Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಹಿಳಾ ಸಾಧಕರು | ಬಹುಮುಖ ಪ್ರತಿಭಾವಂತ ಲೇಖಕಿ ವೈ.ಕೆ. ಸಂಧ್ಯಾ ಶರ್ಮ
    Article

    ಮಹಿಳಾ ಸಾಧಕರು | ಬಹುಮುಖ ಪ್ರತಿಭಾವಂತ ಲೇಖಕಿ ವೈ.ಕೆ. ಸಂಧ್ಯಾ ಶರ್ಮ

    March 8, 20241 Comment4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಅವರು ಹುಟ್ಟಿದ್ದು ಬೆಂಗಳೂರು ಆದರೂ ಅವರ ಹಿರಿಯರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಗಲವಾಡಿಗೆ ಸೇರಿದವರು. ತಂದೆ ಶ್ರೀ ವೈ.ಕೆ. ಕೇಶವಮೂರ್ತಿಯವರು, ಆಗಿನ ಮೈಸೂರು ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದವರು. ತಾಯಿ ಅಂಬಾಬಾಯಿ. ಸಂಪ್ರದಾಯಸ್ಥ ಕುಟುಂಬವಾದರೂ, ಆಧುನಿಕ ಮನೋಭಾವದ ಮನೆತನ. ತಂದೆ-ತಾಯಿಯರಿಂದ ದೊರೆತ ಸಂಸ್ಕಾರ ಅವರಿಗೆ ಸಾಹಿತ್ಯ-ಕಲೆಗಳಲ್ಲಿ ಆಸಕ್ತಿಯನ್ನು ಮೂಡಿಸಿತ್ತು. ಬಾಲಕಿಯಾಗಿದ್ದಾಗಲೇ ತಮ್ಮ ಪ್ರೌಢ ಶಾಲಾ ದಿನಗಳಲ್ಲಿಯೇ ಸಂಧ್ಯಾ ನಾಟಕವನ್ನು ಬರೆದಿದ್ದರು. ಆಗ ಅವರಿಗೆ ದೊರೆತ ಪ್ರೋತ್ಸಾಹದಿಂದ ಶಾಲಾ-ಕಾಲೇಜುಗಳ ದಿನಗಳಲ್ಲಿಯೇ ಓದಿನ ಜೊತೆಗೆ ಸಾಹಿತ್ಯದ ಓದು ಹಾಗೂ ಬರವಣಿಗೆ ಹವ್ಯಾಸವಾಯಿತು.

     

    ಮುಂದೆ ಸಂಧ್ಯಾ ಅವರು ಪದವಿಗೆ ಬಂದಾಗ ಕನ್ನಡ ಸಾಹಿತ್ಯದ ವಿದ್ಯಾರ್ಥಿನಿಯಾಗಿ ಕನ್ನಡ ಬಿ.ಎ. ಆನರ್ಸ್, ಕನ್ನಡ ಎಂ.ಎ. ಪದವಿಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಪದವಿಯನ್ನು ಪಡೆದುಕೊಂಡರು. ಜೊತೆ ಜೊತೆಗೆ ಸಾಹಿತ್ಯ ಕೃಷಿಯೂ ಸಾಗಿತ್ತು. ಸಾಹಿತ್ಯಕ್ಕೆ ಸಂಬಂಧಿಸಿದ ಉದ್ಯೋಗಗಳಲ್ಲೇ ಆಸಕ್ತಿ ತೋರಿದ ಸಂಧ್ಯಾ ಅವರು ಪ್ರಜಾಮತ, ಪ್ರಜಾಪ್ರಭುತ್ವ, ಇಂಚರ ಮುಂತಾದ ಪತ್ರಿಕೆಗಳಲ್ಲಿ ಉಪ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿ ಅನುಭವ ಗಳಿಸಿದರು. ನಂತರ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

     

