ಬೆಂಗಳೂರು : ಲೇಖಕಿ ಡಾ. ಎಲ್.ಜಿ. ಸುಮಿತ್ರಾ ಇವರು ದಿನಾಂಕ 01 ಜನವರಿ 2025 ರಂದು ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು.
ಕನ್ನಡದ ಹಿರಿಯ ವಿದ್ವಾಂಸರಾದ ಡಿ. ಎಲ್. ಗುಂಡಪ್ಪ ಹಾಗೂ ಶಾರದಮ್ಮ ದಂಪತಿಯ ಪುತ್ರಿಯಾಗಿ 14 ಮಾರ್ಚ್ 1934 ರಂದು ಬೆಂಗಳೂರಿನಲ್ಲಿ ಜನಿಸಿದರು. ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ‘ಕಾವ್ಯಕಾವೇರಿ’, ‘ಸ್ಪರ್ಶರೇಖೆ’, ‘ಕರ್ನಾಟಕ ವೃತ್ತಿಗಾಯಕರು’ ಹಾಗೂ ‘ಭಾರತದ ಸಂಗೀತ ವಾದ್ಯಗಳು’ ಇವರ ಪ್ರಮುಖ ಕೃತಿಗಳು. ರೇಡಿಯೋ ಮಾಧ್ಯಮದಲ್ಲಿ ಉನ್ನತ ಜವಾಬ್ದಾರಿ ನಿರ್ವಹಿಸಿದ್ದ ಇವರು ಹೊಸದಿಲ್ಲಿಯಲ್ಲಿ ವಾರ್ತಾ ಮತ್ತು ಸಂಗೀತ ವಿಭಾಗದ ನಿರ್ದೇಶಕಿಯಾಗಿ, ಎನ್. ಸಿ. ಇ. ಆರ್. ಟಿ. ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ಆಕಾಶವಾಣಿಯ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರ ಸಾಹಿತ್ಯ ಕೃಷಿಗೆ ಜಾನಪದ ಲೋಕ ಹಾಗೂ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ‘ಜಾನಪದ ತಜ್ಞೆ’ ಪ್ರಶಸ್ತಿ, ಎಂಟನೆಯ ಸಂಗೀತ ಸಮ್ಮೇಳನ ಪ್ರಶಸ್ತಿ ಹಾಗೂ ಹಲವಾರು ಪ್ರಶಸ್ತಿ ಮತ್ತು ಸನ್ಮಾನಗಳು ಸಂದಿವೆ.
Subscribe to Updates
Get the latest creative news from FooBar about art, design and business.
Related Posts
Comments are closed.