25 ಫೆಬ್ರವರಿ 2023, ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾಲಯ ಜ್ಞಾನಸಾಗರ – ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಡಾ. ಸಿಎ. ಎ. ರಾಘವೇಂದ್ರ ರಾವ್ ಅಭಿಪ್ರಾಯ. ಜ್ಞಾನ ಎಂಬುದು ಆಹಾರವಿದ್ದಂತೆ. ಜ್ಞಾನವೆಂಬ ಆಹಾರವನ್ನು ಶ್ರೀನಿವಾಸ ವಿಶ್ವ ವಿದ್ಯಾಲಯ ಯಾವ ರೀತಿಯಲ್ಲಿ ಬಂದರೂ ಸ್ವೀಕರಿಸುತ್ತದೆ. ಆದ್ದರಿಂದ ಶ್ರೀನಿವಾಸ ವಿಶ್ವ ವಿದ್ಯಾಲಯ ಒಂದು ಜ್ಞಾನಸಾಗರವಾಗಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್ ಹೇಳಿದರು.
ಶ್ರೀನಿವಾಸ ವಿಶ್ವವಿದ್ಯಾಲಯ ಆಯೋಜಿಸಿರುವ ‘ವಿಶ್ವ ಸಂಸ್ಕೃತ ಸಮ್ಮೇಳನ’ದ ೨ನೇ ದಿನವಾದ ಫೆಬ್ರವರಿ ೨೫ ರಂದು ವಿಶ್ವ ವಿದ್ಯಾಲಯದ ಮುಕ್ಕ ಕ್ಯಾಂಪಸ್ನಲ್ಲಿ ಸಮ್ಮೇಳನದ ಸಾರಾಂಶ ಮತ್ತು ತಜ್ಞರ ಅಧಿವೇಶನದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಾನವೀಯತೆಗೆ ಭಾರತೀಯ ಜ್ಞಾನ ಮತ್ತು ಸಂಸ್ಕೃತದ ಕೊಡುಗೆ ಎಂಬ ವಿಷಯದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯವು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ, ಭಾರತ ಸರ್ಕಾರದ ಹಸ್ತಪ್ರತಿಯ ರಾಷ್ಟ್ರೀಯ ಮಿಷನ್, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್, ನವದೆಹಲಿ, ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ, ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಸಮ್ಮೇಳನವನ್ನು ಆಯೋಜಿಸಿದೆ.
ಮುಖ್ಯ ಅತಿಥಿ ಲೋಕಸಭಾ ಪ್ರಚಾರ ಪರಿಷತ್‌ನ ಅಂತರಾಷ್ಟ್ರೀಯ ಅಧ್ಯಕ್ಷರಾದ ಪ್ರೊ. ಸದಾನಂದ ದೀಕ್ಷಿತ್ ಮಾತನಾಡಿ, ಈ ಸಮ್ಮೇಳನ ಜ್ಞಾನವನ್ನು ಸಂಪಾದಿಸಲು ಸಿಕ್ಕಿರುವ ಒಳ್ಳೆಯ ಅವಕಾಶವಾಗಿದ್ದು, ಈ ಅವಕಾಶವನ್ನು ಒದಗಿಸಿದ ಡಾ. ಸಿಎ. ಎ. ರಾಘವೇಂದ್ರ ರಾವ್ ಅಭಿನಂದನಾರ್ಹರು. ಸಮ್ಮೇಳನದ ಪ್ರತಿದಿನ ಹೊಸ ವಿಷಯಗಳನ್ನು ತಿಳಿಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದ್ದು ಸದುಪಯೋಗಿಸುವಂತೆ ಸಲಹೆ ನೀಡಿದರು.
ಭಾರತ್ ಇನ್ಫ್ರಾಟೆಕ್‌ನ ನಿರ್ದೇಶಕ ಶ್ರೀ ಮುಸ್ತಫಾ ಎಸ್. ಎಂ. ಮಾತನಾಡಿ, ನಿರಂತರ ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅಣು, ತೃಣ, ಕಾಷ್ಠದಲ್ಲಿ ದೇವರ ವಾಸವಿದೆ. ದೇವರನ್ನು ನೆನಪಿಸುವಾಗ ಮಾನವರು ಆ ಭಾವವನ್ನು ಅನುಭವಿಸಬೇಕು ಎನ್ನುತ್ತ, ಆಯುರ್ವೇದ, ಯೋಗ ಮತ್ತು ಸಂಸ್ಕೃತದ ಸಂಬಂಧವನ್ನು ಸುಂದರವಾಗಿ ವಿವರಿಸಿದರು.
ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಸ್ಪಿರಿಚ್ಯುವಲ್ ಸ್ಟಡೀಸ್‌ನ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ವಿಘ್ನೇಶ್ವರ ಭಟ್ ಮಾತನಾಡಿ, ದೇಹ, ಮನಸ್ಸು ಹಾಗೂ ಉಸಿರಿಗೆ ಅವಿನಾಭಾವ ಸಂಬಂಧವಿದೆ. ಮಂತ್ರ ಉಚ್ಛಾರಣೆಯಿಂದ ಮನಸ್ಸು ಕೇಂದ್ರೀಕೃತವಾಗುತ್ತದೆ. ಜ್ಞಾನದ ಬಾಗಿಲು ತೆರೆಯಲು ಸಂಸ್ಕೃತ ಭಾಷೆಯು ರಹದಾರಿಯಾಗಿದೆ ಎಂದರು.