    ಸಂಧ್ಯಾ ಅವರು ತಮ್ಮ ಪತ್ರಿಕೋದ್ಯಮ ದಿನಗಳು, ವಾರ್ತಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೂ ತಮ್ಮ ಸಾಹಿತ್ಯಾಸಕ್ತಿಯನ್ನು ಇಂಗಗೊಡಲಿಲ್ಲ. ನಿರಂತರವಾಗಿ ತಮ್ಮ ಬರವಣಿಗೆಯನ್ನು ಮುಂದುವರಿಸಿದರು. ಜೊತೆ ಜೊತೆಗೆ ‘ಸಂಧ್ಯಾ ಕಲಾವಿದರು’ ಎಂಬ ಹವ್ಯಾಸಿ ರಂಗ ಸಂಸ್ಥೆಯನ್ನು ಪತಿಯೊಂದಿಗೆ ಕಟ್ಟಿದರು. ಸಂಧ್ಯಾ ಅವರ ಪತಿ ಅನೇಕ ನಾಟಕಗಳನ್ನು ಬರೆದು, ನಿರ್ದೇಶಿಸಿ ನಟನೆಯನ್ನೂ ಮಾಡಿದರು. ಈ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ನಿರಂತರವಾಗಿ 46 ವರ್ಷ ದಂಪತಿಗಳಿಬ್ಬರೂ ಶ್ರಮಿಸಿದರು. ಸತಿಯ ಎಲ್ಲ ಸಾಹಿತ್ಯಕ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತವರು ಭಾರತೀಯ ಬಾಹ್ಯಾಕಾಶ ಇಲಾಖೆಯಲ್ಲಿ ಹಿರಿಯ ವಿಜ್ಞಾನಿಗಳಾಗಿ ನಿವೃತ್ತರಾಗಿರುವ ಶ್ರೀ ಎಸ್.ವಿ. ಕೃಷ್ಣ ಶರ್ಮ ಅವರು. ಸ್ವತಃ ನಾಟಕಕಾರ, ನಟ, ನಿರ್ದೇಶಕರಾದ ಶ್ರೀ ಶರ್ಮ ಅವರು ಅನೇಕ ಸಾಮಾಜಿಕ, ಪೌರಾಣಿಕ ನಾಟಕಗಳನ್ನು ರಂಗಕ್ಕೆ ತಂದು ಜನಪ್ರಿಯರಾಗಿದ್ದಾರೆ. ಇಂದಿಗೂ ಅವರ ರಂಗ ಸಂಸ್ಥೆ ‘ಸಂಧ್ಯಾ ಕಲಾವಿದರು’ ಸಕ್ರಿಯವಾಗಿ ನಾಟಕಗಳ ರಂಗ ಪ್ರದರ್ಶನವನ್ನು ನಿರಂತರವಾಗಿ, ಯಶಸ್ವಿಯಾಗಿ ಮಾಡುತ್ತ ಬಂದಿದ್ದು, ತನ್ನದೇ ಆದ ಪ್ರೇಕ್ಷಕ ವಲಯವನ್ನು ನಿರ್ಮಿಸಿಕೊಂಡಿದೆ. ಸಾಹಿತ್ಯ, ನಾಟಕ, ನೃತ್ಯ, ಸಂಗೀತ, ಪತ್ರಿಕೋದ್ಯಮ ಬಹುಮುಖ ಪ್ರತಿಭೆಯ ಸಂಧ್ಯಾ ಶರ್ಮ ಕನ್ನಡ ನಾಡಿನ ಮನೆ ಮಾತಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯ ಓದುಗರಿಗೆ ಅದೊಂದು ಚಿರಪರಿಚಿತ ಹೆಸರು. ರಂಗ ಪ್ರವೇಶ ಮಾಡುವ ನೃತ್ಯ ಪ್ರತಿಭೆಗಳಿಗೆ ಅವರು ಅನಿವಾರ್ಯರಾಗಿದ್ದಾರೆ.

