Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಹಿಳಾ ಸಾಧಕರು | ಸತ್ಯವತಿ ಎಂಬ ಸರಸ್ವತಿ
    Article

    ಮಹಿಳಾ ಸಾಧಕರು | ಸತ್ಯವತಿ ಎಂಬ ಸರಸ್ವತಿ

    March 8, 2024No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಡಾ. ಟಿ.ಎಸ್. ಸತ್ಯವತಿ ಇವರ ಹೆಸರು ಕರ್ನಾಟಕ ಕಂಡ ಪ್ರಚಂಡ ಪಾಂಡಿತ್ಯ ಮತ್ತು ವಾಗ್ವಿಲಾಸವುಳ್ಳ ಮಹಿಳೆ. ಸಂಸ್ಕೃತ ಮತ್ತು ಕರ್ನಾಟಕ ಸಂಗೀತ ಇವರ ಇಡಾ-ಪಿಂಗಳ ನಾಡಿಗಳಂತೆ. ಹುಟ್ಟಿದಾರಭ್ಯ ವಾಗೀಶ್ವರಿಯ ಕೃಪೆ ಇವರಿಗೆ. ಕೇವಲ ಎರಡು ವರ್ಷದ ಬಾಲಕಿಯಾಗಿದ್ದಾಗಲೇ ಸತ್ಯವತಿಯವರು ಮೈಸೂರು ಮಹಾರಾಣಿಯವರ ಎದುರು ಹಾಡಿ ಪ್ರಶಂಸೆ ಪಡೆದವರು. ಕುಶಾಗ್ರಮತಿ, ವಿವೇಕಶೀಲೆ, ವಿನಯ ಸಂಪನ್ನೆ, ಏಕ ಸಂಧಿಗ್ರಾಹಿ, ಸಂಸ್ಕೃತ ಮತ್ತು ಕರ್ನಾಟಕ ಸಂಗೀತದಲ್ಲಿ ಪ್ರಗಲ್ಭ ಪಾಂಡಿತ್ಯ ಸಾಧಿಸಿದ ಕರ್ನಾಟಕದ ಹೆಮ್ಮೆಯ ವಿದುಷಿ ಸತ್ಯವತಿ. ಸಂಸ್ಕೃತದ ಸಾಹಿತ್ಯ, ಕಾವ್ಯಗಳ ಮೇಲೆ ಅಸಾಧಾರಣ ಹಿಡಿತ. ಸಂಗೀತದ ಲಕ್ಷ್ಯ ಲಕ್ಷಣಗಳೆರಡರಲ್ಲೂ ಸಾಟಿಯೇ ಇಲ್ಲದಷ್ಟು ಪ್ರತಿಭೆ. ವೇದಿಕೆ ಹತ್ತಿ ನಿಂತರೆ ಸಾಕು ಕನ್ನಡವೋ, ಸಂಸ್ಕೃತವೋ, ಇಂಗ್ಲೀಷೋ… ಅವುಗಳ ವಾಗ್ಝರಿ, ಆಯ್ಕೆಯ ಪದಗಳು, ಆತ್ಮವಿಶ್ವಾಸದ ಮಾತುಗಳು…., ಸ್ಪಟಿಕದಷ್ಟು ಶುದ್ಧವಾದ ಭಾಷಾ ಲಾಲಿತ್ಯವನ್ನು ತನ್ನ ಶ್ರೀಮಂತ ಕಂಠದಲ್ಲಿ, ಸ್ಪಷ್ಟ ಉಚ್ಚಾರದೊಂದಿಗೆ ಬೆರೆಸುವ ಅವರ ಅಸ್ಖಲಿತ ಕನ್ನಡದ ಮೇಲಿನ ವಿದ್ವತ್‌ ಪೂರ್ಣ ಪ್ರಭುತ್ವಕ್ಕೆ ನಿಬ್ಬೆರಗಾಗದ ಶ್ರೋತೃವಿಲ್ಲ.

