ಸುರತ್ಕಲ್ : ಯಕ್ಷ ಅಭಿಮಾನಿ ಬಳಗ ಟ್ರಸ್ಟ್ (ರಿ), ಸುರತ್ಕಲ್ ಇದರ ದಶಮ ಸಂಭ್ರಮ ಕಾರ್ಯಕ್ರಮವು ದಿನಾಂಕ 04 ಅಕ್ಟೋಬರ್ 2025ರಂದು ಸುರತ್ಕಲ್ ಇಲ್ಲಿನ ವಿದ್ಯಾದಾಯಿನಿ ಪ್ರೌಢ ಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಲಿದೆ.
ನಾವು ಸಮಾನ ಮನಸ್ಕರು ಸೇರಿ 2016 ರಲ್ಲಿ ಸ್ಥಾಪಿಸಿದ “ಯಕ್ಷ ಅಭಿಮಾನಿ ಬಳಗ, ಸುರತ್ಕಲ್” ಎಂಬ ಯಕ್ಷಗಾನ ಪ್ರೇಮಿಗಳ ಸಂಘಟನೆಯ ಸದಸ್ಯರು. ಈ ಸಂಘಟನೆಯು ಹೃದಯದಿಂದ ಯಕ್ಷಗಾನವನ್ನು ಆಸ್ವಾದಿಸುವ, ಕಲೆಯ ಗೌರವವನ್ನು ಉಳಿಸಿ ಬೆಳೆಸುವ ದೃಷ್ಟಿಕೊನದಿಂದ ಸ್ಥಾಪಿತವಾಗಿದೆ. ಕಲೆಯ ಬೆಳವಣಿಗೆ ಹಾಗೂ ಸಂಸ್ಕೃತಿಯನ್ನು ಸಾರಲು ಪ್ರಾಮಾಣಿಕ ಪ್ರಾಯತ್ನಗಳನ್ನು ಮಾಡುತ್ತಿರುವ ನಮ್ಮ ಸಂಘಟನೆಯು ಕಳೆದ ಒಂದು ದಶಕದ ಕಾಲದಲ್ಲಿ ಹಲವಾರು ಯಶಸ್ವಿ ಯಕ್ಷಗಾನ ಕಾರ್ಯಕ್ರಮಗಳನ್ನುಹಮ್ಮಿಕೊಂಡಿದೆ.
ಕಾರ್ಯಕ್ರಮಗಳ ಇತಿಹಾಸ: 2016ರಲ್ಲಿ “ಶ್ರೀ ದೇವಿ ಮಹಾತ್ಮೆ” ಎಂಬ ಯಕ್ಷಗಾನ ಪ್ರದರ್ಶನದೊಂದಿಗೆ ಸಂಘಟನೆಯ ಮೊದಲ ಹೆಜ್ಜೆ ಇಡಲಾಯಿತು. ಈ ಪ್ರದರ್ಶನವು ಜನಮನ ಗೆದ್ದು, ಯಕ್ಷಗಾನದ ಲೋಕದಲ್ಲಿ ನಮ್ಮ ಹೆಜ್ಜೆ ಗೆ ಘನತೆ ನೀಡಿತು. ಈ ಕಾರ್ಯಕ್ರಮದಲ್ಲಿ ಶ್ರೀ ಬಲಿಪ ನಾರಾಯಣ ಭಾಗವತರು, ಶ್ರೀ ಹರಿನಾರಾಯಣ ಬೈಪಡಿತ್ತಾಯ, ಶ್ರೀಮತಿ ಲೀಲಾವತಿ ಬೈಪಡಿತ್ತಾಯ, ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು, ದ. ಶ್ರೀ ತೋಡಿಕಾನ ವಿಶ್ವನಾಥ ಗೌಡ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. 2018ರಲ್ಲಿ “ಪಾರ್ಥ ಏವ ಧನುರ್ಧರಃ” ಎಂಬ ಪೌರಾಣಿಕ ಪ್ರಸಂಗವನ್ನು ಆಯೇಜಿಸಿ ಮತ್ತೊಮ್ಮೆ ಅಪಾರ ಯಶಸ್ಸು ಸಾಧಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಪುಂಡರೀಕಾಕ್ಷ ಉಪಾಧ್ಯಾಯ, ಶ್ರೀ ಪೆರುವಾಯಿ ನಾರಾಯಣ ಭಟ್, ದಿ. ಶ್ರೀ ಪದ್ಮನಾಭ ಶೆಟ್ಟಿಗಾರ್ (ಸಿದ್ದಕಟ್ಟೆ ) ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ಕರೊನಾ ಮಹಾಮಾರಿ ಕಾರಣದಂದ ಕೆಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಯಿತು. 2023ರಲ್ಲಿ “ಕಂಭ ಸಂಭವ – ಉಭಯಕಲ ಬಿಲ್ಲೋಜ” ಎಂಬ ಪೌರಾಣಿಕ ಪ್ರಸಂಗದ ಮೂಲಕ ನಾವು ವೇದಕೆಗೆ ಮರಳಿದ್ದು , ಈ ಪ್ರದರ್ಶನವೂ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಹಿಮ್ಮೇಳ, ಮುಮ್ಮೇಳ ಹಾಗೂ ನೇಪಥ್ಯ ಕಲಾವಿದರಿಗೆ ಗೌರವಿಸಿ ಸನ್ಮಾನಿಸಲಾಯಿತು. ಶ್ರೀ ಪಟ್ಲ ಸತೀಶ್ ಶೆಟ್ಟಿ , ಶ್ರೀ ವಿಷ್ಣು ಶರ್ಮ ವಾಟೆಪಡ್ಪು, ಶ್ರೀ ಗೋವಿಂದ ನಾಯ್ಕ ಕಾಟುಕುಕ್ಕೆ, ಶ್ರೀ ಸುರೇಶ ಪುರುಷ ಕುಪ್ಪೆಪದವು ಇವರುಗಳು ಗೌರವಾನ್ವಿತರಾಗಿ ಸನ್ಮಾನಿತರಾದರು. ಈವರೆಗೆ ಆಯೇಜಿಸಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ತಲಾ ರೂ. 25,000 ಗೌರವಧನವನ್ನು ಕಲಾವಿದರಿಗೆ ನೀಡಲಾಗಿದೆ.