    ಸಂಧ್ಯಾ ಸಾಹಸಿ ಮಹಿಳೆ. ಅವರು 1978ರಲ್ಲಿಯೇ ತಮ್ಮದೇ ಆದ ‘ಅಭಿನವ’ ಎನ್ನುವ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ, ತಮ್ಮ ಕೃತಿಗಳನ್ನಷ್ಟೇ ಅಲ್ಲದೆ, ಇತರ ಹಲವಾರು ಸಾಹಿತಿಗಳ ಕೃತಿಗಳನ್ನೂ ಪ್ರಕಟಿಸಿದರು. ಸಂಧ್ಯಾ ಅವರು ಕೂಚುಪುಡಿ ನೃತ್ಯವನ್ನೂ ಕಲಿತಿದ್ದಾರೆ. ಹೀಗಾಗಿ ‘ಪ್ರಭಾತ್ ಕಲಾವಿದರು’ ನೃತ್ಯ ಸಂಸ್ಥೆಯ ಅನೇಕ ನೃತ್ಯ ರೂಪಕಗಳಲ್ಲಿ ಭಾಗವಹಿಸಿ ನೃತ್ಯಕ್ಷೇತ್ರದಲ್ಲಿ ಅನುಭವ ಹೊಂದಿದ್ದಾರೆ. ಇಷ್ಟೇ ಅಲ್ಲದೆ, ‘ಸಂಧ್ಯಾ ಪತ್ರಿಕೆ’ ಎನ್ನುವ ಅಂತರ್ಜಾಲ ಸಾಂಸ್ಕೃತಿಕ ಪತ್ರಿಕೆಯನ್ನು ಹುಟ್ಟು ಹಾಕಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರ ಆರಂಭದ ದಿನಗಳ ಪತ್ರಿಕೋದ್ಯಮದ ಅನುಭವದ ಹಿನ್ನಲೆ, ಅವರಿಗಿರುವ ಮುದ್ರಣ ಪರಿಶ್ರಮ ಈ ಪತ್ರಿಕೆಯ ಹಿಂದೆ ಕೆಲಸ ಮಾಡಿದೆ. ಸಂಧ್ಯಾ ಅವರು ಅಂಕಣಕಾರ್ತಿಯಾಗಿದ್ದು, ನಾಡಿನ ವಿವಿಧ ಜನಪ್ರಿಯ ಪತ್ರಿಕೆಗಳಲ್ಲಿ ತಮ್ಮ ಅಂಕಣಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಪ್ರಜಾವಾಣಿ, ವಿಜಯವಾಣಿ ಸಂಯುಕ್ತ ಕರ್ನಾಟಕ, ಅರಗಿಣಿ ಮುಂತಾದ ಹಲವಾರು ಪತ್ರಿಕೆಗಳಲ್ಲಿ ತಮ್ಮ ಅಂಕಣಗಳನ್ನು ಬರೆದ ಅನುಭವ ಗಳಿಸಿದ್ದಾರೆ.

    ಅವರಿಗಿರುವ ನೃತ್ಯ ಕಲೆಯ ಬಗೆಗಿನ ಆಳವಾದ ತಿಳುವಳಿಕೆ, ಜ್ಞಾನ, ಅನುಭವಗಳ ಹಿನ್ನೆಲೆಯಲ್ಲಿ ಅವರ ಬರವಣಿಗೆ ಅರಳಿರುವಂತಹದು. ಇಂದಿಗೂ ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಅವರ ವಿಶ್ಲೇಷಣಾತ್ಮಕ ಸಹೃದಯ ಕಲಾ ವಿಮರ್ಶೆ ಮೂಡಿ ಬರುತ್ತಿರುವುದು. ನಗರದಲ್ಲಿ ಯಾರು ‘ರಂಗ ಪ್ರವೇಶ’ ಮಾಡಿದರೂ, ಸಂಧ್ಯಾ ಅವರು ಮುಖ್ಯ ಅತಿಥಿ ಹಾಗೂ ಅವರ ಪತ್ರಿಕೆಯಲ್ಲಿ ಸುದೀರ್ಘ ವಿಮರ್ಶೆ. ನೃತ್ಯ ಕಲೆಯ ಬಗೆಗೆ ಅಪಾರ ಸ್ಪಂದನೆಗಳನ್ನುಳ್ಳ ಸಂಧ್ಯಾ ತಮ್ಮ ವಸ್ತುನಿಷ್ಟ ವಿಮರ್ಶೆಯ ಮೂಲಕ ಕಲಾ ರಸಿಕರಿಗೆ ಕರಾರುವಕ್ಕಾದ ಅಭಿಪ್ರಾಯಗಳನ್ನು ಹಂಚುತ್ತಲೇ ಬಂದಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ಪ್ರತಿ ವಾರಪತ್ರಿಕೆಯಲ್ಲಿ ಅವರ ಸುಂದರ ನಗುಮುಖದ ಭಾವಚಿತ್ರ ಹೊತ್ತ ಅಂಕಣ, ರಂಗಪ್ರವೇಶ ಮಾಡುವ ಕಲಾವಿದರ ರಂಗಪ್ರವೇಶದ ಸಮಸ್ತ ವಿವರಗಳೊಂದಿಗೆ ಅವರ ಭಾವಚಿತ್ರದ ಮೂಲಕ ಕಲಾವಿದರನ್ನು ಅಪಾರ ಸಂಖ್ಯೆಯ ಕನ್ನಡ ನಾಡಿನ ಪತ್ರಿಕೆಯ ಓದುಗರಿಗೆ ತಲುಪಿಸುವ ಕೆಲಸವನ್ನು ನಿರಂತರವಾಗಿ ಮಾಡುವುದರೊಂದಿಗೆ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಬಹುಶಃ ನೃತ್ಯ ವಿಮರ್ಶೆ ಮಾಡುವ ಕನ್ನಡ ನಾಡಿನ ಏಕೈಕ ಮಹಿಳಾ ಕಲಾ ವಿಮರ್ಶಕಿ. ಇವರು ಎಂದರೆ ತಪ್ಪಾಗಲಾರದು.