    ಅವರ ಕುಟುಂಬವೇ ಪ್ರತಿಭಾವಂತರ ಸಂಸಾರ. ತಂದೆ ಟಿ.ಎಸ್. ಮೂರ್ತಿ ಮತ್ತು ತಾಯಿ ರಂಗಲಕ್ಷ್ಮೀಯವರು ಸಂಗೀತ ವಿದ್ವಾಂಸ-ವಿದುಷಿಯರು. ಅಕ್ಕ ಟಿ.ಎಸ್. ವಸಂತ ಮಾಧವಿ ಹಾಗೂ ವಸುಂಧರ ಅವರೇ ಇವರ ಮೊದಲ ಸಂಗೀತ ಗುರುಗಳು. ಸ್ವರ್ಣ ಪದಕದೊಂದಿಗೆ ವಿದ್ವತ್ ಹಾಗೂ ಬಿ.ಎ. ಪದವಿ ಮುಗಿಸಿ, ಸಂಸ್ಕೃತದಲ್ಲಿ ಎಂ.ಎ., ಎಂ.ಫಿಲ್., ಪಿ.ಎಚ್‌.ಡಿ. ಮಾಡಿದ ಧೀಮಂತ ಮಹಿಳೆ ಇವರು. ಬೆಂಗಳೂರು ವಿದ್ಯಾವರ್ಧಕ ಕಾಲೇಜಿನಲ್ಲಿ ಸಂಸ್ಕೃತ ಕಾಲೇಜಿನಲ್ಲಿ ಇಪ್ಪತ್ತೈದು ವರ್ಷಗಳಿಗೂ ಮಿಕ್ಕಿ ಪ್ರವಾಚಕಿಯಾಗಿ ಸೇವೆ ಸಲ್ಲಿಸಿದ ಇವರು ಪದ್ಮಭೂಷಣ ಪುರಸ್ಕೃತ ಆರ್.ಕೆ. ಶ್ರೀಕಂಠನ್‌ರಲ್ಲಿ ತನ್ನ ಪ್ರೌಢ ಸಂಗೀತ ಶಿಕ್ಷಣವನ್ನು ಮುಂದುವರಿಸಿದರು. ತನ್ನ ಹದಿನಾರನೆಯ ವಯಸ್ಸಿನಲ್ಲಿ ಮೊದಲ ಕಛೇರಿಯನ್ನಿತ್ತು ಶ್ರೋತೃಗಳನ್ನು ಅಚ್ಚರಿಗೊಳಿಸಿದವರು ಇವರು. ಸಂಗೀತ ಕಲಾರತ್ನ ಬಿ.ವಿ.ಕೆ. ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಇವರ ವಿದ್ವತ್ ಮತ್ತೆ ಪುಟವಿಕ್ಕಿತು. ಸತ್ಯವತಿಯವರು ಬೆಂಗಳೂರು ಕೆ. ವೆಂಕಟರಾಮನ್‌ ಅವರಲ್ಲಿ ಮೃದಂಗ ಅಭ್ಯಾಸವನ್ನೂ ಮಾಡಿದ್ದಾರೆ. ಇವರು ಏರದ ವೇದಿಕೆಗಳಿಲ್ಲ. ದೇಶದೆಲ್ಲೆಡೆ ಇವರ ಗಾಯನ ಕಛೇರಿಗಳು ನಡೆದಿವೆ. ಸತ್ಯವತಿಯವರ ಸಂಗೀತ, ಸಂಸ್ಕೃತ ಪ್ರಾತ್ಯಕ್ಷಿಕೆಗಳೆಂದರೆ ಅದರಲ್ಲೊಂದು ನಾವಿನ್ಯವಿರುತ್ತದೆ. ಕರಾರುವಾಕ್ಕು ನುಡಿಗಳಿಗೆ ಹೆಸರಾದ ಸತ್ಯವತಿಯವರು ಹೇಳಿದರೆಂದರೆ ಇನ್ನೊಬ್ಬರು ವಿರೋಧಿಸಲು ಧೈರ್ಯ ಮಾಡುವುದಿಲ್ಲ. ಇವರ ಎಂಫಿಲ್‌ ಕಿರುಪ್ರಬಂಧವು ‘ಚಾಲುಕ್ಯ ಸೋಮೇಶ್ವರನ ಮಾನಸೋಲ್ಲಾಸ’ ಎಂಬ ಗ್ರಂಥದ ಕುರಿತಾಗಿದ್ದು. ಅದು ಸಂಗೀತ ಕ್ಷೇತ್ರದಲ್ಲಿ ಬಹು ಮಾನ್ಯತೆಯನ್ನು ಪಡೆದಿದೆ. ಇವರ `ಭಾರತೀಯ ಸಂಗೀತಕ್ಕೆ ಅಭಿಲಾಶಿತಾರ್ಥ ಚಿಂತಾಮಣಿಯ ಕೊಡುಗೆ’ ಎಂಬ ಕುರಿತಾದ ಮಹಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಇವರಿಗೆ ಪಿ.