ಮಂಗಳೂರು : ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರ, ಅತ್ತಾವರ ಮಂಗಳೂರು ಇಲ್ಲಿನ ಭಾಗವತಿಕೆ ವಿದ್ಯಾರ್ಥಿಗಳಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪುರಸ್ಕೃತರು ಮತ್ತು ಯಕ್ಷಗುರುಗಳಾದ ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ ಇವರ ನಿರ್ದೇಶನದಲ್ಲಿ ‘ಯಕ್ಷ-ಗಾನಾರ್ಚನೆ’ ಕಾರ್ಯಕ್ರಮವು ದಿನಾಂಕ 13 ಫೆಬ್ರವರಿ 2026ರಂದು ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀ ರಾಮ ಸಾಲಿಯಾನ್ “ಯಕ್ಷಗಾನದ ಜೀವಾಳವಾದ ಭಾಗವತಿಕೆಯಲ್ಲಿ ತರಬೇತಿಯು ಸಾಂಪ್ರದಾಯಿಕ ಗಾಯನ ಶೈಲಿ, ತಾಳ-ಲಯ ಜ್ಞಾನ ಮತ್ತು ಸಾಹಿತ್ಯದ ಭಾವನೆಗಳನ್ನು ಅರ್ಥೈಸಿಕೊಂಡರೆ ಮುಂದೆ ಯಕ್ಷಗಾನ ಕ್ಷೇತ್ರದಲ್ಲಿ ಉತ್ತಮ ಭಾಗವತರಾಗಿ ಉತ್ತಮ ಹೆಸರ ಪಡೆಯಬಹುದು” ಎಂದು ಹೇಳಿದರು.

ಸಮಾರಂಭದಲ್ಲಿ ಉಮಾಮಹೇಶ್ವರ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಲಕ್ಷೀಶ ಉಪಾಧ್ಯಾಯರು, ಉಮಾಮಹೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರಾದ ಶ್ರಿ ಕೇಶವ ಮಳಲಿ, ಉಮಾಮಹೇಶ್ವರ ಯಕ್ಷಗಾನ ಕೇಂದ್ರದ ಅಧ್ಯಕ್ಷರಾದ ಶ್ರಿ ಜಯದೇವ, ಗೌರವಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ರೈಯವರು ಉಪಸ್ಥಿತರಿದ್ದರು. ಶ್ರೀ ದೇವಿಯವರು ಪ್ರಾರ್ಥನೆಗೈದರು. ಶ್ರೀ ಪ್ರಸಾದಣ್ಣರವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ಯಕ್ಷ ಗಾನಾರ್ಚನೆ’ ಕಾರ್ಯಕ್ರಮ ನಡೆಯಿತು.
