ಮೈಸೂರು : ನಟನ ರಂಗಶಾಲೆಯ ವತಿಯಿಂದ ಡಿಸೆಂಬರ್ ತಿಂಗಳ ವಾರಾಂತ್ಯ ರಂಗ ಪ್ರದರ್ಶನಗಳನ್ನು ದಿನಾಂಕ 06, 07, 13, 14, 21 ಮತ್ತು 28 ಡಿಸೆಂಬರ್ 2025ರಂದು ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಕಲಾ ಗಂಗೋತ್ರಿ ತಂಡದವರಿಂದ ಡಾ. ಬಿ.ವಿ. ರಾಜಾರಾಂ ಇವರ ನಿರ್ದೇಶನದಲ್ಲಿ ‘ಮತ್ತೆ ಮುಖ್ಯಮಂತ್ರಿ’, ದಿನಾಂಕ 07 ಡಿಸೆಂಬರ್ 2025ರಂದು ಮಧ್ಯಾಹ್ನ 03-00 ಮತ್ತು ಸಂಜೆ 6-30 ಗಂಟೆಗೆ ವಿ. ಬಾಲಕೃಷ್ಣನ್ ಇವರ ರಚನೆ ಮತ್ತು ನಿರ್ದೇಶನದಲ್ಲಿ ಚೆನ್ನೈಯ ಥಿಯೇಟರ್ ನಿಶಾ ತಂಡದವರಿಂದ ‘ದಿ ಗ್ರೇವ್ ಆಫ್ ದಾರಾಶಿಕೊ’ ಇಂಗ್ಲೀಷ್ ನಾಟಕ, ದಿನಾಂಕ 13 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ರಂಗ ಸಂಪದ ತಂಡದ ಚಿದಂಬರ ರಾವ್ ಜಂಬೆ ಇವರ ನಿರ್ದೇಶನದಲ್ಲಿ ‘ಶರ್ಮಿಷ್ಠೆ’, ದಿನಾಂಕ 14 ಡಿಸೆಂಬರ್ 2025ರಂದು ಮಧ್ಯಾಹ್ನ 03-00 ಮತ್ತು ಸಂಜೆ 6-30 ಗಂಟೆಗೆ ಬೆಂಗಳೂರಿನ ವಾಸ್ಪ್ ತಂಡದವರಿಂದ ವಿನಯ್ ಶಾಸ್ತ್ರಿ ಇವರ ನಿರ್ದೇಶನದಲ್ಲಿ ‘ನೀ ನಾನಾದ್ರೆ ನಾ ನೀನೇನಾ’, ದಿನಾಂಕ 21 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ನಟನ ಪಯಣ ರೆಪರ್ಟರಿ ತಂಡದವರಿಂದ ಮಂಡ್ಯ ರಮೇಶ್ ಇವರ ನಿರ್ದೇಶನದಲ್ಲಿ ‘ಸಂಸಾರದಲ್ಲಿ ಸನಿದಪ’, ದಿನಾಂಕ 28 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಂಗವಲ್ಲಿ ರವಿಪ್ರಸಾದ್ ಇವರ ನಿರ್ದೇಶನದಲ್ಲಿ ‘ಪರಮೇಶಿ ಪ್ರೇಮ ಪ್ರಸಂಗ’ ನಾಟಕ ಪ್ರದರ್ಶನಗೊಳ್ಳಲಿದೆ.
ನಟನ ರಂಗಮಂದಿರದಲ್ಲಿ ಪ್ರತಿದಿನ ಇಡೀ ಡಿಸೆಂಬರ್ ತಿಂಗಳು ರಂಗ ಶಾಲೆಯ ಮತ್ತು ಮಕ್ಕಳ ವಾರಾಂತ್ಯ ರಂಗ ಶಾಲೆಯ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಇದರೊಟ್ಟಿಗೇ, ಚಟುವಟಿಕೆಯ ಭಾಗವಾಗಿ ವಾರಾಂತ್ಯದಲ್ಲಿ ರಾಜ್ಯದ ಅನೇಕ ತಂಡಗಳು, ಪ್ರಸಿದ್ಧ ನಟರ ಪ್ರಯೋಗಗಳು ಪ್ರದರ್ಶನಗೊಳ್ಳುತ್ತಿದೆ. ಖ್ಯಾತ ನಟರಾದ ಶ್ರೀ ಮುಖ್ಯಮಂತ್ರಿ ಚಂದ್ರು, ಶ್ರೀಮತಿ ಉಮಾಶ್ರೀ, ಶ್ರೀ ಸಿಹಿಕಹಿ ಚಂದ್ರು ಇವರೊಟ್ಟಿಗೆ ರಂಗಭೂಮಿ, ಟಿ.ವಿ., ಸಿನಿಮಾದಲ್ಲಿ ಖ್ಯಾತರಾದ ಅನೇಕ ಹೊಸ ತಲೆಮಾರಿನ ಕಲಾವಿದರು ನಾಟಕಗಳಲ್ಲಿ ಭಾಗವಹಿಸಲಿದ್ದಾರೆ. ಸಂಪರ್ಕ : 7259537777

