ಗದಗ : ಗದಗ ಇಲ್ಲಿನ ಸಾಹಿತಿ, ಕಲಾಪೋಷಕ, ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್ (ಕಾ.ವೆಂ.ಶ್ರೀ) ನಿಧನರಾಗಿದ್ದಾರೆ. ಇವರಿಗೆ 52 ವರ್ಷ ವಯಸ್ಸಾಗಿತ್ತು. ಆರೋಗ್ಯ ಸಮಸ್ಯೆಯಿಂದಾಗಿ ಗದಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ದಿನಾಂಕ 10 ಮಾರ್ಚ್ 2025ರ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಕಲೆ, ಸಂಸ್ಕೃತಿ ಉಳಿವಿಗಾಗಿ ಕಾವೆಂಶ್ರೀ ಇವರು 1996ರಲ್ಲಿ ‘ಕಲಾ ಚೇತನ’ ಸಂಸ್ಥೆ ಸ್ಥಾಪಿಸಿದರು. ಕಲಾ ಚೇತನ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಕಲಾವಿದರ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಕಾಳಮಂಜಿ ಮೂಲದ ಕಾ. ವೆಂ. ಶ್ರೀನಿವಾಸ್ ಅವರು ಗದಗ ನಗರದಲ್ಲಿ ಕಳೆದ 34 ವರ್ಷದಿಂದ ವಾಸವಾಗಿದ್ದರು. ಕಲೆ, ಸಾಹಿತ್ಯ ಆಸಕ್ತಿ ಬೆಳೆಸಿಕೊಂಡಿದ್ದ ಶ್ರೀನಿವಾಸ್ ಅವರು ಅನೇಕ ಪತ್ರಿಕೆಗಳಲ್ಲಿ ಕಲೆ, ಸಾಹಿತ್ಯದ ಬಗ್ಗೆ ಲೇಖನ ಬರೆದಿದ್ದರು. ಕಾವೆಂಶ್ರೀ ಅವರು ಹೋಟೆಲ್ ಉದ್ಯಮದ ಜೊತೆಗೆ ಕಲಾ ಸೇವೆಯಲ್ಲೂ ಸಹ ತೊಡಗಿದ್ದರು.
ಕಾವೆಂಶ್ರೀ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಕಲಾಸೇವೆ ನಡೆಸುತ್ತಾ ಬಂದಿದ್ದರು. ಇವರ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ 25 ವರ್ಷಗಳನ್ನು ಪೂರೈಸಿದೆ. ಕಾವೆಂಶ್ರೀ ಅವರ ಕಲಾಸೇವೆಯನ್ನು ಗುರುತಿಸಿ, ಹಲವು ಸಂಘಟನೆಗಳು, ಕಲಾಪ್ರೇಮಿಗಳು, ಗದುಗಿನ ತೋಂಟದಾರ್ಯ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸೇರಿದಂತೆ ಹಲವರು ಸನ್ಮಾನಿಸಿದ್ದರು.
Subscribe to Updates
Get the latest creative news from FooBar about art, design and business.
Previous Articleರಾಜ್ಯ ಸಂಚಾಲಕರಾಗಿ ಡಾ. ಸುಮಾ ಬಸವರಾಜ ಹಡಪದ ನೇಮಕ