ಉಡುಪಿ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಸಂಘಟನೆ ಉಡುಪಿ ಹಾಗೂ ಕಥೊಲಿಕ್ ಸಭಾ ಮಿಲಾಗ್ರಿಸ್ ಘಟಕ ಕಲ್ಯಾಣ್ಪುರ ಇವರ ಜಂಟಿ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ‘ವೊವಿಯೊ- ವೇರ್ಸ್’ ಎಂಬ ಕೊಂಕಣಿ ಮದುವೆ ಸಮಾರಂಭದ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರವನ್ನು ದಿನಾಂಕ 29 ಜೂನ್ 2025ರಂದು ಪೂರ್ವಾಹ್ನ 9-30 ಗಂಟೆಗಫೆ ಕಲ್ಯಾಣ್ಪುರದ ಮಿಲಾಗ್ರಿಸ್ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಧರ್ಮಗುರುಗಳಾದ ಮೊನ್ಸಿ. ಫರ್ಡಿನಾಂಡ್ ಗೊನ್ಸಾಲ್ವಿಸ್ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು, ಕಲ್ಯಾಣ್ಪುರದ ಮಿಲಾಗ್ರಿಸ್ ಕಾಲೇಜಿನ ಪ್ರಿನ್ಸಿಪಾಲ್ ಆದ ಡಾ. ವಿನ್ಸೆಂಟ್ ಆಳ್ವಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಥೊಲಿಕ್ ಸಭಾ ಮಿಲಾಗ್ರಿಸ್ ಘಟಕದ ಅಧ್ಯಕ್ಷರಾದ ಶ್ರೀಮತಿ ಮಾರ್ಸೆಲಿನ್ ಸೆರಾ ಹಾಗೂ ಕೊಂಕಣಿ ಸಾಹಿತ್ಯ, ಕಲಾ ಮತ್ತು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾದ ಡಾ. ಫ್ಲಾವಿಯಾ ಕ್ಯಾಸ್ತೆಲಿನೊರವರು ಉಪಸ್ಥಿತರಿರುವರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀ ಅನಿಲ್ ಡಿಕುನ್ಹಾ, ಶ್ರೀ ಗ್ಲೆನನ್ ಡಿಸೋಜ ಕಾರ್ಯಗಾರವನ್ನು ನಡೆಸಿಕೊಡಲಿರುವರು. ಸಮಾರೋಪ ಸಮಾರಂಭದಲ್ಲಿ ಫೆದರ್ ಕಮ್ಯುನಿಕೇಶನ್, ಕಲ್ಯಾಣ್ಪುರ ಇದರ ಮಾಲಕರಾದ ಶ್ರೀ ವಾಲ್ಟರ್ ಸಿರಿಲ್ ಪಿಂಟೊರವರು ಅತಿಥಿಗಳಾಗಿ ಉಪಸ್ಥಿತರಿರುವರು.