ ಸಿಂಚನ ಹಿರಿಯರ ವಿಭಾಗ :
ಪ್ರಥಮ ಪ್ರಜ್ಞಾ ಆಚಾರ್ಯ, ಬಿ.ಕಾಂ ಪದವೀಧರೆ, ಕುಂಜಾರುಗಿರಿ, ಉಡುಪಿ.
ದ್ವಿತೀಯ ಸೋಮಿತ, ಎಂ.ಎಸ್ಸಿ ವಿದ್ಯಾರ್ಥಿನಿ, ಪುತ್ತೂರು.
ತೃತೀಯ ಭರತ್ ಆಚಾರ್ಯ, ದ್ವಿತೀಯ ಪದವಿ, ನೀರ್ಚಾಲು.
ಜ್ಞಾನ ಸಿಂಚನ ಸ್ಪರ್ಧೆಯ ವಿಜೇತರು.
ಕಿರಿಯರ ವಿಭಾಗ :
ಪ್ರಥಮ ದೀಪಾಂಶು 7ನೇ ತರಗತಿ, ಮಣ್ಣಗುಡ್ಡ, ಮಂಗಳೂರು ಮತ್ತು ವಿರಾಜ್ 7ನೇ ತರಗತಿ ಉರ್ವ, ಮಂಗಳೂರು
ದ್ವಿತೀಯ ಅಮೃತಾ ಎ.ಜಿ, 10ನೇ ತರಗತಿ, ಮಂಗಳಾದೇವಿ, ಮಂಗಳೂರು ಮತ್ತು ಪೃಥ್ವಿ, 9ನೇ ತರಗತಿ, ರಥಬೀದಿ ಮಂಗಳೂರು.
ತೃತೀಯ ಸುಮುಖ್ ಉಪೇಂದ್ರ ಆಚಾರ್ಯ, 9ನೇ ತರಗತಿ ಪಡೀಲ್, ಮಂಗಳೂರು ಮತ್ತು ಅವ್ಯುಕ್ತ್ 7ನೇ ತರಗತಿ ಎಕ್ಕೂರು, ಮಂಗಳೂರು.
ಜ್ಞಾನ ಸಿಂಚನ ಹಿರಿಯರ ವಿಭಾಗ
ಪ್ರಥಮ ಲತಾ ಆಚಾರ್ಯ, ಶಿಕ್ಷಕಿ, ಕಾವೂರು, ಮಂಗಳೂರು ಮತ್ತು ಗಾಯತ್ರಿ ಆಚಾರ್ಯ, ಕಾಗ್ನಿ ಸೆಂಟರ್ ಉದ್ಯೋಗಿ, ಕಾವೂರು ಮಂಗಳೂರು .
ದ್ವಿತೀಯ ಮಮತಾ ಪ್ರವೀಣ್ ಆಚಾರ್ಯ ಆನಂತಾಡಿ, ಶಿಕ್ಷಕಿ, ಪಂಡಿತ್ ಹೌಸ್, ಮಂಗಳೂರು ಮತ್ತು ಆದ್ಯ ಪ್ರವೀಣ್ ಆಚಾರ್ಯ ಆನಂತಾಡಿ, ಪಂಡಿತ್ ಹೌಸ್, ಮಂಗಳೂರು.
ತೃತೀಯ ಸ್ಕಂದ ಉಪೇಂದ್ರ ಆಚಾರ್ಯ, ದ್ವಿತೀಯ ಬಿ.ಎಸ್ಸಿ, ಪಡೀಲ್, ಮಂಗಳೂರು ಮತ್ತು ವಾಣಿ ಉಪೇಂದ್ರ ಆಚಾರ್ಯ, ಸುಮುಖ್ ಕೇಕ್ಸ್, ಪಡೀಲ್, ಮಂಗಳೂರು.
ಚಿತ್ರ ಸಿಂಚನ ಸ್ಪರ್ಧೆಯ ವಿಜೇತರು.
ಪ್ರಥಮ ಕಾರ್ತಿಕ್ ಆಚಾರ್ಯ, ಮಾರ್ಕೆಟಿಂಗ್ ಆಫೀಸರ್,ಕೃಷ್ಣಾಪುರ, ಮಂಗಳೂರು.
ದ್ವಿತೀಯ ಸಾನ್ವಿಕಾ ಪ್ರಶಾಂತ್ 7ನೇ ತರಗತಿ, ತೊಕ್ಕೊಟ್ಟು. ಮಂಗಳೂರು.
ತೃತೀಯ ಭರತ್ ಆಚಾರ್ಯ, ದ್ವಿತೀಯ ಪದವಿ, ನೀರ್ಚಾಲು, ಕಾಸರಗೋಡು.