ಶಿರ್ವ: ಸಂತ ಮೇರಿ ಕಾಲೇಜು ಶಿರ್ವ ಇಲ್ಲಿನ ಗ್ರಂಥಾಲಯ ವಿಭಾಗ ಮತ್ತು IQAC ಇವರ ಸಹಯೋಗದೊಂದಿಗೆ “ವಿಶ್ವ ಪುಸ್ತಕ ದಿನಾಚರಣೆ”ಯನ್ನು ದಿನಾಂಕ 23-04-2024ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾರ್ವಜನಿಕ ಗ್ರಂಥಾಲಯ ಕಾಪು ಪುರಸಭೆ ಇದರ ಗ್ರಂಥಾಲಯ ಮೇಲ್ವಿಚಾರಕಿಯಾದ ಶ್ರೀಮತಿ ಪೂರ್ಣಿಮಾ ಮಾತನಾಡಿ “ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಇಂದು ಯಾರು ಕದಿಯಲು ಸಾಧ್ಯವಿಲ್ಲದ ಸಂಪತ್ತು ಇದ್ದರೆ ಅದು ಜ್ಞಾನ ಮಾತ್ರ. ‘ಮೈಯಲ್ಲಿ ಹರಿದ ಬಟ್ಟೆ ಇದ್ದರೂ ಚಿಂತೆಯಿಲ್ಲ, ಆದರೆ ಕೈಯಲ್ಲಿ ಒಂದು ಪುಸ್ತಕವಿರಲಿ’ ಎಂಬ ಅಂಬೇಡ್ಕರ್ ಅವರ ಇದೊಂದೇ ಮಾತು ಪುಸ್ತಕದ ಮಹತ್ವವನ್ನು ತಿಳಿಸಿಕೊಡುತ್ತದೆ.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಗ್ರಂಥಾಲಯ ಬಳಕೆದಾರರಿಗೆ ಬಹುಮಾನವನ್ನು ನೀಡಲಾಯಿತು.
ತೃತೀಯ ಬಿ.ಎ ವಿದ್ಯಾರ್ಥಿನಿಯಾದ ಕುಮಾರಿ ಕೌಶಲ್ಯ, ತೃತೀಯ ಬಿ. ಸಿ. ಎ. ವಿದ್ಯಾರ್ಥಿನಿಯಾದ ಕುಮಾರಿ ಹೇಮಶ್ರೀ ಮತ್ತು ತೃತೀಯ ಬಿ. ಕಾಂ. ವಿದ್ಯಾರ್ಥಿನಿಯಾದ ಕುಮಾರಿ ಅಫ್ಸಾನ ಬಹುಮಾನವನ್ನು ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೊನಿಸ್ ಮಾತನಾಡಿ “ಮನೆಗಳಲ್ಲಿ ಶೋಕಿಗಾಗಿ ಪುಸ್ತಕವನ್ನು ಸಂಗ್ರಹಿಸಿದರೆ ಸಾಲದು, ಕೊನೆಯ ಪಕ್ಷ ತಿಂಗಳಿಗೆ ಒಂದು ಪಠ್ಯಕ್ಕೆ ಹೊರತಾದ ಪುಸ್ತಕವನ್ನು ವಿದ್ಯಾರ್ಥಿಗಳು ಓದಬೇಕು. ಓದು ನಮ್ಮನ್ನು ಬೆಳೆಸುತ್ತದೆ.” ಎಂದರು.
ಕಾಲೇಜಿನ ಗ್ರಂಥಪಾಲಕರಾದ ಶ್ರೀಮತಿ ತನುಜಾ ಎನ್. ಸುವರ್ಣ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ತೃತೀಯ ಬಿ.ಸಿ.ಎ. ವಿದ್ಯಾರ್ಥಿನಿ ಕುಮಾರಿ ಅನಘ ಸ್ವಾಗತಿಸಿ, ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಅಫ್ಸಾನ ನಿರ್ವಹಿಸಿ, ತೃತೀಯ ಬಿ. ಎ. ವಿದ್ಯಾರ್ಥಿ ಶ್ರೀ ಸಮೀರ್ ಮಾಹಜೀ ವಂದಿಸಿದರು.
Subscribe to Updates
Get the latest creative news from FooBar about art, design and business.
Previous Articleಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರಿಗೆ ಪ್ರೆಸ್‌ಕ್ಲಬ್ ಗೌರವ
Next Article ಮಧೂರು ವೆಂಕಟಕೃಷ್ಣರಿಗೆ ಕಸಾಪ ಗಡಿನಾಡ ಘಟಕದಿಂದ ಅಭಿನಂದನೆ