Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಹಿಳಾ ಸಾಧಕರು | ಸಾಧನೆಯ ಶಿಖರದತ್ತ ವಿದುಷಿ ಸುಮಂಗಲಾ ರತ್ನಾಕರ್ ರಾವ್
    Article

    ಮಹಿಳಾ ಸಾಧಕರು | ಸಾಧನೆಯ ಶಿಖರದತ್ತ ವಿದುಷಿ ಸುಮಂಗಲಾ ರತ್ನಾಕರ್ ರಾವ್

    March 8, 202412 Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಒಂದು ಕಾಲವಿತ್ತು. ಮಹಿಳೆಯರು ಏನಿದ್ದರೂ ಮನೆಯ ಒಳಗೆ, ಮನೆವಾರ್ತೆ ಮಾಡುವುದಕ್ಕಷ್ಟೇ ಸೀಮಿತ ಎಂಬ ಧೋರಣೆ ಇತ್ತು. ಆದರೆ ಈಗ ಹಾಗಲ್ಲ. ಮಹಿಳೆಯರು ಮನೆಯ ಹೊರಗೂ ಏನೇನೆಲ್ಲಾ ಸಾಧನೆಗಳನ್ನು ಮಾಡಬಹುದೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅಂಥವರಲ್ಲಿ ಬಹುಮುಖ ಪ್ರತಿಭಾ ಸಂಪನ್ನರಾಗಿ ಸಾಧನೆಯ ಶಿಖರದತ್ತ ಏರುತ್ತಿರುವ ಶ್ರೀಮತಿ ವಿದುಷಿ ಸುಮಂಗಲಾ ರತ್ನಾಕರರನ್ನು ಹೆಸರಿಸಲೇಬೇಕು. ಸಂಸ್ಕಾರವಂತ ಮನೆತನದಲ್ಲಿ ಜನಿಸಿ, ಹಾಗೆಯೇ ಸಂಸ್ಕಾರವಂತ ಮನೆತನದ ಸೊಸೆಯಾಗಿ, ಹೆತ್ತವರ ಹಾಗೂ ತನ್ನ ಪತಿ, ಅತ್ತೆ, ಮಾವಂದಿರ ಪೂರ್ಣ ಪ್ರೋತ್ಸಾಹ, ಸಹಾಯ, ಬೆಂಬಲದಿಂದ ಓರ್ವ ಕಲಾ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ ಸುಮಂಗಲಾ ರತ್ನಾಕರ್.

    ಇವರು ಕಲೆಯನ್ನು ಆರಾಧಿಸುವ ಮನೋಭಾವ ಉಳ್ಳವರಾಗಿದ್ದುದರಿಂದಲೇ ತಾನು ಮೂವತ್ತು ವರುಷಗಳ ಹಿಂದೆ ಪ್ರಾರಂಭಿಸಿದಂತಹ ನೃತ್ಯ ತರಬೇತಿ ಕೇಂದ್ರಕ್ಕೆ ‘ನಾಟ್ಯಾರಾಧನಾ ಕಲಾಕೇಂದ್ರ’ ಎಂದು ನಾಮಕರಣ ಮಾಡಿರುತ್ತಾರೆ. ಇವರು ಕೇವಲ ಭರತನಾಟ್ಯ ಕಲಾವಿದೆ ಮಾತ್ರವಲ್ಲ. ಯಕ್ಷಗಾನ ಕಲಾವಿದೆಯೂ ಆಗಿ ಸಾಧನೆ ಮಾಡಿದ್ದಾರೆ. ‘ಯಕ್ಷಾರಾಧನಾ ಕಲಾಕೇಂದ್ರ’ ಸ್ಥಾಪನೆ ಮಾಡಿ ಕಳೆದ ಹದಿನೈದು ವರ್ಷಗಳಿಂದ ಮಕ್ಕಳಿಗೆ, ಮಹಿಳೆಯರಿಗೆ ಯಕ್ಷಗಾನದಲ್ಲಿ ತರಬೇತಿ ನೀಡುವ ‘ಯಕ್ಷಗುರು’ ಎಂದೆನಿಸಿಕೊಂಡಿದ್ದಾರೆ.

