ಮಧೂರು : ಉಳಿಯ ದನ್ವಂತರಿ ಯಕ್ಷಗಾನ ಕಲಾಸಂಘ ಮಧೂರು ಇದರ ವಾರದ ಕೂಟ ಉಳಿಯ ಮನೆಯ ಸುಧಾ ಮಂದಿರದಲ್ಲಿ ದಿನಾಂಕ 5 ಅಕ್ಟೋಬರ್ 2025 ಭಾನುವಾರದಂದು ‘ವೀರಮಣಿ ಕಾಳಗ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರು ಶ್ರೀ ವಾಸುದೇವ ಕಲ್ಲೂರಾಯ ಮಧೂರು ಮತ್ತು ಶ್ರೀ ರವಿಶಂಕರ ಮಧೂರು ಹಾಗೂ ಮದ್ದಳೆಯಲ್ಲಿ ಮುರಳಿ ಮಾಧವ ಮಧೂರು ಇವರುಗಳು ಸಹಕರಿಸಿದರು. ಮುಮ್ಮೇಳದಲ್ಲಿ ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಶ್ರೀ ಗೋಪಾಲ ಅಡಿಗಳು ಕೂಡ್ಲ, ಶ್ರೀ ಮಯೂರ ಆಸ್ರ ಉಳಿಯ, ಶ್ರೀಮತಿ ರಕ್ಷಾ ರಾಮ್ ಕಿಶೋರ ಆಸ್ರ, ಶ್ರೀಮತಿ ಧನ್ಯಮುರಳಿ ಕೃಷ್ಣ ಆಸ್ರ, ಶ್ರೀ ನರಸಿಂಹ ಬಲ್ಲಾಳ್, ಶ್ರೀ ಜಯರಾಮ ದೇವಾಸ್ಯ, ಶ್ರೀ ವಿಷ್ಣು ಭಟ್, ಸರಸ್ವತಿ ಗೋಪಾಲ ಅಡಿಗ ಕೂಡ್ಲು ಇವರುಗಳು ಸಹಕರಿಸಿದರು.