ವಿಟ್ಲ: ಯಕ್ಷಭಾರತ ಸೇವಾ ಪ್ರತಿಷ್ಠಾನ ಇದರ 8ನೇ ವರ್ಷದ ‘ವಿಟ್ಲ ಯಕ್ಷೋತ್ಸವ 2023’ ಕಾರ್ಯಕ್ರಮವು ವಿಟ್ಲ ಶ್ರೀ ಭಗವತೀ ದೇವಸ್ಥಾನದ ರಂಗಮಂಟಪದಲ್ಲಿ ನಡೆಯಲಿದೆ. ದಿನಾಂಕ 02-09-2023ರಂದು ಮಧ್ಯಾಹ್ನ 3ರಿಂದ ಮಕ್ಕಳ ಯಕ್ಷಗಾನ, ತೆಂಕುತಿಟ್ಟಿನ ನುರಿತ ಕಲಾವಿದರಿಂದ ಯಕ್ಷಗಾನ, ಸಮ್ಮಾನ ಹಾಗೂ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮವನ್ನೂಳಗೊಂಡಿದೆ.
ಅಂದು ಮದ್ಯಾಹ್ನ ಘಂಟೆ 3.00ಕ್ಕೆ ಯಕ್ಷಭಾರತ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ನಾಟ್ಯ ಗುರು ಸಬ್ಬಣಕೋಡಿ ರಾಮ ಭಟ್ ಅವರ ನಿರ್ದೇಶನದಲ್ಲಿ ‘ಕದಂಬ ಕೌಶಿಕೆ’ ಯಕ್ಷಗಾನ ಬಯಲಾಟ ನಡೆಯಲಿದೆ.
ರಾತ್ರಿ ಘಂಟೆ 7.00ರಿಂದ ತೆಂಕು ತಿಟ್ಟಿನ ನುರಿತ ಕಲಾವಿದರಿಂದ ‘ಸುದರ್ಶನೋಪಖ್ಯಾನ’ ಎಂಬ ಬಯಲಾಟ ನಡೆಯಲಿದ್ದು, ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತಾರಾಗಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಹಾಗೂ ದೇವರಾಜ್ ಆಚಾರ್ಯ, ಚಂಡೆ,ಮದ್ದಳೆಯಲ್ಲಿ ಶ್ರೀ ಚಂದ್ರಶೇಖರ ಸಾರಪಾಡಿ ಮತ್ತು ಶ್ರೀಧರ್ ವಿಟ್ಲ, ಚಕ್ರತಾಳದಲ್ಲಿ ವಸಂತ ವಾಮದಪದವು ಸಹಕರಿಸಲಿದ್ದಾರೆ. ಮುಮ್ಮೇಳದ ಪ್ರಧಾನ ಪಾತ್ರಗಳಲ್ಲಿ ವಸಂತ ಗೌಡ ಕಾಯರ್ತಡ್ಕ, ಚಂದ್ರಶೇಖರ ಧರ್ಮಸ್ಥಳ, ಹರೀಶ್ ಶೆಟ್ಟಿ ಮಣ್ಣಾಪು, ಬಾಲಕೃಷ್ಣ ಗೌಡ ಮಿಜಾರ್, ಅರಳ ಗಣೇಶ್ ಶೆಟ್ಟಿ, ಸದಾಶಿವ ಆಚಾರ್ಯ ವೇಣೂರು, ಮೋಹನ ಬೆಳ್ಳಿಪಾಡಿ, ಶಿವಾನಂದ ಪೆರ್ಲ, ಶಿವರಾಜ್ ಬಜಕೊಡ್ಲು, ಕೀರ್ತನ, ಡೀಕಯ, ಲೋಕೇಶ್ ಮತ್ತು ಸಚಿನ್, ಹಾಸ್ಯ ಕಲಾವಿದರಾಗಿ ಜಯರಾಮ ಆಚಾರ್ಯ ಹಾಗೂ ಪ್ರಜ್ವಲ್ ಕುಮಾರ್, ಸ್ತ್ರೀ ವೇಷದಲ್ಲಿ ಪ್ರಶಾಂತ್ ನೆಲ್ಯಾಡಿ, ಸತೀಶ್ ನೀರ್ಕರೆ ಹಾಗೂ ಚರಣ್ ಕಾಣಿಯೂರು ಭಾಗವಹಿಸಲಿದ್ದಾರೆ.
ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ರಾಜಾರಾಮ್ ಬಲಿಪಗುಳಿ, ಮಾವೆ ದಿನಕರ ಭಟ್, ರವೀಶ್ ವಿಟ್ಲ, ನರ್ಸಪ್ಪ ಪೂಜಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಭಾಗವತ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಸಬ್ಬಣಕೋಡಿ ರಾಮ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಭೂಸೇನೆಯ ನಿವೃತ್ತ ಹವಾಲ್ದಾರ್ ಧನಂಜಯ ನಾಯ್ತೊಟ್ಟು ಇವರೆಲ್ಲರನ್ನು ಸನ್ಮಾನಿಸಲಾಗುವುದು.
ಆಗಸ್ಟ್ 17ರಿಂದ ಸೆಪ್ಟೆಂಬರ್ 27ರವರೆಗೆ ಸಿಂಹ ಮಾಸದ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅದೇ ರೀತಿ ವಿಟ್ಲ ಯಕ್ಷೋತ್ಸವ ನಡೆಯಲಿದೆ.