    ವಿದ್ವಾನ್ ಚಂದ್ರಶೇಖರ ನಾವಡ, ವಿದ್ವಾನ್ ಮುರಳೀಧರ, ವಿದುಷಿ ಶಾರದಾಮಣಿ ಶೇಖರ್ ಇವರಿಂದ ಭರತನಾಟ್ಯದಲ್ಲಿ ತರಬೇತಿ ಪಡೆದು ಈಗ ಶ್ರೀಮತಿಯವರು ಸಾವಿರಾರು ಶಿಷ್ಯರಿಗೆ ಗುರುಗಳಾಗಿ ಪ್ರಸಿದ್ಧರಾಗಿದ್ದಾರೆ. ಮಾತ್ರವಲ್ಲ ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿ ಜನರ ಪ್ರಶಂಸೆಯ ಕೇಂದ್ರ ಬಿಂದುವಾಗಿದ್ದಾರೆ. ಹೊಸ ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿಯೂ ಇವರ ತುಡಿತ ಎದ್ದು ಕಾಣುತ್ತದೆ. ನಿರಂತರ ಅಧ್ಯಯನಶೀಲತೆ, ಪರಿಶ್ರಮ, ಪ್ರಾಮಾಣಿಕತೆ, ಬದ್ಧತೆ ಈ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಪರಿಣಾಮವಾಗಿಯೇ ಎಂಬಂತೆ ಇತ್ತೀಚೆಗೆ ನೃತ್ಯಕಾವ್ಯ (ಭರತನಾಟ್ಯ ಮಾರ್ಗದ ಕನ್ನಡ ನೃತ್ಯ ಬಂಧಗಳು) ಎಂಬ ಬೃಹತ್ ಗ್ರಂಥವೊಂದನ್ನು ರಚಿಸಿ ಲೋಕಾರ್ಪಣೆ ಮಾಡಿದ್ದಾರೆ. ಇದರಲ್ಲಿ ಅಲರಿಪುವಿನಿಂದ ಹಿಡಿದು ತಿಲ್ಲಾನದವರೆಗೆ ಎಲ್ಲಾ ಬಗೆಯ ಎಪ್ಪತ್ತೆರಡು ಕನ್ನಡ ಭಾಷೆಯ ಕೃತಿಗಳನ್ನು ಸ್ವಂತವಾಗಿ ರಚಿಸಿದ ಹಿರಿಮೆ ಇವರ ಪ್ರತಿಭೆಗೆ ಒಂದು ಸಾಕ್ಷಿ. ಒಂದರ್ಥದಲ್ಲಿ ಭರತನಾಟ್ಯ ತರಬೇತಿ ನೀಡುವ ಗುರುಗಳಿಗೆ ಇದೊಂದು ಭೋಧನಾ ಗ್ರಂಥವೂ ಹೌದು ಎಂದರೆ ಅತಿಶಯೋಕ್ತಿಯಾಗಲಾರದು.

    ಇವರ ಪ್ರತಿಭೆ ಭರತನಾಟ್ಯ ಕ್ಷೇತ್ರಕ್ಕಷ್ಟೇ ಸೀಮಿತವಲ್ಲ. ಯಕ್ಷ ಗುರುವಾಗಿ, ಯಕ್ಷಗಾನ ಕಲಾವಿದೆಯಾಗಿ, ತಾಳಮದ್ದಳೆ ಅರ್ಥಧಾರಿಯಾಗಿಯೂ ಖ್ಯಾತರಾಗಿದ್ದಾರೆ. ಶ್ರೀಯುತ ರಾಕೇಶ ರೈ ಅಡ್ಕ ಇವರಲ್ಲಿ ಪ್ರಾರಂಭಿಕ ತರಬೇತಿಯನ್ನು ಪಡೆದು ತದನಂತರ ಸ್ವಸಾಮರ್ಥ್ಯದಿಂದ ಆ ಕಲೆಯನ್ನು ಕರಗತ ಮಾಡಿಕೊಂಡು ಯಕ್ಷಾರಾಧನಾ ಕಲಾಕೇಂದ್ರದ ಮೂಲಕ ಬೊಂಬಾಯಿ, ಮದ್ರಾಸು, ಕುವೈಟ್ ಮೊದಲಾದ ಕಡೆಗಳಲ್ಲಿಯೂ ಯಕ್ಷಗಾನ, ತಾಳಮದ್ದಳೆ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಓರ್ವ ಶ್ರೇಷ್ಠ ಕಲಾವಿದೆ ಸುಮಂಗಲಾ. ಇನ್ನೂ ಹೇಳುವುದಾದರೆ ಇವರು ಓರ್ವ ಸಂಘಟನಾ ಚತುರೆ, ಕಾರ್ಯಕ್ರಮ ನಿರ್ವಹಣೆ ಮಾಡುವುದರಲ್ಲಿ ಎತ್ತಿದ ಕೈ. ಸಂಪನ್ಮೂಲ ವ್ಯಕ್ತಿಯಾಗಿ, ಉತ್ತಮ ವಾಗ್ಮಿಯಾಗಿ ತನ್ನ ಛಾಪಾನ್ನು ಮೂಡಿಸಿದ್ದಾರೆ. ಭರತನಾಟ್ಯ ಪರೀಕ್ಷೆಯ ಪ್ರಶ್ನಾಪತ್ರಿಕೆ ತಯಾರಿ ಹಾಗೂ ವಿದ್ವತ್ ಪರೀಕ್ಷೆಗೆ ಪರೀಕ್ಷಕರಾಗಿಯೂ ಇವರು ಕಾರ್ಯನಿರ್ವಹಿಸುತ್ತಾರೆ.

    ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಸುಮಂಗಲಾ ರತ್ನಾಕರ್ ಪ್ರಬುದ್ಧವಾಗಿ ಕೈಯಾಡಿಸದ ಕ್ಷೇತ್ರವಿಲ್ಲ. ಅವರು ಓರ್ವ ಅಪ್ರತಿಮ ಪ್ರತಿಭಾ ಸಂಪನ್ನರು ಮಾತ್ರವಲ್ಲದೆ ಏನಾದರೂ ಸಾಧಿಸಲೇಬೇಕೆಂಬ ಛಲವುಳ್ಳವರು. ಗುರುವಾಗಿ ತಮ್ಮ ಶಿಷ್ಯರಿಗೆ ಮನಃಪೂರ್ವಕವಾಗಿ, ಪ್ರಾಮಾಣಿಕವಾಗಿ, ಪ್ರೀತಿಯಿಂದ ವಿದ್ಯೆಯನ್ನು ಧಾರೆಯೆರೆಯುವವರು. ಸದಾ ಅಧ್ಯಯನ ಪ್ರವೃತ್ತಿಯುಳ್ಳ ಇವರ ಸಾಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿದ್ದು ಮಾತ್ರವಲ್ಲದೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಸದಾ ಕ್ರಿಯಾಶೀಲರಾಗಿರುವ ಸುಮಂಗಲಾ ರತ್ನಾಕರ್ ಇವರ ಕಲಾರಾಧನೆ, ಕಲಾ ಸೇವೆ ಇನ್ನಷ್ಟು ಕಾಲ ಅಭಿವೃದ್ಧಿ ಪಥದಲ್ಲಿ ಮುಂದುವರಿಯಲಿ. ಸಾಧನೆ ಮಾಡಬೇಕೆಂಬುವವರಿಗೆ ಮಾರ್ಗದರ್ಶಿಯಾಗಲಿ ಎಂದು ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಶುಭ ಕೋರುತ್ತೇನೆ.

    ಸಾವಿತ್ರಿ ಎಸ್. ರಾವ್, ನಿವೃತ್ತ ಶಿಕ್ಷಕಿ

    ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಅವರು ನಿವೃತ್ತಿಯ ಬಳಿಕ ಪ್ರವರ್ತಿಸಿಕೊಂಡದ್ದು ಯಕ್ಷಗಾನ ಕಲೆಯಲ್ಲಿ ಒಟ್ಟು ನೂರು ಯಕ್ಷಗಾನ ಕಾರ್ಯಗಳನ್ನು ನೀಡಿದ್ದು ಉಲ್ಲೇಖಾರ್ಹ ಸಾಧನೆಯಾಗಿದೆ. ಯಾವುದೇ ಸಾಧನೆಗೆ ವಯೋಬಲ ಮುಖ್ಯವಲ್ಲ ಆಸಕ್ತಿ, ಶ್ರದ್ಧೆ, ಪರಿಶ್ರಮ ಬೆರೆತ ಮನೋಬಲ ಮುಖ್ಯ ಎಂದು ನಿರೂಪಿಸಿದ ಅಪೂರ್ವ ಯಕ್ಷ ಸಾಧಕಿ. ಮಕ್ಕಳಿಗೆ ಸ್ಫೂರ್ತಿಯಾಗಿರುವ ಇವರು ಅನೇಕ ಮಹಿಳೆಯರಿಗೆ ಮಾದರಿ. ಉತ್ತಮ ಗೃಹಿಣಿಯಾಗಿರುವ ಸಾವಿತ್ರಿ ಟೀಚರ್ ಮಕ್ಕಳ ಸಾಹಿತಿ, ಭಜನಾ ಕಲಾವಿದೆ, ಭಗವದ್ಗೀತೆ, ಭಾಷಣ, ಪ್ರಬಂಧ, ಪ್ರಖ್ಯಾತ ಮಕ್ಕಳ ಸಾಹಿತ್ಯ ಸಂಗಮದ ಮೂಲಕ ಕವಿತಾ ರಚನೆ, ಕಥಾ ರಚನೆ ಮುಂತಾದವುಗಳನ್ನು ಮಕ್ಕಳಿಗೆ ಹೇಳಿಕೊಡುವ ಸಂಪನ್ಮೂಲ ವ್ಯಕ್ತಿ. ಶ್ರೀಮತಿ ಸಾವಿತ್ರಿ ಎಸ್ ರಾವ್ ಅವರು ಯಕ್ಷಲೋಕದ ಯಕ್ಷಮಣಿ.

