ತೀರ್ಥಹಳ್ಳಿ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ತಾಲೂಕು ಸಮಿತಿ ತೀರ್ಥಹಳ್ಳಿ ಶಿವಮೊಗ್ಗ ಜಿಲ್ಲೆ ಇವರ ವತಿಯಿಂದ ದಿನಾಂಕ 25 ಆಗಸ್ಟ್ 2025ರಂದು ಬೆಳಗ್ಗೆ 10-30 ಗಂಟೆಗೆ ತೀರ್ಥಹಳ್ಳಿಯ ಕನ್ನಡ ಭವನದಲ್ಲಿ ‘ವಿಶ್ವ ಜಾನಪದ ದಿನಾಚರಣೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಜಾನಪದ ಪರಿಷತ್ತು ತೀರ್ಥಹಳ್ಳಿ ಇದರ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಜಯಶೀಲ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಇದರ ಅಧ್ಯಕ್ಷರಾದ ಟಿ.ಕೆ. ರಮೇಶ್ ಶೆಟ್ಟಿ ಇವರು ಉದ್ಘಾಟನೆ ಮಾಡಲಿದ್ದಾರೆ. ಸಂಸ್ಕೃತಿ ಚಿಂತಕರಾದ ನೆಂಪೆ ದೇವರಾಜ್ ಇವರು ಉಪನ್ಯಾಸ ನೀಡಲಿದ್ದು, ಇದೇ ಸಂದರ್ಭದಲ್ಲಿ ಗಾಯಕಿ ಶ್ರೀಮತಿ ಐ.ಎಂ. ಸ್ನೇಹಲೋಕ ದೇವಂಗಿ ಇವರನ್ನು ಸನ್ಮಾನಿಸಲಾಗುವುದು.