ಬೆಳಗಾವಿ : ರಂಗಸಂಪದ (ರಿ.) ಬೆಳಗಾವಿ ಇದರ ವತಿಯಿಂದ ‘ವಿಶ್ವರಂಗಭೂಮಿ ದಿನಾಚರಣೆ 2025’ಯ ಪ್ರಯುಕ್ತ ‘ರಂಗಸಖ 2025’ ಪ್ರಶಸ್ತಿ ಪ್ರದಾನ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 27 ಮತ್ತು 29 ಮಾರ್ಚ್ 2025ರಂದು ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 27 ಮಾರ್ಚ್ 2025ರಂದು ಸಂಜೆ 5-30 ಗಂಟೆಗೆ ಅನನ್ಯ ತಂಡ ಬೆಂಗಳೂರು ಇವರಿಂದ ಎಸ್.ಎನ್. ಸೇತುರಾಮ ಇವರ ನಿರ್ದೇಶನದಲ್ಲಿ ‘ತಳಿ’ ನಾಟಕ ಪ್ರದರ್ಶನ ನಡೆಯಲಿದೆ. ದಿನಾಂಕ 29 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಬೆಳಗಾವಿಯ ಶ್ರೀ ರಂಗಸಂಪದ ತಂಡದವರಿಂದ ಡಾ. ಅರವಿಂದ ಕುಲಕರ್ಣಿ ಇವರ ನಿರ್ದೇಶನದಲ್ಲಿ ‘ಗೆಳೆಯ ನೀನು ಹಳೆಯ ನಾನು’ ನಾಟಕ ಪ್ರಸ್ತುತಗೊಳ್ಳಲಿದೆ.