ಎಚ್‌.ಡಿ. ನೀಡಿದೆ. ಮತಂಗನ ಬೃಹದ್ದೇಶಿ, ಚಾಲುಕ್ಯನ ಮಾನಸೋಲ್ಲಾಸದಲ್ಲಿ ಉಕ್ತವಾದ ಸಂಗೀತ ಸಂಬಂಧೀ ಭಾಗಗಳನ್ನು ಭಾಷಾಂತರ ಮಾಡಿದವರು ಇವರು. ಚತುಷ್ಷಷ್ಟಿ ಕಲೆ (64 ಕಲೆಗಳು)ಗಳ ಬಗ್ಗೆ ಇವರು ಬರೆದ ಪುಸ್ತಕವು ಸಾರಸ್ವತ ಲೋಕಕ್ಕೊಂದು ಅಪೂರ್ವ ಕೊಡುಗೆ. ಭಾಸ ಪ್ರಶಸ್ತಿ, ಶೂದ್ರಕ ಪ್ರಶಸ್ತಿ, ಪ್ರಬಂಧ ಸಂಕಲನಗಳ ಸಂಪಾದನೆಯೇ ಮೊದಲಾದ ಹಲವಾರು ಮೌಲಿಕ ಸಂಸ್ಕೃತ ಸಾಹಿತ್ಯದ ರತ್ನಗಳನ್ನು ಕನ್ನಡಿಗರಿಗೆ ನೀಡಿದ್ದಾರೆ. ಮಹಿಳೆಯರ ಸಂಗೀತದಲ್ಲಿ ಲಯ ಅಷ್ಟಕ್ಕಷ್ಟೆ ಎಂದು ಮೂಗು ಮುರಿಯುವವರಿಗೆಲ್ಲಾ ಸತ್ಯವತಿಯವರು ಒಂದು ಸವಾಲು ಎನಿಸಿದ್ದಾರೆ. ಅವರು ನಡೆಸುವ ಪಲ್ಲವಿ ಕಛೇರಿಗಳು, ಪ್ರಾತ್ಯಕ್ಷಿಕೆಗಳು ಇದಕ್ಕೆ ಸಾಕ್ಷಿ. ಮದರಾಸ್‌ ಮ್ಯೂಸಿಕ್ ಅಕಾಡೆಮಿಯು ಇವರಿಗೆ ಬೆಸ್ಟ್ ಮ್ಯೂಸಿಕೋಲಜಿ ಪ್ರಶಸ್ತಿಯನ್ನು, ಸಂಗೀತಕಲಾ ಆಚಾರ್ಯ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ಕರ್ನಾಟಕದ ಸಂಗೀತಗಾರರ ಪೈಕಿ ಮೈಸೂರು ದೊರೆಸ್ವಾಮಿ ಅಯ್ಯಂಗಾರ್ ಮತ್ತು ಆರ್.ಕೆ. ಶ್ರೀಕಂಠನ್ ಬಿಟ್ಟರೆ ಮ್ಯೂಸಿಕ್ ಅಕಾಡೆಮಿಯ ನೆಲದಲ್ಲಿ ಪ್ರತಿ ಬಾರಿಯೂ ಆಹ್ವಾನಿತರೆಂದರೆ ಡಾ. ಟಿ.ಎಸ್. ಸತ್ಯವತಿಯವರೇ. ಮದರಾಸಿನ ‘ಸಂಪ್ರದಾಯ’ ಎಂಬ ಸಂಸ್ಥೆ ಇವರು ಹಾಡಿದ ಅವಧಾನ ಪಲ್ಲವಿ (ಎರಡೂ ಕೈಗಳಲ್ಲಿ ಬೇರೆ ಬೇರೆ ತಾಳಗಳನ್ನು ಹಾಕಿಕೊಂಡು ನಡೆಸುವ ಪಲ್ಲವೀ ಹಾಡುಗಾರಿಕೆ ಶೈಲಿ)ಯನ್ನು ಆರ್ಕೈವ್ಸ್ ಗಾಗಿ ಧ್ವನಿ ಮುದ್ರಿಸಿಕೊಂಡಿದ್ದಾರೆ. ಇವರ ಅನೇಕ ಧ್ವನಿ ಮುದ್ರಿಕೆಗಳು ಮಾರುಕಟ್ಟೆಯಲ್ಲೂ ಲಭ್ಯ.

