ಮಂಗಳೂರು : ಶ್ರೀ ರಾಮಕೃಷ್ಣ ಮಠ ಮಂಗಳೂರು ಮತ್ತು ವಿಭಿನ್ನ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅರ್ಪಿಸುವ 14ನೇ ವರ್ಷದ ಯಕ್ಷ ಕಲಾ ಕಾಣಿಕೆ ‘ಯಕ್ಷ ಆಖ್ಯಾನಗಳ ಗುಚ್ಛ’ ದಿನಾಂಕ 08 ಡಿಸೆಂಬರ್ 2024ರಂದು ಮಧ್ಯಾಹ್ನ 2-00 ಗಂಟೆಗೆ ಮಂಗಳೂರಿನ ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.
ಪೂರ್ಣಚಂದ್ರ ಯಕ್ಷಗಾನ ಮಂಡಳಿ (ರಿ.) ಕುಂಭಾಶಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಸೀತಾ ಪರಿತ್ಯಾಗ’ ಮತ್ತು ‘ಅಕ್ರೂರ ಭಕ್ತಿ-ಗೋಕುಲ ನಿರ್ಗಮನ-ಕಂಸವಧೆ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ಪ್ರಸ್ತುತಗೊಳ್ಳಲಿದೆ.