ಬೆಂಗಳೂರು : ಶ್ರೀ ವಿನಾಯಕ್ ಭಟ್ಟ ಸಂಯೋಜನೆಯಲ್ಲಿ ದಕ್ಷಿಣೋತ್ತರ ಅತಿಥಿ ಕಲಾದಿಗ್ಗಜರ ಕೂಡುವಿಕೆಯಲ್ಲಿ ‘ಯಕ್ಷ ಭಾವ ಸಂಗಮ’ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 13 ಡಿಸೆಂಬರ್ 2025ರಂದು ರಾತ್ರಿ 10-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ದೇವಿದಾಸ್ ವಿರಚಿತ ‘ಭೀಷ್ಮ ಪರ್ವ’ ಪ್ರಸಂಗದ ಯಕ್ಷಗಾನದಲ್ಲಿ ಕೊಂಡದಕುಳಿ, ಥಂಡಿಮನೆ, ತೋಟಿಮನೆ, ಹಿಲ್ಲೂರು ಮಂಜು, ಪ್ರಶಾಂತ್ ಹೆಗಡೆ, ನಾಗೇಶ್ ಕುಳಿಮನೆ ಮತ್ತು ಆತ್ರೇಯ ಗಾಂವ್ಕರ್ ಭಾಗವಹಿಸಲಿದ್ದಾರೆ.