    ‘ಸಾಹಿತಿಯಾಗಿ ಸೋತವನು ವಿಮರ್ಶಕವಾಗುತ್ತಾನೆ’ ಎಂಬ ಜನಪ್ರಿಯ ಹಾಸ್ಯೋಕ್ತಿ ಇದೆ. ಇದು ಎಲ್ಲ ವಿಮರ್ಶಕರಿಗೂ ಅನ್ವಯಿಸುವ ಮಾತಾಗಿರಬೇಕಾಗಿಲ್ಲ. ಸಂಧ್ಯಾ ಅವರು ಶ್ರೇಷ್ಠ ಕಲಾ ವಿಮರ್ಶಕಿಯಾಗಿರುವಂತೆ ಉತ್ತಮ ಸೃಜನಶೀಲ ಲೇಖಕಿಯೂ ಆಗಿದ್ದಾರೆ. ಇನ್ನೂರೈವತ್ತಕ್ಕೂ ಹೆಚ್ಚು ಸಣ್ಣ ಕಥೆಗಳು, ಮೂವತ್ತೈದು ಕಾದಂಬರಿಗಳು, ಐದು ಕಥಾ ಸಂಕಲನಗಳು, ಕವನ ಸಂಕಲನಗಳು, ಜೀವನ ಚರಿತ್ರೆ, ರಂಗ ವಿಮರ್ಶೆ, ವೈಚಾರಿಕ ಲೇಖನಗಳು, ನಾಟಕಗಳು, ಅಂಕಣಗಳು ಹೀಗೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಸಂಧ್ಯಾ ನಗು ಮೊಗದ ಆತ್ಮವಿಶ್ವಾಸಿ ಮಹಿಳೆ, ಸಾಹಸಿ, ಸಾಧಕಿ.

    ಸಂಧ್ಯಾ ಅವರ ಸಾಹಿತ್ಯದಲ್ಲಿ ಮಹಿಳಾ ಪ್ರಜ್ಞೆಯೊಂದು ನಿಚ್ಚಳವಾಗಿ ಕಾಣಿಸುತ್ತದೆ. ಸಾಮಾಜಿಕ ಕಳಕಳಿ, ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳ ಬಗೆಗೆ ಮಿಡಿಯುವ ಮನಸ್ಸಿದೆ. ಮಹಿಳಾ ಸಬಲೀಕರಣದ ಮಾದರಿಯಾಗಿ ಸಂಧ್ಯಾ ನನಗೆ ತೋರುತ್ತಾರೆ. ಅವರು 1974ರಲ್ಲೇ ‘ಮಹಿಳೆ ಮತ್ತು ಉದ್ಯೋಗ’ ಎಂಬ ಕೃತಿಯನ್ನು ರಚಿಸಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡು ಬಹುಮಾನವನ್ನು ಕೂಡ ಪಡೆದಿದ್ದಾರೆ. ಮಹಿಳಾ ಪ್ರಾಧ್ಯಾನ್ಯತೆ ಅವರ ಅನೇಕ ಕೃತಿಗಳಲ್ಲಿ ಢಾಳಾಗಿ ಕಾಣಿಸಿಕೊಳ್ಳುತ್ತದೆ. ಉದ್ಯೋಗಸ್ಥ, ದುಡಿಯುವ ಮಹಿಳೆಯ ಅನೇಕ ರೂಪಗಳು ಅವರ ಕೃತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅವರ ಸ್ತ್ರೀ ಪಾತ್ರಗಳು ಆಕಾಶದಲ್ಲಿ ತೇಲಾಡುವಂತಹವುಗಳಲ್ಲ, ಬದಲಿಗೆ ದೃಢ ವಾಸ್ತವದಲ್ಲಿ ಬೇರು ಬಿಟ್ಟವುಗಳಾಗಿವೆ.

