ಮಂಗಳೂರು : ಸಂಗೀತ ಪರಿಷತ್ತು ಮಂಗಳೂರು ಇವರು ಭಾರತೀಯ ವಿದ್ಯಾಭವನ ಇದರ ಸಹಯೋಗದೊಂದಿಗೆ ಆಯೋಜಿಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯು ದಿನಾಂಕ 20 ಅಕ್ಟೋಬರ್ 2024 ರಂದು ಮಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು.
ಸೀನಿಯರ್ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಡಾ. ಎಸ್. ಸುಂದರ್ ಹಾಗೂ ಶ್ರೀಮತಿ ಜೆ. ಬಿ. ಕೀರ್ತನ ಇವರ ಶಿಷ್ಯೆ ಪ್ರಾರ್ಥನಾ ಬಿ. ಪ್ರಥಮ, ಶ್ರೀ ಅನೀಶ್ ವಿ. ಭಟ್ ಇವರ ಶಿಷ್ಯೆಯಾದ ಅನ್ವಿತಾ ಟಿ. ದ್ವಿತೀಯ, ಗಿರಿಜಾ ಭಟ್ ಸುರತ್ಕಲ್ ಇವರ ಶಿಷ್ಯೆಯಾದ ಸುಧೀಕ್ಷಾ ಆರ್. ಸಮಾಧಾನಕರ ಹಾಗೂ ಶ್ರೀಮತಿ ವೀಣಾ ರಾಘವೇಂದ್ರ ಇವರ ಶಿಷ್ಯೆ ಆತ್ಮಶ್ರೀ ಎಂ. ಸಮಾಧಾನಕರ ಬಹುಮಾನ ಪಡೆದಿರುತ್ತಾರೆ.
ಜೂನಿಯರ್ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಶ್ರೀಮತಿ ಅನುಸೂಯ ಪಾಠಕ್ ಇವರ ಶಿಷ್ಯ ಶ್ರೀವರ್ಚಸ್ ಪ್ರಥಮ, ಶ್ರೀಮತಿ ವಾರಿಜಾಕ್ಷಿ ಭಟ್ ಇವರ ಶಿಷ್ಯ ಪ್ರಣವ್ ಅಡಿಗ ದ್ವಿತೀಯ, ಶ್ರೀಮತಿ ಚೇತನಾ ಆಚಾರ್ಯ ಉಡುಪಿ ಇವರ ಶಿಷ್ಯ ಪರ್ಜನ್ಯ ಕೆ. ರಾವ್ ತೃತೀಯ ಹಾಗೂ ಶ್ರೀಮತಿ ಉಮಾಶಂಕರಿ ಪರ್ಕಳ ಇವರ ಶಿಷ್ಯೆ ಸ್ವಸ್ತಿ ಎಂ. ಭಟ್ ಸಮಾಧಾಕರ ಬಹುಮಾನ ಪಡೆದಿದ್ದಾರೆ.
