Subscribe to Updates

    Get the latest creative news from FooBar about art, design and business.

    What's Hot

    “ನುಡಿಮುತ್ತು” ಕೃತಿಲೋಕಾರ್ಪಣೆ | ಜೂನ್ 18

    June 16, 2025

    ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಬೈಠಕ್ @ ಕೊಡಿಯಾಲ್‌ಗುತ್ತು ಸಂಗೀತ ಕಛೇರಿ | ಜೂನ್ 21

    June 16, 2025

    ಪುಸ್ತಕ ವಿಮರ್ಶೆ | ನಿರಂಜನರ ‘ಚಿರಸ್ಮರಣೆ’

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿದ್ಯಾ ರಾಮಕೃಷ್ಣ ಅವರಿಗೆ “ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ” ಪುರಸ್ಕಾರ
    Awards

    ವಿದ್ಯಾ ರಾಮಕೃಷ್ಣ ಅವರಿಗೆ “ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ” ಪುರಸ್ಕಾರ

    October 30, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮುಂಬೈ : ಮುಂಬೈ ವಿಶ್ವವಿದ್ಯಾನಿಲಯ, ಕನ್ನಡ ವಿಭಾಗದ ಎಂ. ಎ. ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾ ರಾಮಕೃಷ್ಣ ಅವರು ‘ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.
    ಹೊರನಾಡಾದ ಮುಂಬೈಯಲ್ಲಿ ನೆಲೆಸಿ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಸಾಹಿತ್ಯವನ್ನು ವಿಭಿನ್ನ ನೆಲೆಗಳಲ್ಲಿ ಬಲಗೊಳಿಸಿದ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಶತಮಾನೋತ್ಸವದ ನೆನಪಿಗೆ ಮುಂಬೈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರಿಗೆ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ನೀಡುವ ಉಪಕ್ರಮ ಆರಂಭವಾಗಿದ್ದು ಪ್ರಸ್ತುತ ಸಾಲಿನ  ಈ ಪುರಸ್ಕಾರಕ್ಕೆ ವಿದ್ಯಾ ಅವರನ್ನು ಆಯ್ಕೆ ಮಾಡಲಾಗಿದೆ.  ಈ ಪುರಸ್ಕಾರವು ನಗದು ಬಹುಮಾನ, ಕೃತಿ ಕರಂಡಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
    ವಿದ್ಯಾ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಷಯದಲ್ಲಿ ತಾಂತ್ರಿಕ ಪದವಿ ಪಡೆದು ಸುಮಾರು ಎರಡು ದಶಕಗಳ ಕಾಲ ಐ.ಟಿ ಕ್ಷೇತ್ರದಲ್ಲಿ ವಿವಿಧೆಡೆ ಕಾರ್ಯ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸಾಹಿತ್ಯಾಸಕ್ತಿಯಿಂದ ಇದೀಗ ಕನ್ನಡ ಸ್ನಾತಕೋತ್ತರ ಅಧ್ಯಯನದಲ್ಲಿ ತೊಡಗಿಕೊಂಡ ಇವರು, ‘ಶಿವರಾಮ ಕಾರಂತರ ಪ್ರಬಂಧಗಳು – ಒಂದು ಅಧ್ಯಯನ’ ಎಂಬ ಸಂಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿ,  ‘ಕುವೆಂಪು ಮತ್ತು ಕಾರಂತರ ಆತ್ಮಕಥೆಗಳು – ಒಂದು ಅಧ್ಯಯನ’ ಎಂಬ ಮತ್ತೊಂದು ಸಂಪ್ರಬಂಧದ ರಚನೆಯಲ್ಲಿ ನಿರತರಾಗಿದ್ದಾರೆ.
    ಈ ಪುರಸ್ಕಾರವನ್ನು ದಿನಾಂಕ 01-12-2023ರಂದು ಮುಂಬೈ ವಿಶ್ವ ವಿದ್ಯಾಲಯದಲ್ಲಿ ಪ್ರದಾನ ಮಾಡಲಾಗುವುದೆಂದು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಹಾಗೂ “ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ”ದ ಸಂಚಾಲಕ ಅರವಿಂದ ಬಲ್ಲಾಳ ಅವರು ತಿಳಿಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರು ಆಚಾರ್ಯ ಮಠ ವಠಾರದಲ್ಲಿ ‘ಸ್ಯಾಕ್ಸೋಫೋನ್ ಕಛೇರಿ’
    Next Article ಮೌನೇಶ್ ವಿಶ್ವಕರ್ಮ ಇವರ ‘ತಂತ್ರಜ್ಞಾನದ ಮಾಯೆ’ ನಾಟಕ – ಅತ್ಯುತ್ತಮ ಕೃತಿ ಪ್ರಶಸ್ತಿಗೆ ಆಯ್ಕೆ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ನಿರಂಜನರ ‘ಚಿರಸ್ಮರಣೆ’

    June 16, 2025

    ಡಾ.ತಲ್ಲೂರು ಶಿವರಾಮ ಶೆಟ್ಟರಿಗೆ ‘ಕರುನಾಡ ಸೇವಾ ಕಣ್ಮಣಿ’ ರಾಜ್ಯ ಪ್ರಶಸ್ತಿ

    June 16, 2025

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಸುಪ್ತದೀಪ್ತಿಯವರ ನೂತನ ಕೃತಿಗಳ ಅನಾವರಣ | ಜೂನ್ 21

    June 16, 2025

    ಪಾರ್ವತಿ ಜಿ. ಐತಾಳರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’ ಕೃತಿ ಲೋಕಾರ್ಪಣೆ

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.