ಮೈಸೂರು : ಧ್ವನಿ ಫೌಂಡೇಷನ್ ಇದರ ವತಿಯಿಂದ ತಬಲಾ ತರಗತಿಯನ್ನು ಮೈಸೂರಿನ ಸೋಮನಾಥ ನಗರದಲ್ಲಿ ಆರಂಭಿಸುತ್ತಿದೆ. ಬದುಕು ಪುರುಸೊತ್ತು ಇಲ್ಲದಂತೆ ಸಾಗುತ್ತಿದೆ. ಹಳ್ಳಿಯ ಮಕ್ಕಳಿಗೆ ಹಲವು ಬಗೆಯ ಕಲಿಕೆಗಳಿಗೆ ಅವಕಾಶವಿರುವುದಿಲ್ಲ. ಆದರೆ ನಾವು ಪಟ್ಟಣದಲ್ಲಿದ್ದೇವೆ. ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಸಾಧ್ಯವಾದಷ್ಟು ಅವರನ್ನು ಕಲಾ ಚಟುವಟಿಕೆಗಳಿಗೆ ಪ್ರೇರೇಪಿಸಿ. ಅವಕಾಶ ನೀಡಿ. ಅವರ ಮಾನಸಿಕ ಆರೋಗ್ಯ ಬಹು ಮುಖ್ಯ. ಅಕಾಡೆಮಿಕ್ ಕಲಿಕೆಯ ಜೊತೆಗೆ ಒಂದು ಸಾಂಸ್ಕೃತಿಕ ಸಾಂಗತ್ಯ ದೊರಕಿದರೆ ಅವರ ಭವಿಷ್ಯ ಇನ್ನಷ್ಟು ಉಜ್ವಲಗೊಳ್ಳಬಹುದು. ಕಲಿಕೆ ಯಾರ ಕೈಯಲ್ಲಿ, ಹೇಗೆ ನಡೆಯುತ್ತದೆ ಎಂಬುದು ಕೂಡ ಅತ್ಯಂತ ಮುಖ್ಯ. ವಾರಾಂತ್ಯ ರಂಗ ತರಗತಿ, ತಬಲಾ, ಸಂಗೀತ, ಭರತನಾಟ್ಯ, ಚಿತ್ರಕಲೆ ಇಷ್ಟು ವಿಷಯಗಳು ಧ್ವನಿ ಫೌಂಡೇಷನ್ ಅಡಿಯಲ್ಲಿ ಆರಂಭಗೊಂಡಿವೆ.
ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 9483918783 ಮತ್ತು 7019188932 ಸಂಖ್ಯೆಯನ್ನು ಸಂಪರ್ಕಿಸಿರಿ.