ಮಂಗಳೂರು : ವಿಶ್ವ ಪುಸ್ತಕ ದಿನದ ಅಂಗವಾಗಿ ಇಂಟಾಕ್ ಮಂಗಳೂರು ಆಯೋಜಿಸುವ ಪ್ರೊ. ಮಾಧವ ಗಾಡ್ಗೀಳರ ಆತ್ಮಕಥೆಯಾದ ‘ಏರು ಘಟ್ಟದ ನಡಿಗೆ’ ಪುಸ್ತಕ ಓದು ಹಾಗೂ ಚರ್ಚಾ ಕಾರ್ಯಕ್ರಮವು ದಿನಾಂಕ 23 ಏಪ್ರಿಲ್ 2025ರಂದು ಸಂಜೆ ಘಂಟೆ 5.30ಕ್ಕೆ ಮಂಗಳೂರಿನ ಕೊಡಿಯಾಲ್ ಗುತ್ತು ಸೆಂಟರ್ ಫಾರ್ ಆರ್ಟ್ ಆಂಡ್ ಕಲ್ಚರ್ ಇಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಪ್ರಕಾಶಕರಾದ ಕಲ್ಲೂರು ನಾಗೇಶ್, ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೃಷ್ಣಮೂರ್ತಿ ಹಾಗೂ ಕಲಾವಿದರಾದ ದಿನೇಶ್ ಹೊಳ್ಳ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರಾಜೇಂದ್ರ ಕೇದಿಗೆ 9480014812 ಇವರನ್ನು ಸಂಪರ್ಕಿಸಬಹುದು.