    ಪತ್ರಿಕೆಯಲ್ಲಿ ಬಂದ ವಿಮರ್ಶೆಯ ತುಣುಕುಗಳನ್ನೊಮ್ಮೆ ಓದಿ-
    “ The Ragamalika Taalaavadhaanapallavi was an intense formidable display of the intense concentration and technical command wielding six talas (4 on the right and 2 on the left) simultaneously” – Indian Express, Madras

    “It was TS Satyavati, who had kept the audience under the trance of devine Madhyamavati in its full bloom, dancing, rippling and pouring. Her paalinchu Kamakshi displayed the genius of a seasoned artiste.”- Idhayam, Madras

    “…..recently had a successful tour of Madras, gave a dazzling performance here too. Her excellent elaboration of the raga Tanaroopi and kriti Namaviddarueedeha, was the evidence for her mastery over the art.” – Saragrahi, Bangalore

    ಸತ್ಯವತಿಯವರ ಬಗ್ಗೆ ಪತ್ರಿಕೆಗಳು ಘೋಷಿಸಿದ ಈ ಪ್ರಶಂಸೆಗಳು ಅವರ ಗೆಯ್ಮೆಗೆ ಹಿಡಿದ ಕನ್ನಡಿಯಲ್ಲದೆ ಇನ್ನೇನು?
    ಸತ್ಯವತಿಯವರ ಪ್ರಶಸ್ತಿಯ ಸರಮಾಲೆಯನ್ನೊಮ್ಮೆ ಗಮನಿಸಿ:
    ಸಂಗೀತ ಪ್ರಾಚಾರ್ಯ (2022) ಷಣ್ಮುಖಾನಂದ ಸಭಾ, ಮುಂಬೈ
    ಸಂಗೀತ ಕಲಾರತ್ನ (2019) ಗಾಯನ ಸಮಾಜ ಬೆಂಗಳೂರು
    ಕರ್ನಾಟಕ ಕಲಾಶ್ರೀ- ಕರ್ನಾಟಕ ಸರಕಾರ
    ತಾನ ಗಾನ ಪ್ರವೀಣ- ಪಾರ್ಥಸಾರಥಿ ಸಭಾ, ಚೆನ್ನೈ 2022
    ನಾದ ನಿಧಿ (2021) ಅವಧೂತದತ್ತ ಪೀಠ, ಮೈಸೂರು
    ಸಂಗೀತ ವೇದಾಂತ ಧುರೀಣ (2021) ರಾಮ ಲಲಿತಕಲಾ ಮಂದಿರ, ಬೆಂಗಳೂರು
    ಬೆಸ್ಟ್ ಮ್ಯೂಸಿಕೋಲಜಿ ಪ್ರಶಸ್ತಿ, ಮದರಾಸ್ ಮ್ಯೂಸಿಕ್ ಅಕಾಡೆಮಿ
    ಅಸ್ಥಾನ ವಿದುಷಿ- ಭಕ್ತಿ ಪ್ರತಿಷ್ಠಾನ, ಇಸ್ಕೋನ್, ಶಂಕರಮಠ
    ಜ್ಞಾನ ಸಮುದ್ರ- ಮುದ್ರಾ, ಚೆನ್ನೈ
    ಕಲಾಭೂಷಣ- ತ್ಯಾಗರಾಜ ಗಾನ ಸಭಾ, ಬೆಂಗಳೂರು
    ಗಾನ ಕಲಾಶ್ರೀ- ಕರ್ನಾಟಕ ಗಾನ ಕಲಾ ಪರಿಷತ್, ಬೆಂಗಳೂರು
    ಘಂಟಸಾಲಾ ಪುರಸ್ಕಾರ 2024 – ಕಲಾ ಪ್ರದರ್ಶಿನಿ ಚೆನ್ನೈ, ನಾದಜ್ಯೋತಿ ಪುರಸ್ಕಾರ, ಅನನ್ಯ ಪುರಸ್ಕಾರ, ಗಾನ ವಿಶಾರದೆ, ಗಾನಸ್ವರ ಶಾಸ್ತ್ರ ಪ್ರವೀಣೆ, ಗಾನ ಚತುರ್ದಂಡಿ, ಗಾನ ಹಂಸ, ಕರ್ನಾಟಕ ಸಂಗೀತ ಕಲಾರತ್ನ, ಸಂಗೀತ ಸಾಹಿತ್ಯ ವಿನೋದಿನಿ, ಸಂಗೀತ ಸಮನ್ವಿತಾ, ವಿದ್ಯಾರ್ಣವ, ನಾಟ್ಯವೇದ….. ಹೀಗೆ ಇನ್ನು ಹಲವಾರು ಸಂಸ್ಥೆಗಳಿಂದ.

