ಉಡುಪಿ: ಸಾಹಿತಿ, ಹವ್ಯಾಸಿ ಪತ್ರಕರ್ತ, ಅಂಕಣ ಬರಹಗಾರ ಮರವಂತೆ ಪ್ರಕಾಶ್ ಪಡಿಯಾರ್ ದಿನಾಂಕ 05 ಆಗಸ್ಟ್ 2025ರ ಮಂಗಳವಾರದಂದು ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ನಿಧನರಾದರು. ಇವರಿಗೆ 64ವರ್ಷ ವಯಸ್ಸಾಗಿತ್ತು
ಸಾಹಿತ್ಯ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಪಡಿಯಾರ್, ಗ್ರಾಮೀಣ ಭಾಗದ ಸಮಸ್ಯೆ ಕುರಿತು ಬರೆದ ವರದಿಗಳು, ಆಡಳಿತ ವ್ಯವಸ್ಥೆಯ ಗಮನ ಸೆಳೆದು ಫಲಶ್ರುತಿ ಪಡೆಯುತ್ತಿದ್ದವು. ಹಲವಾರು ಸಂಘಸಂಸ್ಥೆಗಳು ಅವರನ್ನು ಸನ್ಮಾನಿಸಿದ್ದವು. ಕೆಲವು ವರ್ಷ ಕಾಲ ಜೀವವಿಮಾ ಏಜೆಂಟರಾಗಿ, ಮಾಧ್ಯಮಗಳಿಗೆ ಜಾಹೀರಾತು ಸಂಗ್ರಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅನಾರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದ ಪಡಿಯಾರ್, ಜೀವನ ನಿರ್ವಹಣೆ ಎದುರಿಸಲು ಅಸಹಾಯಕರಾಗಿ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಶಿರೂರು ಮೂಲಕ ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. . ಮೃತರು ಪತ್ನಿ, ಪುತ್ರಿಯರನ್ನು ಅಗಲಿದ್ದಾರೆ
Subscribe to Updates
Get the latest creative news from FooBar about art, design and business.