    Share. Facebook Twitter Pinterest LinkedIn Tumblr WhatsApp Email
    Previous Articleಮಹಿಳಾ ಸಾಧಕರು | ಬಹುಮುಖ ಪ್ರತಿಭಾವಂತ ಲೇಖಕಿ ವೈ.ಕೆ. ಸಂಧ್ಯಾ ಶರ್ಮ
    Next Article ಮಹಿಳಾ ಸಾಧಕರು – ನೃತ್ಯ ಲತಾಂಗಿ ಡಾ. ಶ್ರೀವಿದ್ಯಾ ಮುರಳೀಧರ್
    roovari

    12 Comments

    1. Dharithri Bhide on March 8, 2024 5:15 pm

      Superb article
      Proud to be your student, Sumangala teacher🙏🏻🙏🏻

      Reply
    2. Nandhita Shetty on March 8, 2024 5:19 pm

      She is rather a great inspiration to everyone

      Reply
    3. Kiran vj on March 8, 2024 5:23 pm

      ಮಹಾನ್ ಕಲಾವಿದೆಯ ಬಗ್ಗೆ ಅನಿಸಿಕೆ ಏನೆಂದು ಬರೆಯಲಿ……….ಪದಗಳೇ ಸಿಗುತ್ತಿಲ್ಲ…….ನನಗೆ ನಿಜವಾಗಿಯೂ ಇವರು ತಾಯಿ ಸಮಾನರು……

      Reply
    4. Nagarathna mayya on March 8, 2024 5:29 pm

      Super article 👌
      Happy women’s day ma’am 🙏🥰

      Reply
    5. Chaitrashree Gururaj on March 8, 2024 5:40 pm

      The article on my dance teacher beautifully captures her passion for the art form and dedication. Thankyou Roovari for making this women’s day special. I’m grateful to have such an inspiring mentor in my dance journey.

      Reply
    6. Archana on March 8, 2024 7:54 pm

      Such a nice article . I am lucky to have a teacher like you sumangalakka.

      Reply
    7. Archana Bhat on March 8, 2024 7:57 pm

      Such a nice article. I am lucky to be your student sumangalakka

      Reply
    8. saachi pai on March 8, 2024 9:15 pm

      Nice artical .Because of you many students and womens have been inspire.

      Reply
    9. Santhosh on March 8, 2024 11:19 pm

      I have been closely watching Sumangala akka’s growth from her school days and my child hood. Proud of her achievements.

      Have also learnt a lot when I was studying from Savithri teacher too.
      God bless both of them 🙏🙏

      Reply
    10. Sakshi S Bhat on March 9, 2024 6:21 am

      Proud student ma’am 😍🙏

      Reply
    11. Dr. Mahesh K.B. on March 9, 2024 8:08 am

      Appreciating Smt. Sumangala Madam for her journey in Bharatanatyam and Yakshagana is to celebrate the dedication and passion of an artist who has mastered not just one, but two distinct forms of Indian classical and traditional theatre. Bharatanatyam, known for its grace, purity, and sculpturesque poses, and Yakshagana, celebrated for its vibrant costumes, dynamic facial expressions, and lively storytelling, both require years of rigorous training, deep understanding of mythology, and an ability to communicate complex emotions through dance and drama. Smt. Sumangala’s contribution to these art forms not only showcases her versatility as a performer but also her commitment to preserving and promoting India’s rich cultural heritage. Her journey is an inspiring saga of artistic excellence, cultural dedication, and a profound love for the performing arts….
      Madam,
      Wishing the very best for the future to such a great artist is a wonderful sentiment. May your creativity continue to flourish, performances captivate audiences around the world, and your dedication to your art inspire future generations. Here’s to the continued success and recognition of your incredible talent and hard work! May Lord Krishna Bless You! All the very best.
      Regards,
      Dr. Mahesh K.B.

