ಬೆಂಗಳೂರು : ಚೌಕಿ ಮನೆ ಟ್ರಸ್ಟ್ ಪ್ರಸ್ತುತ ಪಡಿಸುವ ‘ನಿಮ್ಮೊಳಗಿನ ಜಗತ್ತು’ ಕಲ್ಪನೆಯ ಕುರಿತು ನಟನಾ ಕಾರ್ಯಾಗಾರವನ್ನು ದಿನಾಂಕ 29 ಜೂನ್ 2025ರಿಂದ 05 ಜುಲೈ 2025ರವೆರೆಗೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಅನ್ ಟೈಟಲ್ ಆರ್ಟ್ಸ್ ಫೌಂಡೇಷನ್ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಮತ್ತು ಹೆಗ್ಗೋಡು ನೀನಾಸಂ ಇದರ ಹಳೆಯ ವಿದ್ಯಾರ್ಥಿ ಮಂಜು ಕಾಸರಗೋಡು ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣೆಗೆ 9900864577 ಸಂಖ್ಯೆಯನ್ನು ಸಂಪರ್ಕಿಸಿರಿ.