ಕಾಸರಗೋಡು : ಕಳೆದ ಎರಡು ದಶಕಗಳಿಂದ ಕಾಸರಗೋಡಿನ ಹೃದಯ ಭಾಗ ಕರಂದಕ್ಕಾಡಿನಲ್ಲಿ ಸಕ್ರಿಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿರುವ ‘ಪದ್ಮಗಿರಿ ಕಲಾ ಕುಟೀರ’ಕ್ಕೆ ಮಂಗಳೂರಿನ ‘ಟಾಪ್ ವಿಡಿಯೋ ಅಂಡ್ ಫೋಟೋ ಸಂಸ್ಥೆ’ಯವರು ಕುಡಿಯುವ ನೀರಿನ ಘಟಕವನ್ನು ದಿನಾಂಕ 20 ಜುಲೈ 2025ರಂದು ಕೊಡುಗೆಯಾಗಿ ನೀಡಿದ್ದಾರೆ.
ಸಂಸ್ಥೆಯ ಪದಾಧಿಕಾರಿಗಳಾದ ಚಂದ್ರಕಾಂತ ವೋರಾ (ಟಿಕ್ಕು) ಅವರು ಪ್ರಥಮ ನೀರಿನ ಲೋಟವನ್ನು ಖ್ಯಾತ ಮೂಳೆ ತಜ್ಞರಾದ ಡಾ. ಕೆ. ಕೆ. ಶಾನು ಭೋಗ್ ಅವರಿಗೆ ನೀಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಛಾಯಾಗ್ರಾಹಕ ಕೆ. ಗಣೇಶ್ ಶಣೈ, ಚಲನಚಿತ್ರ ನಟಿ ಶೋಭಾ ಶೆಟ್ಟಿ ಭಾಗವಹಿಸಿದ್ದರು. ರಂಗ ಚಿನ್ನಾರಿಯ ನಿರ್ದೇಶಕರು ಹಾಗೂ ಸಂಚಾಲಕರಾದ ಕಾಸರಗೋಡು ಚಿನ್ನಾ, ನಿರ್ದೇಶಕ ಕೆ. ಸತೀಶ್ ಚಂದ್ರ ಭಂಡಾರಿ, ಲೇಖಕಿ ವಿಜಯಲಕ್ಷ್ಮೀ ಶಾನುಭೋಗ್, ಸೂರ್ಯಕಾಂತಿ, ಸ್ವರ ಚಿನ್ನಾರಿಯ ಬಬಿತಾ ಆಚಾರ್ಯ, ಪದಾಧಿಕಾರಿಗಳು ಹಾಗೂ ಅಂತರ್ ಧ್ವನಿಯ ಗಾಯಕ ಗಾಯಕಿಯರು ಉಪಸ್ಥಿತರಿದ್ದರು.