ಬೆಂಗಳೂರು : ರಂಗ ಚಂದಿರ ತಂಡ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮಮವು ದಿನಾಂಕ 27-3-2024ರಂದು ಸಂಜೆ ಬೆಂಗಳೂರಿನ ಎನ್. ಆರ್. ಕಾಲೋನಿಯಲ್ಲಿರುವ ಸಿ. ಅಶ್ವತ್ ಸಭಾಂಗಣದಲ್ಲಿ ನಡೆಯಿತು.
ರಂಗಕರ್ಮಿಗಳಾದ ಸಿ. ಕೆ. ಗುಂಡಣ್ಣ ಚಿಕ್ಕಮಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್. ಆರ್. ಹೆಗಡೆ, ಆರ್. ಕೆ. ಹೆಗಡೆ, ಮಾಗಡಿ ಗಿರೀಶ್, ಶ್ರೀಧರ್ ಗೌಡ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಜಿ. ಪಿ. ಓ. ಚಂದ್ರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಪುರಸ್ಕೃತರಾದ ನಾಟಕಕಾರ ಬೇಲೂರು ರಘುನಂದನ ಹಾಗೂ ಭರತನಾಟ್ಯ ಕಲಾವಿದೆ ಕುಮಾರಿ ಚಿತ್ರಾರಾವ್ ಇವರಿಗೆ ರಂಗ ಗೌರವ ಸಲ್ಲಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ ಜೋಗಿಲ ಸಿದ್ದರಾಜು ಮತ್ತು ಲಕ್ಷ್ಮೀನಾರಾಯಣ್ ಇವರಿಂದ ರಂಗಗೀತೆಗಳು ಪ್ರಸ್ತುತಗೊಂದವು.
ಕಾರ್ಯಕ್ರಮದ ಅಂತ್ಯದಲ್ಲಿ ಹಿರಿಯ ರಂಗಕರ್ಮಿಗಳಾದ ಶ್ರೀನಿವಾಸ್ ಜಿ. ಕಪ್ಪಣ್ಣ ಇವರ ಸಹಕಾರದಿಂದ ನಟನ ತಂಡ ಮೈಸೂರು ಪ್ರಸ್ತುತಪಡಿಸಿದ ‘ಕಣಿವೆಯ ಹಾಡು’ ನಾಟಕ ಪ್ರದರ್ಶನಗೊಂಡಿತು.