ಬೆಂಗಳೂರು : ಗಜಲ್ ಬರೆಯುತ್ತಿರುವ ಬರಹಗಾರರಿಗಾಗಿ ದಿನಾಂಕ 28 ಡಿಸೆಂಬರ್ 2025ರ ಭಾನುವಾರ ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 4-30ರವರೆಗೆ ಒಂದು ದಿನದ ಕಮ್ಮಟ ಮತ್ತು ಗಜಲ್ ಗೋಷ್ಠಿಯನ್ನು ಕರ್ನಾಟಕ ಗಜಲ್ ಅಕಾಡೆಮಿಯು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುತ್ತದೆ.
‘ಕಮ್ಮಟ’ಕ್ಕೆ ಎಂದು ನಮೂದಿಸಿ ನಿಮ್ಮಗಳ ಹೆಸರನ್ನು ದಿನಾಂಕ 15 ಡಿಸೆಂಬರ್ 25ರೊಳಗೆ ವಾಟ್ಸಾಪ್ ಗೆ ಕಳುಹಿಸಬೇಕು. ಕಮ್ಮಟದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು. ಇದಕ್ಕೆ 15ರಿಂದ 20 ಜನರಿಗೆ ಮಾತ್ರ ಅವಕಾಶವಿರುತ್ತದೆ. 10 ಜನ ‘ಗಜಲ್ ಗೋಷ್ಠಿ’ ಎಂದು ನಮೂದಿಸಿ ಕಳುಹಿಸಬೇಕು. ಮೊದಲು ನೋಂದಾಯಿಸಿಕೊಂಡವರಿಗೆ ಆಧ್ಯತೆ ನೀಡಲಾಗುವುದು.
ಕಾರ್ಯಕ್ರಮ ನಡೆಯುವ ಸ್ಥಳ : ಶಾಸಕರ ಬಿ.ಬಿ.ಎಂ.ಪಿ. ಕಛೇರಿ, ವಿಜಯನಗರ, 3ನೇ ಮುಖ್ಯ ರಸ್ತೆ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಹತ್ತಿರ. ಆದಿಚುಂಚನಗಿರಿ ಮಠದ ಹಿಂಭಾಗ, ಸಿದ್ದಗಂಗಾ ಪಬ್ಲಿಕ್ ಸ್ಕೂಲ್ ಪಕ್ಕ, ಬೆಂಗಳೂರು 40. ಗಜಲ್ ಕಮ್ಮಟದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಿಕೆ : 77601 82299.
