ಮಂಗಳೂರು : ಕಲಾಭಿ ಥಿಯೇಟರ್ ಮತ್ತು ಚೌಕಿ ಮನೆ ಟ್ರಸ್ಟ್ ಪ್ರಸ್ತುತ ಪಡಿಸುವ ‘ನಿಮ್ಮೊಳಗಿನ ಜಗತ್ತು’ ಕಲ್ಪನೆಯ ಕುರಿತು ನಟನಾ ಕಾರ್ಯಾಗಾರವನ್ನು ದಿನಾಂಕ 21ರಿಂದ 26 ಜುಲೈ 2025ರವೆರೆಗೆ ಪ್ರತಿದಿನ ಸಂಜೆ 6-00ರಿಂದ 9-00 ಗಂಟೆ ತನಕ ಮಂಗಳೂರಿನ ಬೊಂದೇಲ್ ಪಡುಶೆಡ್ಡೆ ರೋಡಿನಲ್ಲಿರುವ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಮತ್ತು ಹೆಗ್ಗೋಡು ನೀನಾಸಂ ಇದರ ಹಳೆಯ ವಿದ್ಯಾರ್ಥಿ ಮಂಜು ಕಾಸರಗೋಡು ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣೆಗೆ 84316 31998 ಸಂಖ್ಯೆಯನ್ನು ಸಂಪರ್ಕಿಸಿರಿ.