ಮದ್ದೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಮಹಿಳಾ ಸರ್ಕಾರಿ ಕಾಲೇಜು ಮದ್ದೂರು, ಕ್ಷೀರಸಾಗರ ಮಿತ್ರಕೂಟ (ರಿ.) ಕೀಲಾರ ಮಂಡ್ಯ ಜಿಲ್ಲೆ, ಕರ್ನಾಟಕ ಜಾನಪದ ಪರಿಷತ್ತು ಮದ್ದೂರು ತಾಲೂಕು ಘಟಕ ಮತ್ತು ರಂಗ ಚಂದಿರ ಟ್ರಸ್ಟ್ (ರಿ.) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ 2025 ಅಂಗವಾಗಿ ರಂಗಸಂದೇಶ, ವಿಚಾರಸಂಕಿರಣ, ರಂಗಗೌರವ ಹಾಗೂ ರಂಗಸಂಭ್ರಮ ಕಾರ್ಯಕ್ರಮವನ್ನು ದಿನಾಂಕ 27 ಮಾರ್ಚ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಮದ್ದೂರು ಮಹಿಳಾ ಸರ್ಕಾರಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮದ್ದೂರು ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಬಿ. ನಾರಾಯಣ ಇವರ ಅಧ್ಯಕ್ಷತೆಯಲ್ಲಿ ಮಾನ್ಯ ಶಾಸಕರಾದ ಕೆ.ಎಂ. ಉದಯ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ರಂಗಭೂಮಿ ಕಲಾವಿದ ಸುರೇಶ್ ಕಂಠಿ ಇವರು ರಂಗ ಸಂದೇಶ ನೀಡಲಿದ್ದಾರೆ. ‘ರಂಗಭೂಮಿ ಮತ್ತು ಚಳುವಳಿ’ ಎಂಬ ವಿಷಯದ ಬಗ್ಗೆ ರಂಗಭೂಮಿ ಮತ್ತು ಚಲನಚಿತ್ರ ನಟರಾದ ಪಣ್ಣೆದೊಡ್ಡಿ ಆನಂದ್ ವಿಷಯ ಮಂಡನೆ ಮಾಡಲಿದ್ದಾರೆ. ರಾಮಯ್ಯ, ಸಿ. ಪುಟ್ಟಸ್ವಾಮಿ, ಶಂಕರೇಗೌಡ, ಎಂ.ಆರ್. ವೀರಭದ್ರಾಚಾರ್ ದ್ಯಾಪೇಗೌಡ, ವಿ.ಕೆ. ರಾಮಣ್ಣ, ವಸಂತಮ್ಮ ಮತ್ತು ಬಿ.ಎಸ್. ಶಿವಕುಮಾರಸ್ವಾಮಿ ಇವರುಗಳಿಗೆ ರಂಗ ಗೌರವ ನೀಡಲಾಗುವುದು. ರಂಗ ಸಂಭ್ರಮದಲ್ಲಿ ಮದ್ದೂರು ತಾಲೂಕು ರಂಗಭೂಮಿ ಕಲಾವಿದರಿಂದ ರಂಗಗೀತೆಗಳ ಗಾಯನ ಹಾಗೂ ಮಂಡ್ಯ ಜನಪದ ಮತ್ತು ಬೀದಿನಾಟಕ ಕಲಾವಿದರ ಒಕ್ಕೂಟದವರಿಂದ ಬೀದಿ ನಾಟಕ ಪ್ರಸ್ತುತಗೊಳ್ಳಲಿದೆ.