ಮಧೂರು : ಉಳಿಯ ದನ್ವ0ತರೀ ಯಕ್ಷಗಾನ ಕಲಾಸಂಘ ಮಧೂರು ಇದರ ವಾರದ ಕೂಟ ಉಳಿಯ ಮನೆಯ ಸುಧಾ ಮಂದಿರದಲ್ಲಿ ದಿನಾಂಕ 20 ಜುಲೈ 2025ರ ಬಾನುವಾರ ‘ಶ್ರೀರಾಮ ಪಟ್ಟಾಭಿಷೇಕ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ವಾಸುದೇವ ಕಲ್ಲೂರಾಯ ಮಧೂರು ಹಾಗೂ ಮದ್ದಲೆಗಳಲ್ಲಿ ಗೋಪಾಲ ಕೃಷ್ಣ ನಾವಡ ಮಧೂರು ಸಹಕರಿಸಿದರು. ಮುಮ್ಮೇಳದಲ್ಲಿ ದಶರಥ : ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಕೈಕೇಯಿ : ನರಸಿಂಹ ಬಲ್ಲಾಳ್, ಲಕ್ಷ್ಮಣ : ಶ್ರೀ ಮಯೂರ ಆಸ್ರ ಉಳಿಯ, ಮಂತರೆ : ಸುದರಕೃಷ್ಣ ಗಟ್ಟಿ ಕಾಸರಗೋಡು, ಶ್ರೀ ರಾಮ : ಗೋಪಾಲ ಅಡಿಗ ಕೂಡಲು, ಕೌಸಲ್ಯಾ : ಶ್ರೀಮತಿ ರಕ್ಷಾ ರಾಮ ಕಿಶೋರ ಆಸ್ರ, ಸೀತಾ : ಶ್ರೀಮತಿ ಸರಸ್ವತಿ ಟೀಚರ್ ಕೂಡ್ಲು ಇವರುಗಳು ಸಹಕರಿಸಿದರು.