      Reply
    12. Sanathkumar Acharya on March 9, 2024 3:45 pm

      ಉತ್ತಮವಾದ ಬರಹ ✨
      ಅದೃಷ್ಟವಂತ ನಾನು. ✨😇
      I proud myself to be your student, sumangala mam✨🙏

      Reply

    Add Comment Cancel Reply

    Related Posts

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ನೃತ್ಯ ಭಾನು’ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ | ಮೇ 09

    May 6, 2025

    12 Comments

    1. Dharithri Bhide on March 8, 2024 5:15 pm

      Superb article
      Proud to be your student, Sumangala teacher🙏🏻🙏🏻

      Reply
    2. Nandhita Shetty on March 8, 2024 5:19 pm

      She is rather a great inspiration to everyone

      Reply
    3. Kiran vj on March 8, 2024 5:23 pm

      ಮಹಾನ್ ಕಲಾವಿದೆಯ ಬಗ್ಗೆ ಅನಿಸಿಕೆ ಏನೆಂದು ಬರೆಯಲಿ……….ಪದಗಳೇ ಸಿಗುತ್ತಿಲ್ಲ…….ನನಗೆ ನಿಜವಾಗಿಯೂ ಇವರು ತಾಯಿ ಸಮಾನರು……

      Reply
    4. Nagarathna mayya on March 8, 2024 5:29 pm

      Super article 👌
      Happy women’s day ma’am 🙏🥰

      Reply
    5. Chaitrashree Gururaj on March 8, 2024 5:40 pm

      The article on my dance teacher beautifully captures her passion for the art form and dedication. Thankyou Roovari for making this women’s day special. I’m grateful to have such an inspiring mentor in my dance journey.

      Reply
    6. Archana on March 8, 2024 7:54 pm

      Such a nice article . I am lucky to have a teacher like you sumangalakka.

      Reply
    7. Archana Bhat on March 8, 2024 7:57 pm

      Such a nice article. I am lucky to be your student sumangalakka

      Reply
    8. saachi pai on March 8, 2024 9:15 pm

      Nice artical .Because of you many students and womens have been inspire.

      Reply
    9. Santhosh on March 8, 2024 11:19 pm

      I have been closely watching Sumangala akka’s growth from her school days and my child hood. Proud of her achievements.

      Have also learnt a lot when I was studying from Savithri teacher too.
      God bless both of them 🙏🙏

      Reply
    10. Sakshi S Bhat on March 9, 2024 6:21 am

      Proud student ma’am 😍🙏

      Reply
    11. Dr. Mahesh K.B. on March 9, 2024 8:08 am

      Appreciating Smt. Sumangala Madam for her journey in Bharatanatyam and Yakshagana is to celebrate the dedication and passion of an artist who has mastered not just one, but two distinct forms of Indian classical and traditional theatre. Bharatanatyam, known for its grace, purity, and sculpturesque poses, and Yakshagana, celebrated for its vibrant costumes, dynamic facial expressions, and lively storytelling, both require years of rigorous training, deep understanding of mythology, and an ability to communicate complex emotions through dance and drama. Smt. Sumangala’s contribution to these art forms not only showcases her versatility as a performer but also her commitment to preserving and promoting India’s rich cultural heritage. Her journey is an inspiring saga of artistic excellence, cultural dedication, and a profound love for the performing arts….
      Madam,
      Wishing the very best for the future to such a great artist is a wonderful sentiment. May your creativity continue to flourish, performances captivate audiences around the world, and your dedication to your art inspire future generations. Here’s to the continued success and recognition of your incredible talent and hard work! May Lord Krishna Bless You! All the very best.
      Regards,
      Dr. Mahesh K.B.

      Reply
    12. Sanathkumar Acharya on March 9, 2024 3:45 pm

      ಉತ್ತಮವಾದ ಬರಹ ✨
      ಅದೃಷ್ಟವಂತ ನಾನು. ✨😇
      I proud myself to be your student, sumangala mam✨🙏

      Reply

    Add Comment Cancel Reply

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.

    Lost password?

    Register Now!

    Already registered? Login.

    A password will be e-mailed to you.