    ಗೀತ ಗೋವಿಂದ, ಅಭಿಜ್ನಾನ ಶಾಕುಂತಲ, ದಕ್ಷಯಜ್ನ, ಪು.ತಿ.ನ. ಅವರ ‘ಗೋಕುಲ ನಿರ್ಗಮನ’ ಮುಂತಾದ ಕೃತಿಗಳನ್ನು ಒಪೇರಾ ಮಾದರಿಯಲ್ಲಿ ನಿರ್ಮಿಸಿ ನಿರ್ದೇಶಿಸಿದ ಕಲಾವಿದೆ ಇವರು. ಭಾರತ ದರ್ಶನ ಕ್ಲಬ್‌ನ ಮೂಲಕ – ಶಾಸ್ತ್ರೀಯ ಸಂಗೀತದ ಮೂಲಕ ಭಾರತೀಯತೆಯ ಪರಿಚಯ ಎನ್ನುವ ಪಾಂಡಿತ್ಯಪೂರ್ಣ ಕೇಳಲೇಬೇಕಾದ ಟಿ.ಎಸ್. ಸತ್ಯವತಿ ಅವರ ಭಾಷಣವನ್ನು ‘ಭಾರತ ದರ್ಶನ’ ಶೀರ್ಷಿಕೆಯಡಿ ಯೂಟ್ಯೂಬ್‌ನಲ್ಲಿ ಕೇಳಬಹುದಾಗಿದೆ. ಮುತ್ತು ಸ್ವಾಮಿ ದೀಕ್ಷಿತರ ಹಲವು ಕೃತಿಗಳ ಮೇಲೆ ಇವರು ಚೆಲ್ಲಿದ ಬೆಳಕನ್ನು ಯೂಟ್ಯೂಬ್ ವಾಹಿನಿಗಳಲ್ಲಿ ಕೇಳಬಹುದಾಗಿದೆ.