    ಸಾಹಿತ್ಯ, ರಂಗಭೂಮಿ, ಕಲಾ ವಿಮರ್ಶೆ, ಪತ್ರಿಕೋದ್ಯಮ, ಪ್ರಕಾಶನ ಹೀಗೆ ಸಂಧ್ಯಾ ಶರ್ಮ ಅವರ ಪ್ರತಿಭೆ ಎಲ್ಲಾ ಕಡೆಗಳಲ್ಲೂ ಮಿರಿ ಮಿರಿ ಮಿಂಚುತ್ತದೆ. ಅವರ ಸಾಹಿತ್ಯ ಸಾಧನೆ, ರಂಗಭೂಮಿಯ ಕೊಡುಗೆ, ಪತ್ರಿಕಾ ಬರಹಗಳು – ಎಂಥವರಿಗಾದರೂ ಬೆರಗು ಹುಟ್ಟಿಸುವಂತಹುದು. ನಿಜದ ಅರ್ಥದಲ್ಲಿ ಸಂಧ್ಯಾ ಅವರು ‘ಸಾಧಕಿ’. ಸಹಜವಾಗಿಯೇ ಅನೇಕ ಪ್ರಶಸ್ತಿ, ಗೌರವಗಳು ಅವರನ್ನು ಅರಸಿ ಬರುವಂತಹದು. ಕನ್ನಡ ಲೇಖಕಿಯರ ಪರಿಷತ್ತಿನ ಅತ್ಯುತ್ತಮ ಪುಸ್ತಕ ಪುರಸ್ಕಾರ, ಅವರ ಮಹಿಳೆ ಮತ್ತು ಉದ್ಯೋಗಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೆನರಾ ಬ್ಯಾಂಕಿನ ವಿಶೇಷ ಪ್ರಶಸ್ತಿ, ಗೊರೂರು ಪ್ರಶಸ್ತಿ, ಪಂಜೆ ಮಂಗೇಶರಾಯರ ಪ್ರಶಸ್ತಿ, ವಿಶ್ವೇಶ್ವರಯ್ಯ ಜೀವಮಾನ ಸಾಧನೆಯ ಪ್ರಶಸ್ತಿ, ಬೆಂಗಳೂರು ಮಹಾ ನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, ಮಂಗಳೂರಿನ ‘ಸಾಧನ’ ಪ್ರಶಸ್ತಿ, ಲಯನನೆಸ್ ಕ್ಲಬ್ ಪ್ರಶಸ್ತಿ, ಬೆಂಗಳೂರು ಗ್ರಾಮಾಂತರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ, ಲಿಪಿ ಪ್ರಾಜ್ಞೆ ಪ್ರಶಸ್ತಿ, ಗಾರ್ಗೀ, ನಾರೀಶಕ್ತಿ ಪ್ರಶಸ್ತಿ, ಕಲಾಭಿಸಾರಿಕೆ ಮತ್ತು ಸಂಭ್ರಮ ಪ್ರಶಸ್ತಿ – ಹೀಗೆ ಸಂಧ್ಯಾ ಅವರು ಅನೇಕ ಪ್ರಶಸ್ತಿ, ಗೌರವಗಳ ಮಹಾಪೂರದಲ್ಲಿ ತೇಲುತ್ತಿರುವವರು.