ತರಬೇತಿ ಕಾರ್ಯಕ್ರಮಗಳು : ಮುಮ್ಮೇಳ ತರಬೇತಿ – ಗೌರವಾಧ್ಯಕ್ಷರಾದ ಶ್ರೀಮತಿ ಪೂರ್ಣಿಮ ಯತೀಶ್ ರೈ ಇವರ ಮಾರ್ಗದರ್ಶನದಲ್ಲಿ ಸುಮಾರು 50 ವಿದ್ಯಾರ್ಥಿಗಳು ಯಕ್ಷಗಾನ ನೃತ್ಯ ಕಲಿತಿದ್ದಾರೆ.
ಹಿಮ್ಮೇಳ ತರಗತಿ – ಕೋಶಾಧಿಕಾರಿಗಳಾದ ಡಾ. ಅನಂತ್ ಮೂರ್ತಿ ಅವರ ಸಂಚಾಲನೆಯಲ್ಲಿ , ಶ್ರೀ ಕೃಷ್ಣರಾಜ ಭಟ್ ನಂದಳಿಕೆ ಅವರ ನೇತೃತ್ವದಲ್ಲಿ ಸುಮಾರು 15 ವಿದ್ಯಾರ್ಥಿಗಳು ಚಂಡೆ, ಮದ್ದಳೆ ಮತ್ತು ಭಾಗವತಿಕೆ ಕಲಿಯುತ್ತಿದ್ದಾರೆ.
ಹೊಸ ಉಪಕ್ರಮಗಳು – ಈ ವರ್ಷದಿಂದ ಬಣ್ಣಗಾರಿಕೆ ಮತ್ತು ವೇಷಗಾರಿಕೆ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ತಾಳಮದ್ದಳೆ ಕೂಟಗಳನ್ನು ನಿರಂತರವಾಗಿ ನಡೆಸಿ, ಯುವಜನರಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತಿದ್ದೇವೆ. ಬಡ ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ನೀಡುವ ಯೇಜನೆಯನ್ನು ರೂಪಿಸಿದ್ದೇವೆ.
ಈ ವರ್ಷ ನಮಗೆ ಸಂತೋಷದ ವಿಷಯವೆಂದರೆ, ನಮ್ಮ ಯಕ್ಷ ಅಭಿಮಾನಿ ಬಳಗವು ಅಧಿಕೃತವಾಗಿ ಟ್ರಸ್ಟ್ (ರಿ.) ಆಗಿ ನೋಂದಾಯಿತವಾಗಿದೆ. ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಡೆಯುತ್ತಿರುವ ನಮ್ಮ ಚಟುವಟಿಕೆಗಳಿಗೆ ಇದು ಇನ್ನಷ್ಟು ಬಲವನ್ನು ನೀಡಿದೆ.
ದಶಮಾನೋತ್ಸವ (ದಶಮ ಸಂಭ್ರಮ – 2025) : ಈ ವರ್ಷ (2025) ಅಕ್ಟೋಬರ್ 4 ರಂದು, ನಮ್ಮ ದಶಮಾನೋತ್ಸವವನ್ನು “ದಶಮ ಸಂಭರಮ ” ಎಂಬ ಹೆಸರಿನಲ್ಲಿ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ “ಶುಭಂ ಕರೋತಿ ಕಲ್ಯಾಣಂ” ಎಂಬ ಪ್ರಸಂಗ ಆಯ್ಕೆ ಮಾಡಲಾಗಿದೆ. ಪ್ರಸಿದ್ದ ಯಕ್ಷಗಾನ ಕಲಾವಿದರು ಭಾಗವಹಿಸಿ ಅದ್ಭುತ ಪ್ರದರ್ಶನ ನೀಡಲಿದ್ದಾರೆ. ಜೊತೆಗೆ 5 ಹಿರಿಯ ಕಲಾವಿದರನ್ನು ಗೌರವಿಸುವ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಬಳಗದ ಸದಸ್ಯರಾಗಿರುವ ಹವ್ಯಾಸಿ ಕಲಾವಿದರಿಗೂ “ಶಿವ ಕಲ್ಯಾಣ” ಯಕ್ಷಗಾನ ಪ್ರದರ್ಶನದ ಅವಕಾಶ ನೀಡಲಾಗಿದೆ.
Subscribe to Updates
Get the latest creative news from FooBar about art, design and business.
ಯಕ್ಷ ಅಭಿಮಾನಿ ಬಳಗ ಟ್ರಸ್ಟ್ (ರಿ), ಸುರತ್ಕಲ್ ಇದರ ದಶಮ ಸಂಭ್ರಮ | ಅಕ್ಟೋಬರ್ 04
No Comments2 Mins Read
Previous Articleಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ವತಿಯಿಂದ ‘ಕಾವ್ಯ ಕಮ್ಮಟ’