    ಶಿಷ್ಯ ಪರಿವಾರ : ಪ್ರಸ್ತುತ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಇಂಜಿನಿಯರ್‌ ಅಮೃತ್ ನಾಗಸುಂದರ್, ಸಿಂಗಾಪುರದಲ್ಲಿರುವ ಅಶ್ವಿನಿ ಸತೀಶ್, ಬೆಂಗಳೂರಿನ ಅಂಜನಾ ಪಿ. ರಾವ್, ಅರ್ಚನಾ ಭೋಜ್, ಚೈತನ್ಯಕುಮಾರ್, ಹಂಸಿನಿ ನಾಗೇಂದ್ರ, ವಯಲಿನ್‌ನ ಟಿ.ಎಸ್‌. ಕೃಷ್ಣಮೂರ್ತಿ, ಲಾವಣ್ಯ ಕೃಷ್ಣಮೂರ್ತಿ, ಎಸ್‌.ಆರ್. ಮಾರುತಿ ಪ್ರಸಾದ್, ಮೇಘನಾ ಮಧುಸೂದನ್, ನಂದಿತಾ ಪದ್ಮನಾಭನ್, ರಾಗೇಶ್ವರಿ ನಾಗೇಂದ್ರ ಪ್ರಕಾಶ್, ರೇಣುಕಾ ರುದ್ರಪಟ್ಣ, ಸಂಗೀತಾ ಶ್ರೀನಿಧಿ, ಶಿಲ್ಪಾ ಶಶಿಧರ್, ಶ್ರುತಿ ಎಚ್.ವಿ., ಶ್ರೀಲಲಿತಾ ಆರ್., ಸುಶ್ರುತಾ ಎಸ್.ಎ., ವಸಂತಲಕ್ಷ್ಮೀ ಶ್ರೀಧರ್ ಇವರೆಲ್ಲ ಸತ್ಯವತಿಯವರ ಶಿಷ್ಯ ಪರಿವಾರ. ಶಿಷ್ಯಂದಿರನ್ನು ತನ್ನ ಮಕ್ಕಳಂತೆಯೇ ಪ್ರೀತಿಸುವ ಸತ್ಯವತಿಯವರಿಗೆ ಶಿಷ್ಯಂದಿರೇ ದೊಡ್ಡ ಆಸ್ತಿ. ತಮ್ಮ ಮೆಚ್ಚಿನ ಗುರು ಆರ್.ಕೆ. ಶ್ರೀಕಂಠನ್ ಅವರಿಗೇ ತನ್ನೆಲ್ಲ ಗೌರವಗಳನ್ನು ಸದಾ ಸಮರ್ಪಿಸಿಕೊಳ್ಳುವ ಸತ್ಯವತಿಯವರು ಗುರುಗಳ ಕಠಿಣ ಶಿಸ್ತು, ಸಾಧನೆ, ಶುದ್ಧ ಪಾಠಾಂತರ ಮತ್ತು ಜ್ಞಾನ ಭಕ್ತಿಗಳನ್ನು ಸದಾ ನೆನಪಿಸಿಕೊಳ್ಳುವ ವಿನಯ ಸಂಪನ್ನೆ ಮತ್ತು ಶಿಷ್ಯಂದಿರಿಗೆ ಅವುಗಳನ್ನು ವರ್ಗಾಯಿಸಲು ಅಹರ್ನಿಶಿ ದುಡಿಯುತ್ತಿರುವವರು. ದೊಡ್ಡದೊಡ್ಡ ಸಂಘ ಸಂಸ್ಥೆಗಳಲ್ಲಿ ಅಂತಿಮ ನಿರ್ಣಯಗಳನ್ನು ನೀಡುವ ನಿರ್ಣಾಯಕ ತೀರ್ಮಾನಗಳಿರುವಲ್ಲಿ ಡಾ. ಟಿ.ಎಸ್. ಸತ್ಯವತಿಯವರ ಧ್ವನಿಗೆ ಹೆಚ್ಚಿನ ಆದ್ಯತೆಯಿದೆ ಮತ್ತು ಬೆಲೆಯಿದೆ. ಅವರು ನಾಡಿನಾದ್ಯಂತ ಇರುವ ಯುವ, ಕಿರಿಯ ಪ್ರತಿಭಾವಂತರನ್ನು ತಕ್ಷಣ ಗುರುತಿಸಿ ತಕ್ಕುದಾದ ಸಭೆ ಸಮಾರಂಭಗಳಿಗೆ ಅವರನ್ನು ಆಹ್ವಾನಿಸಿ ಪ್ರೋತ್ಸಾಹಿಸುವ ಹಿರಿಯ ಕಲಾವಿದೆಯಾಗಿದ್ದಾರೆ. ಅವರಿಂದ ಪ್ರಯೋಜನ ಪಡೆದವರು ಸಾವಿರಾರು. ಅವರಲ್ಲಿರುವ ವಿದ್ವತ್ತಿನ ಖನಿಜವು ಮೊಗೆದಷ್ಟೂ ಬರಿದಾಗದ ಖಜಾನೆ. ಅವರು ಪ್ರಶಸ್ತಿಗಳ ಹಿಂದೆ ಹೋಗುವವರಲ್ಲ. ಆದರೆ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ನಮ್ಮ ನಾಡಿನ 70ರ ಈ ಧೀಮಂತ ಮಹಿಳೆಯನ್ನು ಇಲ್ಲಿ ನೆನಪಿಸಿಕೊಳ್ಳುವುದು ಗೌರವದ ಸಂಕೇತವಾಗಿದೆ.

