ಕೋಟ : ಕೋಟ ‘ಅಹರ್ನಿಶ’ದಲ್ಲಿ ದಿನಾಂಕ 19 ಫೆಬ್ರವರಿ 2026ರಂದು ‘ಯಕ್ಷ ಗಾನ ವೈಭವ’ ಏರ್ಪಡಿಸಿದ ಪ್ರಸಿದ್ಧ ಪ್ರಸಂಗಕರ್ತ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು “ಯಕ್ಷಗಾನಾಭಿಮಾನಿಯಾಗಿ ನಿರಂತರ ಕಲೆಯನ್ನು ಆಸ್ವಾದಿಸುತ್ತಾ ಬಂದು ಮಕ್ಕಳಲ್ಲಿ ಪ್ರತಿಭೆಯನ್ನು ಹುರಿದುಂಬಿಸಿ, ರಂಗದಲ್ಲಿನ ಮಕ್ಕಳ ಬೆಳವಣಿಗೆಯನ್ನು ಕಂಡು ಸಂತೋಷ ಪಟ್ಟವರು ಹರೀಶ್ ಉರಾಳರು. ಕಲೆಯಿಂದ ಬೆಳೆಸಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವಲ್ಲಿ ಯಶಸ್ಸನ್ನು ಕಂಡವರು. ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕವಾಗಿ ಬೆಳಕು ಚೆಲ್ಲುವಲ್ಲಿ ಮನೆ ಮನಗಳನ್ನು ಬೆಳಗಿದ್ದೀರಿ” ಎಂದು ಶುಭ ಹಾರೈಸಿ ಪ್ರಸ್ತಾಪಿಸಿದರು.
ಪ್ರಸಿದ್ಧ ಹಿರಿಯ ಭಾಗವತ ರಾಘವೇಂದ್ರ ಮೈಯ್ಯ ಹಾಲಾಡಿ, ಕೋಟ ಶಿವಾನಂದ, ರಾಘವೇಂದ್ರ ಹೆಗಡೆ ಯಲ್ಲಾಪುರ, ಪಂಚಮಿ ವೈದ್ಯ, ಅನೂಪ ಉರಾಳ, ಅನುಷ ಉರಾಳ, ಹರೀಶ್ ಉರಾಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