     

    ನಮ್ಮ ಸಂದರ್ಭದ ಪ್ರತಿಭಾವಂತ, ಕ್ರಿಯಾತ್ಮಕ, ರಚನಾತ್ಮಕ ಸೃಜನಶೀಲ ಸಾಹಿತಿ, ರಂಗಭೂಮಿ ಕಲಾವಿದೆ, ಕನ್ನಡ ನಾಡಿನ ಉತ್ತಮ ಕಲಾ ವಿಮರ್ಶಕಿ, ಸಂಧ್ಯಾ ಶರ್ಮ ಅವರಿಂದ ಮತ್ತಷ್ಟು ಕಾರ್ಯಗಳು ಸಾಧಿತವಾಗಲಿ. ನಗುಮೊಗದ ಸುಂದರಿ ಸಂಧ್ಯಾ ಶರ್ಮ ಅವರದು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮಾಡಿರುವ ಅಪೂರ್ವ ಸಾಧನೆಯಾಗಿದೆ. ವೈ.ಕೆ. ಸಂಧ್ಯಾ ಶರ್ಮರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.

    ಡಾ. ಡಿ. ಮಂಗಳಾ ಪ್ರಿಯದರ್ಶಿನಿ – ಬೆಂಗಳೂರು
    ಶಿಕ್ಷಣ ತಜ್ಞೆ, ಸಾಹಿತಿ, ವಿಮರ್ಶಕಿ.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನಲ್ಲಿ ಸಂಪನ್ನಗೊಂಡ ‘ನರ್ತನಾವರ್ತನಾ’
    Next Article ಮಹಿಳಾ ಸಾಧಕರು | ಸಾಧನೆಯ ಶಿಖರದತ್ತ ವಿದುಷಿ ಸುಮಂಗಲಾ ರತ್ನಾಕರ್ ರಾವ್
    roovari

    1 Comment

    1. KUSUMA SESHADRI on March 9, 2024 10:34 pm

      ಸಾರ್ಥಕ ಸಾಧಕಿ ಸಂಧ್ಯಾ ರವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏ಸಾಹಿತ್ಯ ದ ಎಲ್ಲಾ ಪ್ರಾಕಾರಗಳಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ನುರಿತ ಸಾರ್ಥಕತೆ ಸಾಧಿಸುವ ಮೂಲಕ ಮನೆ ಮಾತಾಗಿ, ಹೆಣ್ಣು ಕುಲಕ್ಕೆ ಶೋಭೆಯಂತಿರುವ ಸಂಧ್ಯಾ ನನ್ನ ಗೆಳತಿ ಕೂಡ!! ಅವರಿಗೆ ದೇವರು ಇನ್ನೂ ಹೆಚ್ಚಿನ ಸಾಹಿತ್ಯ, ಸಾಮಾಜಿಕ ಮನ್ನಣೆ ಪಡೆಯುವ ಅವಕಾಶಗಳನ್ನು ಕೊಡ ಲೆಂದು ನನ್ನ ಪ್ರಾರ್ಥನೆ 🙏💐

      Reply

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    1 Comment

    1. KUSUMA SESHADRI on March 9, 2024 10:34 pm

      ಸಾರ್ಥಕ ಸಾಧಕಿ ಸಂಧ್ಯಾ ರವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏ಸಾಹಿತ್ಯ ದ ಎಲ್ಲಾ ಪ್ರಾಕಾರಗಳಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ನುರಿತ ಸಾರ್ಥಕತೆ ಸಾಧಿಸುವ ಮೂಲಕ ಮನೆ ಮಾತಾಗಿ, ಹೆಣ್ಣು ಕುಲಕ್ಕೆ ಶೋಭೆಯಂತಿರುವ ಸಂಧ್ಯಾ ನನ್ನ ಗೆಳತಿ ಕೂಡ!! ಅವರಿಗೆ ದೇವರು ಇನ್ನೂ ಹೆಚ್ಚಿನ ಸಾಹಿತ್ಯ, ಸಾಮಾಜಿಕ ಮನ್ನಣೆ ಪಡೆಯುವ ಅವಕಾಶಗಳನ್ನು ಕೊಡ ಲೆಂದು ನನ್ನ ಪ್ರಾರ್ಥನೆ 🙏💐

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.