    ಪ್ರೊ. ವೀ. ಅರವಿಂದ ಹೆಬ್ಬಾರ್

    ಉಡುಪಿಯ ಕುಂಜಿಬೆಟ್ಟು ಇಲ್ಲಿನ ನಿವಾಸಿಯಾಗಿರುವ ಪ್ರೊ. ವೀ. ಅರವಿಂದ ಹೆಬ್ಬಾರ್ ಇವರು ವಿಶ್ರಾಂತ ಸಸ್ಯಶಾಸ್ತ್ರ ಪ್ರಾಧ್ಯಾಪಕರು. ಮೈಸೂರು ವಿಶ್ವವಿದ್ಯಾನಿಲಯದಿಂದ ನಾಲ್ಕನೇ ರ್ಯಾಂ ಕ್‌ನೊಂದಿಗೆ ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದವರು. ಪತ್ನಿ ಶ್ರೀಮತಿ ವಸಂತಲಕ್ಷ್ಮೀ ಹೆಬ್ಬಾರ್ ಮ್ಯೂಸಿಕ್ ನಲ್ಲಿ ಎಂ.ಎ., ಸಂಸ್ಕೃತದಲ್ಲಿ ಎಂ.ಎ. ಚಿತ್ರಕಲಾವಿದೆ ಹಾಗೂ ಸಂಗೀತ ಶಿಕ್ಷಕಿಯಾಗಿ 1996ರಿಂದ ಉಡುಪಿಯಲ್ಲಿ ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್ ನಡೆಸುತ್ತಿದ್ದಾರೆ. ಮಗಳು ರಂಜನಿ ಹೆಬ್ಬಾರ್ ನಮ್ಮ ನಡುವೆ ಇಲ್ಲ. ಕರ್ನಾಟಕ ಶಾಸ್ತ್ರೀಯ ಸಂಗೀತದ ಉನ್ನತ ಹೆಸರು ಮಾಡಿದ ಅವರ ಹಾಡುಗಳು ಕರ್ಣ ರಸಾಯನ. ಮಗ ಸಾರಂಗ ಹೆಬ್ಬಾರರ ಪತ್ನಿ ಶ್ರೀಮತಿ ದೇವಿ ಸಾರಂಗ್ ಹಿಂದೂಸ್ಥಾನೀ ಗಾಯಕಿ, ಧಾರವಾಡ ಆಕಾಶವಾಣಿಯಲ್ಲಿ ಬಿ ಹೈ ಗ್ರೇಡ್ ಕಲಾವಿದೆ ಒಟ್ಟು ಇವರ ಕುಟುಂಬವೇ ಅದ್ಭುತ ಕಲಾವಿದರ ಕುಟುಂಬ. ಪ್ರಸಕ್ತ ವರ್ಷದಲ್ಲಿ ಪ್ರತಿಭಾನ್ವಿತರು ಇವರ ಶಿಷ್ಯವರ್ಗದಲ್ಲಿದ್ದಾರೆ ಎಂಬುದು ಹೆಮ್ಮೆಯ ವಿಚಾರ. ತಿರುವನಂತಪುರ, ಉಡುಪಿ, ಗೋಣಿಕೊಪ್ಪಲು, ಕುಂದಾಪುರ ಇಲ್ಲಿನ ಕಾಲೇಜುಗಳಲ್ಲಿ ಯಶಸ್ವೀ ಶೈಕ್ಷಣಿಕ ಸೇವೆ ಸಲ್ಲಿಸಿದ ಪ್ರಬುದ್ಧರು ಇವರು.

