ಮಧೂರು : ಉಳಿಯ ದನ್ವಂತರಿ ಯಕ್ಷಗಾನ ಕಲಾಸಂಘ ಮಧೂರು ಇದರ ವಾರದ ಕೂಟ ಉಳಿಯ ಮನೆಯ ಸುಧಾ ಮಂದಿರದಲ್ಲಿ ದಿನಾಂಕ 31 ಆಗಸ್ಟ್ 2025 ಭಾನುವಾರದಂದು ‘ಕರ್ಣ ಭೇಧ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರು ಶ್ರೀ ವಾಸುದೇವ ಕಲ್ಲೂರಾಯ ಮಧೂರು ಹಾಗೂ ಮದ್ದಳೆಯಲ್ಲಿ ಶ್ರೀ ಗೋಪಾಲ ಕೃಷ್ಣ ನಾವಡ ಮಧೂರು ಇವರುಗಳು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಕೃಷ್ಣ : ಶ್ರೀ ನರಸಿಂಹ ಬಲ್ಲಾಳ್, ಕರ್ಣ : ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಕುಂತಿ : ಶ್ರೀ ಮಯೂರ ಆಸ್ರ ಉಳಿಯ ಇವರುಗಳು ಭಾಗವಹಿಸಿದ್ದರು.