ಬೆಂಗಳೂರು : ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ರಂಗಚಂದಿರ ಟ್ರಸ್ಟ್ (ರಿ.) ಆಯೋಜಿಸಿರುವ ‘ವಿಶ್ವ ರಂಗಭೂಮಿ ದಿನಾಚರಣೆ’ಯು ದಿನಾಂಕ 27-03-2024ರಂದು ಸಂಜೆ 6.30ರಿಂದ ಬೆಂಗಳೂರಿನ ಎನ್.ಆರ್. ಕಾಲೋನಿಯ ಸಿ.ಅಶ್ವತ್ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಕರ್ನಾಟಕ ರಾಜ್ಯ ಸಮುದಾಯದ ರಂಗ ಸಂಘಟಕರು ಹಾಗೂ ಉಪಾಧ್ಯಕ್ಷರಾದ ಶ್ರೀ ಗುಂಡಣ್ಣ ಚಿಕ್ಕಮಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ನಾಟಕಕಾರರು ಹಾಗೂ ರಂಗ ನಿರ್ದೇಶಕರಾದ ಡಾ. ಬೇಲೂರು ರಘುನಂದನ್ ಇವರಿಗೆ ಅಭಿನಂದನೆ, ಭರತನಾಟ್ಯ ಕಲಾವಿದೆ ಕುಮಾರಿ ಚಿತ್ರಾ ರಾವ್ ಇವರಿಗೆ ರಂಗ ಗೌರವ ನಡೆಯಲಿದೆ. ರಂಗ ನಿರ್ದೇಶಕರಾದ ಶ್ರೀ ಶಶಿಧರ್ ಭಾರೀಘಾಟ್ ಇವರು ವಿಶ್ವ ರಂಗಭೂಮಿ ಸಂದೇಶ ಪ್ರಸ್ತುತ ಪಡಿಸುವರು. ಬೆಂಗಳೂರಿನ ರಂಗ ವಿಜಯ ತಂಡದವರು ರಂಗ ಗೀತೆ ಹಾಗೂ ಮೈಸೂರಿನ ನಟನ ತಂಡದವರು ಡಾ. ಶ್ರೀಪಾದ ಭಟ್ ಇವರ ನಿರ್ದೇಶನದಲ್ಲಿ ‘ಕಣಿವೆಯ ಹಾಡು’ ನಾಟಕ ಪ್ರದರ್ಶನ ನೀಡಲಿದ್ದಾರೆ.