ಶ್ರೀನಿವಾಸ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಟ್ರಸ್ಟಿಯಾಗಿರುವ ಪ್ರೊ. ಇಆರ್ . ಎ. ಮಿತ್ರಾ ಎಸ್. ರಾವ್ ಅವರು ಸಂಸ್ಕೃತ ಭಾಷಾ ಮಹ್ವದ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯ ಫಿಸಿಯೋಥೆರಪಿಸ್ಟ್ ಫೆಡರೇಷನ್ ಅಧ್ಯಕ್ಷ ಡಾ.ಯು.ಟಿ. ಇಫ್ತಿಕಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀನಿವಾಸ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಟ್ರಸ್ಟಿಯಾಗಿರುವ ಶ್ರೀಮತಿ ಎ.ವಿಜಯ ಲಕ್ಷ್ಮಿ ಆರ್ .ರಾವ್, ಶ್ರೀಮತಿ ಪದ್ಮಿನಿ ಕುಮಾರ್, ಕುಮಾರಿ. ಮೇಘನಾ ಎಸ್. ರಾವ್, ಬೆಂಗಳೂರಿನಲ್ಲಿ ಆಂಕೊಲಾಜಿ ಪ್ರಾಧ್ಯಾಪಕರಾಗಿರುವ ಡಾ. ಉದಯ ಕುಮಾರ್ ಮಯ್ಯ, ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ಎಸ್. ಐತಾಳ್ , ಶ್ರೀನಿವಾಸ ವಿವಿ ಶೈಕ್ಷಣಿಕ ರಿಜಿಸ್ಟ್ರಾರ್ ಶ್ರೀ ಆದಿತ್ಯ ಕುಮಾರ್ ಮಯ್ಯ, ರಿಜಿಸ್ಟ್ರಾರ್ ಡಾ.ಅನಿಲ್ ಕುಮಾರ್ , ಮೌಲ್ಯಮಾಪನ ರಿಜಿಸ್ಟ್ರಾರ್ ಶ್ರೀನಿವಾಸ ಮಯ್ಯ ಡಿ. , ಸಂಚಾಲಕರಾದ ಡಾ.ಶಾಂತಲಾ ವಿಶ್ವಾಸ , ಸಹ ಸಂಚಾಲಕ ಡಾ. ಬಿ.ಗೋಪಾಲಚಾರ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀನಿವಾಸ ವಿಶ್ವವಿದ್ಯಾಲಯ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಸ್ವಾಗತಿಸಿದರು. ವ್ಯೋಮ ಲಿನ್‌ಗ್ವಿಸ್ಟಿಕ್ ಲ್ಯಾಬ್ಸ್ ಫೌಂಡೇಶನ್‌ನ ಡಾ. ವೆಂಕಟ ಸುಬ್ರಹ್ಮಣ್ಯನ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿವೃದ್ಧಿ ರಿಜಿಸ್ಟ್ರಾರ್ ಡಾ.ಅಜಯ್ ಕುಮಾರ್ ವಂದಿಸಿದರು.
ಡಾ.ವಿಜಯ ಲಕ್ಷ್ಮಿ, ಪ್ರೊ.ರೋಹನ್ ಫೆರ್ನಾಂಡಿಸ್ , ಡಾ.ಅಂಬಿಕಾ ಮಲ್ಯ ಕಾಯಕ್ರಮ ನಿರೂಪಿಸಿದರು.
ಶ್ರೀನಿವಾಸ ವಿಶ್ವ ವಿದ್ಯಾಲಯದಲ್ಲಿ ಕಲಾ ಮೆರಗು
ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಫೆಬ್ರವರಿ 24ರಂದು ಸಾಯಂಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀನಿವಾಸ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಟ್ರಸ್ಟಿಯಾಗಿರುವ ಪ್ರೊ. ಇಆರ್. ಎ. ಮಿತ್ರಾ ಎಸ್. ರಾವ್ ಕೊಳಲುವಾದನದ ರಂಗ ಪ್ರವೇಶ ನಡೆಸಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ನೃತ್ಯ, ಯಕ್ಷಗಾನ ಕಲಾರೂಪಕ ನಡೆಯಿತು. ಅಂತೆಯೇ ಪುಸ್ತಕ, ಖಾದಿ ಬಟ್ಟೆ, ತಿಂಡಿ ತಿನಿಸು ಹಾಗೂ ಅನೇಕ ಉಪಯುಕ್ತ ವಸ್ತುಗಳ ಮಳಿಗೆಗಳು ಸಮ್ಮೇಳನದಲ್ಲಿ ತೆರೆದಿದ್ದು ಜನರನ್ನು ಸೆಳೆಯುತ್ತಿದೆ. ಸಂಸ್ಕೃತ ವಸ್ತುಪ್ರದರ್ಶನ ಹಾಗೂ ಕುದುರೆ ಸವಾರಿ, ಒಂಟೆ ಪ್ರಮುಖ ಆಕರ್ಷಣೆಯಾಗಿದ್ದು, ಜನಪದೀಯ ಆಟಗಳ ಕೌಂಟರ್ ಮಕ್ಕಳ ಹಾಗೂ ಹಿರಿಯರ ಗಮನ ಸೆಳೆಯುತ್ತಿದೆ.