    ‘ಜೀವಶಾಸ್ತ್ರ’, ‘ಪರಿಸರ ವಿಜ್ಞಾನ’, ‘ನಮ್ಮ ಸಸ್ಯ’ ಯುಜಿಸಿ ಅನುದಾನಿತ ಯೋಜನೆಯಡಿ ಮಾಡಿದ ಸಂಶೋಧನೆ – ‘ಉಡುಪಿಯ ಬಾವಿ ನೀರಿನಲ್ಲಿ ನಾಗಬೀದಿ ದೋಷ ಮತ್ತು ತತ್ಸಂಬಂಧಿ ಸಸ್ಯ ಸಾಮಾಜಿಕಾಧ್ಯಯನ’ ಇತ್ಯಾದಿ ವಿಜ್ಞಾನ ಪುಸ್ತಕಗಳನ್ನು ರಚನೆ ಮಾಡಿದ ಖ್ಯಾತಿ ಇವರದ್ದು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಗೋಷ್ಠಿಗಳಲ್ಲಿ ಪ್ರಬಂಧಗಳ ಮಂಡನೆ ಮಾಡಿರುವ ಇವರು 20 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಸುಗಮ ಸಂಗೀತ ಮತ್ತು ಲಘು ಸಂಗೀತ ವಿಭಾಗಗಳಲ್ಲಿ ಗ್ರೇಡೆಡ್ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಉಡುಪಿಯಲ್ಲಿ ‘ರಾಗ ಧನ’ ಎಂಬ ಶಾಸ್ತ್ರೀಯ ಸಂಗೀತ ಸಂಸ್ಥೆಯನ್ನು ಹುಟ್ಟುಹಾಕಿ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ, ರಂಜನಿ ಸ್ಮಾರಕ ಟ್ರಸ್ಟ್ ಸ್ಥಾಪಿಸಿ ಶಾಸ್ತ್ರೀಯ ಸಂಗೀತದ ಅಭಿವೃದ್ಧಿಗಾಗಿ ಸೇವೆ, ‘ರಾಗಧನಶ್ರೀ’ ಎಂಬ ಶಾಸ್ತ್ರೀಯ ಸಂಗೀತ ಮಾಸ ಪತ್ರಿಕೆಯ ಸಂಪಾದಕ, ಸಂಗೀತ ಸಂಬಂಧಿ ಲೇಖನಗಳು ಮತ್ತು ವಿಮರ್ಶೆಗಳ ಬರವಣಿಗೆ, ಸಂಗೀತದ ಕುರಿತಾದ ಸೋದಾಹರಣ ಉಪನ್ಯಾಸ, ಕಮ್ಮಟ ತರಬೇತಿ, ಕರ್ನಾಟಕ ಸರಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಸಂಗೀತ ಸೇವೆ ಗೈಯುತ್ತಿದ್ದಾರೆ. ‘ಶ್ಯಾಮಾಶಾಸ್ತ್ರೀ’, ‘ಸಂಗೀತ ಶಾಸ್ತ್ರರೂಪ ರಂಜನಿ’ , ‘ವಿಮರ್ಶೆಯ ಹರಿತ’ ಮುಂತಾದ ಸಂಗೀತ ಪುಸ್ತಕಗಳನ್ನು ರಚಿಸಿದ್ದಾರೆ. ‘ಸಾಹಿತ್ಯಪ್ರಿಯ’, ‘ಅತ್ಯುತ್ತಮ ಸಂಘಟಕ’, ‘ಲಲಿತ ಕಲಾಶ್ರಯ’ ಮುಂತಾದ ಬಿರುದು ಇವರ ಸಾಧನೆಗೆ ಸಂದ ಗೌರವ.

    Share. Facebook Twitter Pinterest LinkedIn Tumblr WhatsApp Email
    Previous Articleನೃತ್ಯ ವಿಮರ್ಶೆ – ಸಾಧನ ಸಂಗಮ’ದ ಪರಿಣಾಮಕಾರಿ ಪ್ರಯೋಗ ‘ಪ್ರೇಕ್ಷಾಗೃಹ’
    Next Article ಪುತ್ತೂರಿನಲ್ಲಿ ಸಂಪನ್ನಗೊಂಡ ‘ನರ್ತನಾವರ್ತನಾ’
    roovari

    Add Comment Cancel Reply


    Related Posts

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ಆಲಾಪ್’ ಶಾಸ್ತ್ರೀಯ ಸಂಗೀತ ಕಛೇರಿ | ಮೇ 10

    May 7, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.